ಜಯ ಮಂಗಲಂ ಬಿಜೆಪಿಗೆ ಪ್ರಯಾಸದ ಗೆಲುವು

0

ಬಿಜೆಪಿಗೆ ಪ್ರಯಾಸದ ಗೆಲುವು

ಬೆಳಗಾವಿ – ಕೊನೆಯ ಕ್ಷಣದವರೆಗೂ ತುದಿಗಾಲ ಮೇಲೆ ನಿಲ್ಲಿಸಿದ್ದ ಬೆಳಗಾವಿ ಲೋಕಸಭಾ ಚುನಾವಣೆಯಲ್ಲಿ ಅಂತೂ ಭಾರತೀಯ ಜನತಾಪಾರ್ಟಿ ಜಯಗಳಿಸಿದೆ.

ಬಿಜೆಪಿ ಅಭ್ಯರ್ಥಿ ಮಂಗಲ ಅಂಗಡಿ ಅತ್ಯಲ್ಪ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಆರಂಭದಿಂದಲೂ ಹಾವು -ಏಣಿ ಆಟದಂತೆ ಕಾಂಗ್ರೆಸ್ – ಬಿಜೆಪಿ ಮಧ್ಯೆ ಪೈಪೋಟಿ ನಡೆಯಿತು. ಆರಂಭದಲ್ಲಿ ಕಾಂಗ್ರೆಸ್, ಪೂರ್ವಾರ್ಧದಲ್ಲಿ ಬಿಜೆಪಿ, ಉತ್ತರಾರ್ಧದಲ್ಲಿ ಮತ್ತೆ ಕಾಂಗ್ರೆಸ್ ಮುನ್ನಡೆ ಸಾಧಿಸಿತು. ಆದರೆ ಅಂತಿಮವಾಗಿ ಬಿಜೆಪಿ ಜಯಭೇರಿ ಭಾರಿಸುವಲ್ಲಿ ಯಶಸ್ಸಿಯಾಯಿತು.