ಬೆಳಗಾವಿ: 8 ದಿನದಲ್ಲಿ ತಂದೆ, ತಾಯಿ, ಮಗ ಕೊರೋನಾಕ್ಕೆ ಬಲಿ

0

ಬೆಳಗಾವಿ – ಕೊರೋನಾದಿಂದಾಗಿ 8 ದಿನದ ಅಂತರದಲ್ಲಿ ತಂದೆ, ತಾಯಿ, ಮಗ ಸಾವಿಗೀಡಾಗಿದ್ದಾರೆ.

ಬೆಳಗಾವಿಯ ಬಾಕ್ಸೈಟ್ ರಸ್ತೆಯ ವಿದ್ಯಾನಗರದ ನಿವಾಸಿಗಳಾದ ಪಾರ್ವತಿ ಕೃಷ್ಣಾ ತೇರಗಾಂವ( 76),  ನಿವೃತ್ತ  ಉಪ ನೊಂದನಾಧಿಕಾರಿ ಕೃಷ್ಣಾ ಭೀಮಪ್ಪ ತೇರಗಾಂವ  (80) ಮತ್ತು ಪ್ರಶಾಂತ ಕೃಷ್ಣಾ ತೇರಗಾಂವ್ (49) ಮೃತರಾದವರು.

ಪಾರ್ವತಿ ಏ.24ರಂದು, ಕೃಷ್ಣಾ ಏ. 29ರಂದು ಹಾಗೂ ಪ್ರಶಾಂತ ಮೇ 3ರಂದು ಮೃತರಾದರು. ಕೃಷ್ಣಾ ಹಾಗೂ ಪ್ರಶಾಂತ ಸಬ್ ರಜಿಸ್ಟ್ರಾರ್ ಕಚೇರಿ ಕನ್ಸಲ್ಟಂಟ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಅವರ ಸೇವೆಯಿಂದಾಗಿ ಅಪಾರ ಜನರ ಪ್ರೀತಿ ಗಳಿಸಿದ್ದರು.