ಕದ್ದು ಚಿನ್ನ ಹೊಟ್ಟೆಯಲ್ಲಿ ಇಟ್ಟುಕೊಂಡ ಭೂಪ: ಕಾರ್ಯಾಚರಣೆ ಬಳಿಕ 35 ಗ್ರಾಂ ಚಿನ್ನ ಪತ್ತೆ..!

0

ಸುಳ್ಯ: ಸುಳ್ಯದ ಮೋಹನ್ ಜುವೆಲ್ಲರಿ ಮಾರ್ಟ್ ನಿಂದ ಚಿನ್ನಾಭರಣ ಕದ್ದು ಪರಾರಿಯಾಗಿದ್ದ ಕಿಡಿಗೇಡಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಸುಳ್ಯ ಮತ್ತು ಪುತ್ತೂರಿನಲ್ಲಿ ಚಿನ್ನ ಕಳವು ಪ್ರಕರಣವನ್ನು ಭೇದಿಸಿರುವ ಸುಳ್ಯ ಪೊಲೀಸರು ತಂಗಚ್ಚನ್ ಮತ್ತು ಶಿಬು ಎಂಬವರನ್ನು ಬಂಧಿಸಿದ್ದರು.
ಕಳ್ಳವು ಮಾಡಿದ ಆರೋಪಿಯ ಹೊಟ್ಟೆಯಲ್ಲಿ  35 ಗ್ರಾಂ ಚಿನ್ನ ಪತ್ತೆಯಾಗಿದೆ.
ಇದರಲ್ಲಿ ಶಿಬು ಎಂಬಾತನಿಗೆ ಮೇ.29ರಂದು ರಾತ್ರಿ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಿಸಿ ಎಕ್ಸರೇ ತೆಗೆದಾಗ ಆತನ ಹೊಟ್ಟೆಯಲ್ಲಿ  ಇರುವುದು ಕಂಡು ಬಂದಿತ್ತು.

ಇಂದು (ಮೇ.30) ಬೆಳಿಗ್ಗೆ ವೈದ್ಯರುಗಳು ಕಾರ್ಯಾಚರಣೆ ನಡೆಸಿ ಆರೋಪಿಯ ಹೊಟ್ಟೆಯಿಂದ 35 ಗ್ರಾಂ ಚಿನ್ನಾಭರಣಗಳನ್ನು ಹೊರ ತೆಗೆದಿದ್ದಾರೆ. ಉಂಗುರ, ಓಲೆ, ಸೇರಿದಂತೆ 30 ಕ್ಕೂ ಅಧಿಕ ಆಭರಣಗಳು ಹೊರ ಬಂತು.

ಕದ್ದ ಚಿನ್ನವನ್ನು ಆತ ನುಂಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆಸ್ಪತ್ರೆಯಿಂದ ಬಿಡುಗಡೆ ಮಾಡಿದ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿದಲಾಗಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.////

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');