ವೈದ್ಯರ ಕೊರತೆ ಹೇಗೆ ನಿಭಾಯಿಸುತ್ತಿರಿ, ಕೊವೀಡ್ ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿವೆ: ಕುಟುಕಿದ ಶಾಸಕಿ ಹೆಬ್ಬಾಳ್ಕರ್

0

ಬೆಳಗಾವಿ; ಕೋವಿಡ್ ನಿರ್ವಹಣೆ ದೆಹಲಿ, ಬೆಂಗಳೂರು ಸರ್ಕಾರ ಸಂಪೂರ್ಣ ವಿಫಲವಾಗಿದೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕುಟುಕಿದ್ದಾರೆ.

ಇಲ್ಲಿನ  ಕಾಂಗ್ರೆಸ್ ಭವನದಲ್ಲಿ ಮಾಧ್ಯಮದವರೊಂದಿಗೆ ಮತನಾಡಿದ ಅವರು, ಗ್ರಾಮೀಣ ಭಾಗದ ಪ್ರತಿಯೊಂದ ಮನೆ ಮನೆಗೆ ಟೆಸ್ಟಿಂಗ್ ಆಗಬೇಕು, ವ್ಯಾಕ್ಸಿನೇಷನ್‌ ಆಗಬೇಕು. ಬೆಳಗಾವಿ ಜಿಲ್ಲೆಯಲ್ಲಿ ನಿತ್ಯ 7 ಸಾವಿರ ಟೆಸ್ಟಿಂಗ್ ಮಾಡಿಸಿ ಅಂತಾ ಸರ್ಕಾರ ಹೇಳಿದೆ. ಆದರೆ,  ಬೆಳಗಾವಿಯಲ್ಲಿ ಸ್ವ್ಯಾಬ್  ಹೆಚ್ಚಿಸಬೇಕು ಎಂದು ಆಗ್ರಹಿಸಿದರು.

ಬೆಳಗಾವಿಯಲ್ಲಿ ವೈದ್ಯರೇ ಇಲ್ಲ, ಪ್ರಾಥಮಿಕ ಆಸ್ಪತ್ರೆಗಳು ಸೋರುತ್ತಿದೆ. ಸಾಲಸೋಲ ಮಾಡಿ ಜನ ಖಾಸಗಿ ಆಸ್ಪತ್ರೆಗೆ ಜನರು ದಾಖಲಾಗ್ತಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರ ಅಪ್‌ಗ್ರೇಡ್ ಮಾಡಿ ಅಂತಾ ಐದು ಬಾರಿ ಸರ್ಕಾರಕ್ಕೆ ಮನವಿ ಮಾಡಿದ್ದೇನೆ ಯಾವುದೂ ಪ್ರಯೋಜನವಾಗಿಲ್ಲ ಎಂದು ಸರಕಾರದ ನಡೆಯ ವಿರುದ್ಧ ಹರಿಹಾಯ್ದರು.

ವೈದ್ಯರ, ಟೆಕ್ನಿಷಿಯನ್ಸ್ ಗಳ ಕೊರತೆ ಇದ್ದು ವೆಂಟಿಲೇಟರ್‌ಗಳು ಖಾಲಿ ಇವೆ. ರಾಜ್ಯ ಸರ್ಕಾರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ನವರು ಮಾತಾಡಿದರೆ ರಾಜಕಾರಣ ಅಂತಾರೆ. ವ್ಯಾಕ್ಸಿನೇಷನ್‌ ಬಗ್ಗೆ ವಿರೋಧಿಸಿ ಕಾಂಗ್ರೆಸ್ ನವರು ಮಾತಾಡಿದರೆ ತಂದು ತೋರಿಸಿ ಎಂದು ಸವಾಲ್ ಹಾಕಿದರು.

ಕೋವಿಡ್ ಎರಡನೇ ಅಲೆ ತಡೆಯಲು ತಯಾರಿ ಮಾಡಲೇ ಇಲ್ಲ. ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಅವರ ಪಕ್ಷದ ಆಂತರಿಕ ವಿಚಾರ.ಆ ಬಗ್ಗೆ ನಾನು ಮಾತನಾಡುವುದಿಲ್ಲ. ಸರ್ಕಾರ ತನ್ನ ವೈಫಲ್ಯ ಮುಚ್ಚಿಡಲು ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬೆಡ್ ಗೆ ಒಬ್ಬ ಮಂತ್ರಿ, ಆಕ್ಸಿಜನ್‌ಗೆ ಒಬ್ಬ ಮಂತ್ರಿ, ಸ್ಮಶಾನಕ್ಕೆ ಒಬ್ಬ ಮಂತ್ರಿ ಮಾಡಿದರೂ ರಾಜ್ಯದಲ್ಲಿ ಕೊರೋನಾ ಸಾವಿನ ಸರಣಿ ಮುಂದುವರೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.////

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');