100 ರ ಗಡಿಯತ್ತ ಸಾಗಿದ ಡೀಸೆಲ್ ಬೆಲೆ; ಮತ್ತೆ ತೈಲ ದರ ಏರಿಕೆ

0

ಹೊಸದಿಲ್ಲಿ: ದೇಶದ ಹಲವು ಭಾಗಗಳಲ್ಲಿ ಪೆಟ್ರೋಲ್‌ ದರ ಲೀಟರಿಗೆ ಈಗಾಗಲೇ ₹ 100ರ ಗಡಿ ದಾಟಿದ್ದು, ಡೀಸೆಲ್‌ ದರವೂ ಅದೇ ದಿಕ್ಕಿನಲ್ಲಿ ಸಾಗಿದೆ. ರಾಜಸ್ಥಾನದ ಕೆಲವೆಡೆ ಡೀಸೆಲ್‌ ದರ ಲೀಟರಿಗೆ ₹ 98ರ ಗಡಿ ದಾಟಿದೆ.

ದೇಶದಾದ್ಯಂತ ಪೆಟ್ರೋಲ್‌, ಡೀಸೆಲ್‌ ದರವನ್ನು ಸತತವಾಗಿ ಹೆಚ್ಚಿಸಲಾಗುತ್ತಿದೆ. ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಸೋಮವಾರವೂ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಏರಿಕೆ ಮಾಡಿವೆ. ಪೆಟ್ರೋಲ್‌ ದರ 29 ಪೈಸೆ ಮತ್ತು ಡೀಸೆಲ್‌ ದರ 26 ಪೈಸೆ ಹೆಚ್ಚಿಸಿವೆ.

ಇದರಿಂದಾಗಿ ರಾಜಸ್ಥಾನದ ಶ್ರೀಗಂಗಾನಗರ ಜಿಲ್ಲೆಯಲ್ಲಿ ಡೀಸೆಲ್‌ ದರ ₹ 98.08ಕ್ಕೆ ಏರಿಕೆ ಆಗಿದೆ. ಇಲ್ಲಿ ಪೆಟ್ರೋಲ್‌ ದರವು ದೇಶದಲ್ಲಿಯೇ ಗರಿಷ್ಠ, ಅಂದರೆ ಲೀಟರಿಗೆ ₹ 105.24ರಷ್ಟಿದೆ.

ಸ್ಥಳೀಯ ಮಾರಾಟ ತೆರಿಗೆಗೆ ಅನುಗುಣವಾಗಿ ರಾಜ್ಯದಿಂದ ರಾಜ್ಯಕ್ಕೆ ದರದಲ್ಲಿ ವ್ಯತ್ಯಾಸ ಆಗುತ್ತದೆ. ರಾಜಸ್ಥಾನದಲ್ಲಿ ಪೆಟ್ರೋಲ್‌ ಮೇಲಿನ ಮೌಲ್ಯವರ್ಧಿತ ತೆರಿಗೆಯು (ವ್ಯಾಟ್‌) ದೇಶದಲ್ಲಿಯೇ ಗರಿಷ್ಠ ಮಟ್ಟದಲ್ಲಿದೆ.

ಪೆಟ್ರೋಲ್‌ ದರವು ರಾಜಸ್ಥಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ ಹಲವು ನಗರಗಳಲ್ಲಿ ಈಗಾಗಲೇ ₹ 100ರ ಗಡಿ ದಾಟಿದೆ. ಮೇ 4ರಿಂದ ಇಲ್ಲಿಯವರೆಗೆ 16 ಬಾರಿ ಇಂಧನ ದರ ಹೆಚ್ಚಿಸಲಾಗಿದೆ. ಇದರಿಂದ ಲೀಟರ್ ಪೆಟ್ರೋಲ್‌ ದರ ₹ 3.83ರಷ್ಟು ಮತ್ತು ಡೀಸೆಲ್‌ ದರ ₹ 4.42ರಷ್ಟು ಏರಿಕೆಯಾಗಿದೆ.

ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ₹ 94.23 ಇದ್ದರೇ, ಡೀಸೆಲ್ ಬೆಲೆ  ₹ 85.15 ಇದೆ. ಬೆಂಗಳೂರಿನಲ್ಲಿ ಪೆಟ್ರೋಲ್ ₹ 97.37 ಹಾಗೂ ಡೀಸೆಲ್ ₹ 90.27 ದರವಿದೆ. ಮುಂಬೈನಲ್ಲಿ ಪೆಟ್ರೋಲ್ ₹ 100.47 ಹಾಗೂ ಡೀಸೆಲ್   ₹ 92.45 ಇದೆ.////

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');