ಪತ್ನಿಯ ಅನೈತಿಕ ಸಂಬಂಧ ಬೇಸತ್ತು ಪತಿ ಆತ್ಮಹತ್ಯೆಗೆ ಶರಣು

0

ಹುಬ್ಬಳ್ಳಿ: ಪತ್ನಿಯ ಅನೈತಿಕ ಸಂಬಂಧ ಬೇಸತ್ತು ಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ  ಸೋಮವಾರ ಮದ್ಯಾಹ್ನ ಹುಬ್ಬಳ್ಳಿಯ ಅಂಚಟಗೇರಿ ಗ್ರಾಮದಲ್ಲಿ ಘಟನೆ ನಡೆದಿದೆ.

ಬೂದಪ್ಪ ಕೋರಿ (42) ಮೃತ ವ್ಯಕ್ತಿ. ಎರಡು ಮಕ್ಕಳ ತಾಯಿಯಾದರೂ ಪರ ಪುರುಷನ ಜೊತೆ ಪತ್ನಿ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು.  ಈ ಅಸುಹೆ ಕೆಲಸವನ್ನು ಇಲ್ಲಿಗೆ ನಿಲ್ಲಿಸು ಎಂದು ತಿಳಿ ಹೇಳಿದರು ಪತ್ನಿ ತನ್ನ ಹಳೇ ಚಾಳಿ ಮುಂದುವರೆಸಿದ್ದಳು ಇದರಿಂದ ಮನನೊಂದು ಬೂದಪ್ಪ ಕೋರಿ ಡೆತ್ ನೋಟ್ ಬರೆದಿಟ್ಟು  ನೇಣಿಗೆ ಕೊರಳೊಡ್ಡಿದ್ದಾನೆ.

ಬೂದಪ್ಪನ ಪತ್ನಿ ಪಾರ್ವತಿ ಹುಬ್ಬಳ್ಳಿಯ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಅನೈತಿಕ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ಬೂದಪ್ಪ ಕಳೆದ ಎರಡು ವರ್ಷಗಳ ಹಿಂದೆ ಪತ್ನಿಯನ್ನು ಕೆಲಸದಿಂದ ಬಿಡಿಸಿದ್ದನು. ಇದಾದ ಬಳಿಕ ಇಬ್ಬರ ನಡುವೆ ಜಗಳ ಕಾಯಂ ಆಗಿತ್ತು.

ಇನ್ನು ಪಾರ್ವತಿ ಗಂಡನ ಮನೆ ಬಿಟ್ಟು ತವರು ಮನೆಗೆ ಹೋಗಿದ್ದಳು. ಇದರ ನಡುವೆ ಪಾರ್ವತಿ ಕುಟುಂಬ ಬೂದಪ್ಪನ ವಿರುದ್ಧ ಕಿರುಕುಳ ನೀಡಿದ ಆರೋಪ ಕೇಳಿಬಂದಿದ್ದು ಇದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಬೂದಪ್ಪನ ಕುಟುಂಬಸ್ಥರು ದೂರು ನೀಡಿದ್ದಾರೆ.

ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.////

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');