ಸಂಕಷ್ಟದಲ್ಲಿರುವವರಿಗೆ ನಯಾ ಪೈಸೆ ಪರಿಹಾರ ಸಿಕ್ಕಿಲ: ಡಿಕೆಶಿ ಗದಾಪ್ರಹಾರ

0

ಹಾವೇರಿ: “ಕೊರೋನಾದಿಂದ ಸಂಕಷ್ಟಕ್ಕಿಡಾದ ಜನರಿಗೆ  ಪರಿಹಾರ ನೀಡಲು ಸಿಎಂ ಅವರು 1250 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಆದರೆ,  ಯಾರೊಬ್ಬರಿಗೂ ನಯಾ ಪೈಸೆ ಪರಿಹಾರ ಸಿಕ್ಕಿಲ,   ಜನತೆಗೆ ಮೂಗಿಗೆ ಪರಿಹಾರ ವಾಸನೆ ತೋರಿಸಿದ್ದಾರೆ ಅಷ್ಟೆ” ಎಂದು ಕೆಪಿಸಿಸಿ ಅದ್ಯಕ್ಷ ಡಿಕೆ ಶಿವಕುಮಾರ್ ಗದಾಪ್ರಹಾರ ನಡೆಸಿದ್ದಾರೆ.

ರಾಣೆಬೇನ್ನೂರ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ಧಿಗೋಷ್ಠಿಯಲ್ಲಿ  ಅವರು ಮಾತನಾಡಿ, ಜನತೆಗೆ ಸೌಲಭ್ಯ ಸುರಕ್ಷತೆ ಕಲ್ಪಿಸುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷದಿಂದ ಹುಬ್ಬಳ್ಳಿ-ಧಾರವಾಡ, ದಾವಣಗೆರೆ , ಹಾವೇರಿ ಜಿಲ್ಲೆಗಳಿಗೆ ಭೇಟಿ ನೀಡಿದ್ದೆವೆ.  ಈ ಪ್ರವಾಸ ರಾಜ್ಯಾದ್ಯಂತ ನಡೆಸಲಾಗುತ್ತಿದೆ ನಮ್ಮಗೆ ನಾಡಿನ ಜನತೆ ರಕ್ಷಣೆ ಮುಖ್ಯ.

ಎಲ್ಲಾ ಸಮಾಜದ ಮುಖಂಡರು,  ಆಶಾ ಕಾರ್ಯಕರ್ತೆರು,  ರೈತರನ್ನು ಭೇಟಿ ಮಾಡಿ ಸಮಸ್ಯೆಗಳನ್ನು ಆಲಿಸಲಾಗುತ್ತಿದೆ ಅವರಿಗೆ ಸೂಕ್ತ ಸೌಲಭ್ಯ ಕಲ್ಪಿಸುವ ಜವಾಬ್ದಾರಿ ತೆಗೆದುಕೊಳ್ಳಲಾಗುತ್ತಿದೆ.

ಕೋಟ್ಯಾಂತರ ತರಕಾರಿ ನಾಶವಾಗಿದೆ. ರೈತರ ಬಗ್ಗೆ ಕಾಳಜಿ ಮಾಡಿದ್ದರೇನು? ಸಂಕಷ್ಟದಲ್ಲಿರುವ ಜನರ ಕಣ್ಣಿರು ವರೆಸಬೇಕಿರುವ  ಆಡಳಿತ ಪಕ್ಷ ಮನೆಯಲ್ಲಿ ಕುಳಿತ್ತಿದ್ದಾರೆ ಎಂದು ಮೂಲಕ ಕಮಲ ಶಾಸಕರಿಗೆ ತಿವಿದರು.

ರೈತರು ಬೆಳೆದ ಹೂ, ತರಕಾರಿಯನ್ನು ಸರ್ಕಾರವೇ ಖರೀದಿಸಲಿ. ಯಾಕೆಂದರೆ ಮೂರು ನಾಲ್ಕು ತಿಂಗಳ ಬೆಳೆದ ಬೆಳೆ ಮಾರಾಟ ಆಗದಿದ್ದರೆ ಕೇವಲ  2 ಗಂಟೆಯಲ್ಲಿ ನಾಶವಾಗುತ್ತದೆ ಇದರ ನಷ್ಟವನ್ನು ಯಾರು ಭರಿಸಬೇಕು ನೀವೇ ಹೇಳಿ ಎಂದು ಕಿಡಿಕಾರಿದರು.////

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');