ಇದೇ ಮೊದಲ ಬಾರಿಗೆ ಹೈಕೋರ್ಟ್ ಕಲಾಪದ ನೇರಪ್ರಸಾರ : ಕರ್ನಾಟಕ ಹೈಕೋರ್ಟ್ ನಿಂದ ಐತಿಹಾಸಿಕ ಕ್ರಮ

0

ಬೆಂಗಳೂರು: ರಾಜ್ಯದ ಹೈಕೋರ್ಟ್ ನಿಂದ ಮಹತ್ವದ ಐತಿಹಾಸಿಕ ನಿರ್ಧಾರವನ್ನು ಮುಖ್ಯ ನ್ಯಾಯಮೂರ್ತಿಗಳು ಕೈಗೊಂಡಿದ್ದಾರೆ. ಇದೇ ಮೊದಲ ಬಾರಿಗೆ ರಾಜ್ಯದ ಜನರು ಮನೆಯಲ್ಲಿಯೇ ಕುಳಿತು ಹೈಕೋರ್ಟ್ ಕಲಾಪವನ್ನು ನೇರಪ್ರಸಾರದ ಮೂಲಕ ವೀಕ್ಷಿಸುವಂತ ವ್ಯವಸ್ಥೆ ಮಾಡಲಾಗಿದೆ.

ರಾಜ್ಯ ಹೈಕೋರ್ಟ್ ಹಾಲ್ ನಂ.1ರಲ್ಲಿ ನಡೆಯುವಂತ ಕಲಾಪಗಳ ನೇರ ಪ್ರಸಾರವನ್ನು ಯೂಟ್ಯೂಬ್ ಮೂಲಕ, ಇನ್ಮುಂದೆ ನೀವು ಮನೆಯಲ್ಲಿಯೇ ಕುಳಿತು ವೀಕ್ಷಿಸಬಹುದಾಗಿದೆ.

ಈ ಕುರಿತಂತೆ ರಾಜ್ಯ ಹೈಕೋರ್ಟ್ ನ ಮುಖ್ಯನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾರ ಅವರು ಐತಿಹಾಸಿಕ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಜನಸಾಮಾನ್ಯರಿಗೆ ಹೈಕೋರ್ಟ್ ಕಲಾಪವನ್ನು ನೇರವಾಗಿ ವೀಕ್ಷಿಸುವಂತ ನಿರ್ಧಾರವನ್ನು ಕೈಗೊಂಡಿದ್ದಾರೆ. ಇಂದು ಹೈಕೋರ್ಟ್ ಹಾಲ್ ನಂ.1ರ ಕಲಾಪವನ್ನು ಯೂಟ್ಯೂಬ್ ಮೂಲಕ, ಪ್ರಾಯೋಗಿಕವಾಗಿ ನೇರ ಪ್ರಸಾರ ಮಾಡಲಾಗಿದೆ.

ಇದೇ ಮೊದಲ ಬಾರಿಗೆ ಹೈಕೋರ್ಟ್ ಕಲಾಪದ ನೇರ ಪ್ರಸಾರ:

ಇದೇ ಮೊದಲ ಬಾರಿಗೆ ಹೈಕೋರ್ಟ್ ಕಲಾಪದ ನೇರ ಪ್ರಸಾರವನ್ನು ಮಾಡಲಾಗಿದೆ. ಈಗಾಗಲೇ ಮಧ್ಯಪ್ರದೇಶ ಹೈಕೋರ್ಟ್, ಸುಪ್ರೀಂ ಕೋರ್ಟ್ ಕೂಡ ಕಲಾಪದ ನೇರಪ್ರಸಾರದ ಚಿಂತನೆ ನಡೆಸಿದೆ. ಇದರ ಮಧ್ಯೆ ರಾಜ್ಯ ಹೈಕೋರ್ಟ್ ಕಲಾಪವನ್ನು ನೇರ ಪ್ರಸಾರದ ಮೂಲಕ, ಜನಸಾಮಾನ್ಯರೂ ವೀಕ್ಷಿಸುವಂತ ವ್ಯವಸ್ಥೆ ಮಾಡಿದೆ.

ಇಂದಿನಿಂದ ಕರ್ನಾಟಕ ಉಚ್ಛ ನ್ಯಾಯಾಲಯದ ಹಾಲ್ ನಂ.1ರ ಕೋರ್ಟ್ ಕಲಾಪದ ಪ್ರಾಯೋಗಿಕ ನೇರ ಪ್ರಸಾರ ಆರಂಭಗೊಂಡಿದ್ದು, ಜನ ಸಾಮಾನ್ಯರು ಯೂಟ್ಯೂಬ್ ನಲ್ಲಿ ಹೈಕೋರ್ಟ್ ಹಾಲ್ ನಂ.1ರ ಕಲಾಪವನ್ನು ನೇರ ಪ್ರಸಾರದ ಮೂಲಕ ವೀಕ್ಷಿಸಬಹುದಾಗಿದೆ.////

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');