ಕಿತ್ತೂರು: ಸತೀಶ ಜಾರಕಿಹೊಳಿ ಜನ್ಮದಿನದ ಅಂಗವಾಗಿ 500 ಕೊರೊನಾ ವಾರಿಯರ್ಸ್ ಗಳಿಗೆ ಸ್ಯಾನಿಟೈಸರ್, ಮಾಸ್ಕ್ ವಿತರಣೆ

0

ಚನ್ನಮ್ಮನ ಕಿತ್ತೂರು: ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ ಜಾರಕಿಹೊಳಿ ಅವರ ಜನ್ಮದಿನದ ಅಂಗವಾಗಿ ಕಾಂಗ್ರೆಸ್ ಮುಖಂಡ ಹಾಗೂ ಉದ್ಯಮಿ ಹಬೀಬ ಶಿಲೇದಾರ ಅವರು ಚನ್ನಮ್ಮನ ಕಿತ್ತೂರಿನ ಕಲ್ಮಠದ ಆವರಣದಲ್ಲಿ ಇಂದು ಕೊರೊನಾ ವಾರಿಯರ್ಸ್ ಗಳಿಗೆ ಮಾಸ್ಕ್, ಸಾನಿಟೈಸರ್ ಮತ್ತು ಹಣ್ಣಿನ ಕಿಟ್ ಗಳನ್ನು ವಿತರಿಸಿದರು.

ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸ್ಥಳದಲ್ಲೇ ಕೇಕ್ ಕತ್ತರಿಸುವ ಮೂಲಕ ಸರಳವಾಗಿ ಸತೀಶ ಅವರ ಜನ್ಮದಿನ ಆಚರಿಸಲಾಯಿತು.

500 ಕೊರೊನಾ ವಾರಿಯರ್ಸ್ ಗಳಿಗೆ ಸ್ಯಾನಿಟೈಸರ್ ಹಾಗೂ ಮಾಸ್ಕ್ ಮತ್ತು ನೂರು ಜನ ಕೋವಿಡ್ ಸೋಂಕಿತರಿಗೆ ಹಣ್ಣಿನ ಕಿಟ್ ಗಳನ್ನು ವಿತರಿಸಲಾಯಿತು.

ಕಿತ್ತೂರು ತಹಶೀಲ್ದಾರ ಸೋಮಲಿಂಗ ಹಾಲಗಿ, ಸಿಪಿಐ, ಪಿಎಸ್ಐ, ವೈದ್ಯಾಧಿಕಾರಿಗಳು, ಶುಶ್ರೂಷಕಿಯರು, ಪೊಲೀಸರು, ಪತ್ರಕರ್ತರು ಸೇರಿ ಇನ್ನಿತರರು ಇದ್ದರು./////

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');