ವಿಕಲಚೇತನರು ಮತ್ತು ಆರೈಕೆದಾರರು ಲಸಿಕೆ ಹಾಕಿಸಿಕೊಳ್ಳಲು ಮನವಿ

0

ಬೆಳಗಾವಿ:  ಜಿಲ್ಲೆಯಲ್ಲಿ ಕೊರೋನಾ ವ್ಯಾಪಕವಾಗಿ ವಿಸ್ತಾರಗೊಳ್ಳುತ್ತಿದ್ದು,  ಗ್ರಾಮೀಣ ಪ್ರದೇಶಗಳಲ್ಲಿಯೂ  ಸೋಂಕು ದಾಪುಗಾಲು ಇಟ್ಟಿದೆ.   ಜಿಲ್ಲೆಯ ಎಲ್ಲಾ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿರುವ 18 ವರ್ಷ ಮೇಲ್ಪಟ್ಟ ಎಲ್ಲಾ ವಿಕಲಚೇತನರು ಮತ್ತು ಆರೈಕೆದಾರರು ಕೊವಿಡ್ ಗೆ ಸಂಬಂಧಿಸಿದ ವ್ಯಾಕ್ಸಿನ್ ಹಾಕಿಸಿಕೊಳ್ಳುವುದು ಅಗತ್ಯವಾಗಿರುತ್ತದೆ.

ಕಾರಣ 18 ರಿಂದ 44 ವರ್ಷದೊಳಗಿನ ಎಲ್ಲಾ ವಿಕಲಚೇತನರು ಅo- WIಓ ಚಿಠಿಠಿ ನಲ್ಲಿ ತಮ್ಮ ಹೆಸರು ನೊಂದಾಯಿಸಿಕೊಂಡು, ಹಾಗೂ 45 ವರ್ಷ ಮೇಲ್ಪಟ್ಟ ವಯಸ್ಸಿನವರು ನೇರವಾಗಿ ಹತ್ತಿರದ  ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆ ಅಥವಾ ಜಿಲ್ಲಾ ಆಸ್ಪತ್ರೆಯಲ್ಲಿ ನೊಂದಣಿ ಮಾಡಿಸಿಕೊಂಡು ಲಸಿಕೆ  ಹಾಕಿಸಿಕೊಳ್ಳುವಂತೆ ವಿಕಲಚೇತನರು ಮತ್ತು ಆರೈಕೆದಾರರಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ನಾಮದೇವ ಬಿಲ್ಕರ್ ಮನವಿ ಮಾಡಿಕೊಂಡಿದ್ದಾರೆ.

ಈಗಾಗಲೇ ಪ್ರಕಟಣೆಯ ಹೊರಡಿಸಿರುವಂತೆ,  ವಿಕಲಚೇತನರು ಮತ್ತು ಆರೈಕೆದಾರರಿಗೆ ಲಸಿಕೆ ಹಾಕಿಸುವ ಕ್ರಮಕ್ಕಾಗಿ ಹಾಗೂ ತಮ್ಮ ಸಹಾಯಕ್ಕಾಗಿ  ಆಯಾ ತಾಲೂಕಿನಲ್ಲಿ ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿರುವ  ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಯ  ಸಹಾಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು / ಹಿರಿಯ ಮೇಲ್ವಿಚಾರಕಿಯರನ್ನು  ಅಥವಾ  ತಮ್ಮ ತಾಲೂಕಿನ  ವಿವಿದೋದ್ಧೇಶ ಪುನರ್ವಸತಿ ಕಾರ್ಯಕರ್ತರನ್ನು (ಎಂ.ಆರ್.ಡಬ್ಲ್ಯೂ.) ಬೆಳಗಾವಿ- 8310069931 / 8123672033, ಗೋಕಾಕ- 9480222467 / 7975229133, ಮೂಡಲಗಿ-9035944146, ರಾಯಬಾಗ-9663047255 / 7259463207, ರಾಮದುರ್ಗ- 9880379478/8971228359, ಸವದತ್ತಿ- 7026112100 / 9901633508, ನಿಪ್ಪಾಣಿ-7411062628 ಚಿಕ್ಕೋಡಿ-9108821354/ 9663232983, ಬೈಲಹೊಂಗಲ-8073972929/ 9535746989, ಕಿತ್ತೂರು- 8073972929, ಅಥಣಿ- 7337748177/ 9980360802, ಕಾಗವಾಡ- 9845631344, ಖಾನಾಪೂರ- 9845996759/ 9008216302, ಹುಕ್ಕೇರಿ- 9663948959 / 7406380921 ಸಂಪರ್ಕಿಸಲು ಅವರು ಕೋರಿದ್ದಾರೆ.////

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');