ಶಿಗ್ಗಾವಿ: ಸತೀಶ ಜಾರಕಿಹೊಳಿ ಹುಟ್ಟುಹಬ್ಬದ ನಿಮಿತ್ತ ಕಾರ್ಮಿಕರು, ಚಾಲಕರಿಗೆ ಉಪಹಾರ ವಿತರಣೆ

0

ಶಿಗ್ಗಾವಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರ ಜನ್ಮದಿನದ ಅಂಗವಾಗಿ ಹಾವೇರಿ ಜಿಲ್ಲಾ ಮಾನವ ಬಂಧುತ್ವ ವೇದಿಕೆ ಹಾಗೂ ಸತೀಶ ಜಾರಕಿಹೊಳಿ ಅವರ ಅಭಿಮಾನಿಗಳು ದಿನಗೂಲಿ ಕಾರ್ಮಿಕರು ಮತ್ತು ವಾಹನ ಚಾಲಕರಿಗೆ ಉಪಹಾರ ಹಾಗೂ ನೀರಿನ ಬಾಟಲಿಗಳ ವಿತರಣೆ ಮಾಡಿದರು.

ಈ  ಸಂದರ್ಭದಲ್ಲಿ ಎಂಬಿವಿ ಹಾವೇರಿ ಜಿಲ್ಲಾ ಸಂಚಾಲಕ ಪ್ರಕಾಶ ಹಾದಿಮನಿ ಮಾತನಾಡಿ, “ಸತೀಶ ಜಾರಕಿಹೊಳಿ ಅವರ ಜನ್ಮದಿನದ ಅಂಗವಾಗಿ ನೂರಾರು ದಿನಗೂಲಿ ಕಾರ್ಮಿಕರು ಹಾಗೂ ಚಾಲಕರಿಗೆ ಉಪಹಾರದ ವ್ಯವಸ್ಥೆ ಮಾಡಿದ್ದೇವೆ” ಎಂದು ತಿಳಿಸಿದರು.

“ಸತೀಶ ಜಾರಕಿಹೊಳಿ ಅವರು ರಾಜ್ಯದ ಪ್ರಬಲ ನಾಯಕರಾಗಿದ್ದಾರೆ. ಜನರ ಬಗ್ಗೆ ಅತ್ಯಂತ ಕಾಳಜಿಯನ್ನು ಹೊಂದಿರುವ ಅವರು ಈ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿರಬೇಕಿತ್ತು. ಆದಷ್ಟು ಬೇಗ ಅವರು ಮುಖ್ಯಮಂತ್ರಿಯಾಗಲಿ” ಎಂದು ಅವರು ಶುಭ ಹಾರೈಸಿದರು.

ಮಾಜಿ ವಿಧಾನ ಪರಿಷತ್ ಸದಸ್ಯರಾದ ಸೋಮಣ್ಣ ಬೇವಿನಮರದ, ಜಿಲ್ಲಾ ಮಹಿಳಾ  ಕಾಂಗ್ರೆಸ್ ಅಧ್ಯಕ್ಷೆ ಪ್ರೇಮಾ ಪಾಟೀಲ, ಸಂಚಾಲಕರಾದ ವಿಶಾಲ್ ಮರಾಠಿ,  ಸುನೀಲ ಬಂಡ್ಡಿವಡ್ಡರ, ಮುತ್ತು ಗೊಟಗೋಡಿ, ಶರೀಪ ಮಾಕಪ್ಪನವರ  ಮುಖಂಡರಾದ ಶಿವಾನಂದ ಬಾಗೂರು, ಹನುಮಂತ ಬಂಡ್ಡಿವಡ್ಡರ, ಮಂಜಣ್ಣ ಮಣ್ಣಣ್ಣನವರ, ಶ್ರೀಮತಿ ವಸಂತ ಬಾಗೂರು, ಮಾಲತೇಶ ಸಾಲಿ ಸೇರಿ ಹಾವೇರಿ, ಶಿಗ್ಗಾವಿ, ಸವಣೂರು, ರಾಣಿ ಬೆನ್ನೂರು, ಹಿರೇಕೆರೂರ ತಾಲೂಕಿನ ಮಾನವ ಬಂಧುತ್ವ ವೇದಿಕೆ ಕಾರ್ಯಕರ್ತರು ಭಾಗವಹಿಸಿದ್ದರು.////

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');