ಅಥಣಿ ಆಸ್ಪತ್ರೆಗೆ ದಿಡೀರ್ ಭೇಟಿ ಕೊಟ್ಟ ಸಿಇಓ ದರ್ಶನ

0

 

ಬೆಳಗಾವಿ : ಜಿಲ್ಲೆಯ ಸಿಇಓ ಎಚ್ ವಿ ದರ್ಶನ ಮತ್ತು ಚಿಕ್ಕೋಡಿ ಉಪವಿಭಾಗಾಧಿಕಾರಿ ಯುಕೇಶಕುಮಾರ ಅಥಣಿ ತಾಲೂಕಿನ ವಿವಿಧೆಡೆ ದಿಡೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಅಥಣಿ ತಾಲೂಕಿನ ಐಗಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ತಹಶಿಲ್ದಾರ ಕಚೇರಿಯ ವಾರ್ ರೂಮ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೆ ಅಥಣಿ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ಸೊಂಕಿತರನ್ನು ಸ್ವತಃ ಪಿಪಿಇ ಕಿಟ್ ಹಾಕಿಕೊಂಡು ಒಳಹೋಗಿ ಅವರಿಂದ ಮಾಹಿತಿ ಪಡೆದರು.ಚಿಕಿತ್ಸೆ ಸರಿಯಾಗಿ ನಡೆಯುತ್ತಿದೆಯೆ? ಈಗ ಹ್ಯಾಗಿದ್ದೀರಿ?

ಊಟ ಕೊಡ್ತಾರಾ?? ಮೂಲಭೂತ ಸೌಲಭ್ಯಗಳು ಇವೆಯಾ ಅನ್ನುವ ಅವರ ಪ್ರಶ್ನೆಗೆ ಅಧಿಕಾರಿಗಳು ಪಿಪಿಇ ಕಿಟ್ ಧರಿಸಿ ಒಳಗೆ ಬಂದಿದ್ದನ್ನು ನೋಡಿ ತಬ್ಬಿಬ್ಬಾದ ಸೊಂಕಿತರು ಉತ್ತರಿಸಲು ತಡವರಿಸಿದರಲ್ಲದೆ ಎಲ್ಲದಕ್ಕೂ ಸರಿಯಾಗಿದೆ ಅನ್ನುವ ಮೂಲಕ ತಲೆಯಾಡಿಸಿದರು.ಪರಿಸ್ಥಿತಿ ಅರ್ಥ ಮಾಡಿಕೊಂಡ ಸಿಇಓ ವೈದ್ಯರು ಮತ್ತು ಸಿಬ್ಬಂದಿ ಯನ್ನು ಕೆಲಹೊತ್ತು ತರಾಟೆಗೆ ತೆಗೆದುಕೊಂಡರಲ್ಲದೆ ಆಸ್ಪತ್ರೆಗೆ ಬರುವ ಸೊಂಕಿತರಿಗೆ ಚಿಕಿತ್ಸೆಯಲ್ಲಿ ಯಾವುದೇ ಕೊರತೆ ಆಗದಂತೆ ಕರ್ತವ್ಯ ನಿಷ್ಠೆ ಮೆರೆಯಬೇಕು ಎಂದು ಕಿವಿಮಾತು ಹೇಳಿದರು.

ಇನ್ನೂ
ಆಸ್ಪತ್ರೆ ಒಳಗೆ ಸೊಂಕಿತರೊಂದಿಗೆ ಆಸ್ಪತ್ರೆ ಸಿಬ್ಬಂದಿ ಹೊರತುಪಡಿಸಿ ಬೇರೆ ಯಾರೂ ಇರಬಾರದು ಅಗತ್ಯ ಬಿದ್ದಾಗ ಊಟ ಕೊಡಲು ಬರಬಹುದು.ಎಸ್ ಡಿ ಆರ್ ಎಫ್ ನಿಯಮದಂತೆ ದಿನವೊಂದಕ್ಕೆ ಕೋವಿಡ್ ಸೊಂಕಿತರಿಗೆ ಕೊಡಬೇಕಾದ ಊಟೋಪಚಾರಕ್ಕೆ 260 ರೂಪಾಯಿ ನಿಗದಿಪಡಿಸಲಾಗಿದೆ.

ಅಥಣಿ ತಾಲ್ಲೂಕು ವ್ಯಾಪ್ತಿಯಿಂದ ದೊಡ್ಡದಾಗಿದ್ದು ಆರ್ ಟಿ ಪಿ ಸಿ ಆರ್ ವರದಿ ಬರಲು ಆಗುತ್ತಿದ್ದ ವಿಳಂಬ ತಡೆಯಲು ಪ್ರತ್ಯೇಕ ವಾಹನ ಕೊಡಲಾಗಿದ್ದು ಈಗ ಎರಡು ದಿನಗಳಲ್ಲಿ ವರದಿ ಲಭ್ಯವಾಗುತ್ತದೆ ಎಂದರು.ಇನ್ನೂ ಕಂದಾಯ ಇಲಾಖೆ, ಆರೋಗ್ಯ ಇಲಾಖೆ,ಮತ್ತು ತಾಲ್ಲೂಕು ಪಂಚಾಯತಿ ಕೊಡುವ ಕೋವಿಡ್ ಟೆಸ್ಟ ಹಾಗೂ ಸಾವಿನ ಸಂಖ್ಯೆ ಗೊಂದಲದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಇಓ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಕಿ ಅಂಶಗಳು ನಿಖರವಾಗಿ ಇವೆ ಎಂದರು.

ಈ ವೇಳೆ ಮಾಧ್ಯಮದವರು ರೆಮೆಡಿಸಿವರ್ ಇಂಜೆಕ್ಷನ್ ಕಳ್ಳತನ ಪ್ರಕರಣದ ಆರೋಪಗಳ ಬಗ್ಗೆ ಪ್ರಶ್ನೆ ಮಾಡಿದಾಗ ಯಾರಾದರೂ ಲಿಖಿತವಾಗಿ ದೂರು ಕೊಟ್ಟರೆ ಮುಂದಿನ ಕ್ರಮ ಜರುಗಿಸಲಾಗುವದಲ್ಲದೆ ಆಸ್ಪತ್ರೆ ಮೂಲಭೂತ ಸೌಮಭ್ಯಗಳಿಗೂ ಒತ್ತು ಕೊಡಲಾಗಿದ್ದು ಕಳೆದ ಬಾರಿ ಬಂದಾಗ ಇದ್ದಷ್ಟು ದೂರುಗಳು ಈಗ ಕೇಳಿಬಂದಿಲ್ಲ ಆಸ್ಪತ್ರೆಯಲ್ಲಿ ಸುಧಾರಣೆಗಳಾಗಿವೆ ಇನ್ನೂ ಕೊರೊನಾ ಮೂರನೆಯ ಅಲೆ ಎದುರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ

ಮಕ್ಕಳಲ್ಲಿ ಕೋವಿಡ್ ಕಂಡುಬಂದರೆ ಆಯಾ ಅಂಗನವಾಡಿ, ಸ್ಥಳಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ದೊರೆಯುವಂತೆ ಸಿದ್ದತೆ ಮಾಡಿಕೊಳ್ಳಲಾಗುತ್ತಿದ್ದು ತಜ್ಞರ ಅಭಿಪ್ರಾಯ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶನಗಳನ್ನು ಚಾಚು ತಪ್ಪದೆ ಪಾಲಿಸುವಂತೆ ಎಲ್ಲ ವೈದ್ಯಾಧಿಕಾರಿಗಳು ಸಿಬ್ಬಂದಿ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಇನ್ನೂ ಗ್ರಾಮೀಣ ಭಾಗದ ಜನರು ಕೋವಿಡ್ ಟೆಸ್ಟ ಮಾಡಿಸಲು ಹಿಂದೇಟು ಹಾಕಬಾರದು ಸೊಂಕಿನ ಲಕ್ಷಣಗಳು ಕಂಡುಬಂದಾಗ ಕೂಡಲೆ ಟೆಸ್ಟ ಮಾಡಿಸಿಕೊಂಡು ಪಾಜಿಟಿವ್ ಬಂದರೆ ಚಿಕಿತ್ಸೆ ಪಡೆಯುವ ಮೂಲಕ ಕೊರೊನಾ ಸೊಂಕು ಹರಡುವದನ್ನು ತಡೆಯಲು ಸಹಕರಿಸಬೇಕಾಗಿದೆ ಎಂದರು.

ಈ ವೇಳೆ ಚಿಕ್ಕೋಡಿ ಉಪವಿಭಾಗಾಧಿಕಾರಿ ಯುಕೇಶ್ ಕುಮಾರ ತಹಶಿಲ್ದಾರ ದುಂಡಪ್ಪಾ ಕೋಮಾರ,ತಾಲ್ಲೂಕು ಪಂಚಾಯತ ಅಧಿಕಾರಿ ರವಿ ಬಂಗಾರಪ್ಪನವರ, ಉಪತಹಶಿಲ್ದಾರ ಮಹದೇವ ಬಿರಾದಾರ,ತಾಲ್ಲೂಕು ವೈದ್ಯಾಧಿಕಾರಿ ಬಸಗೌಡ ಕಾಗೆ,ಆಸ್ಪತ್ರೆ ವೈದ್ಯಾಧಿಕಾರಿ ಬಿ.ಜಿ ಕನಮಡಿ,ಡಾಕ್ಟರ್ ವಿಜಯಕುಮಾರ,ಡಾಕ್ಟರ್ ಮೇತ್ರಿ ಡಾಕ್ಟರ್ ಸಿ ಎಸ್ ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');