ನಿಪ್ಪಾಣಿ ಆರೋಗ್ಯ ಕೇಂದ್ರಕ್ಕೆ ಸೂಕ್ತ ವ್ಯವಸ್ಥೆ, ವೈದ್ಯರು ಧೈರ್ಯದಿಂದ ಇರಿ: ಸತೀಶ ಜಾರಕಿಹೊಳಿ ಭರವಸೆ

0

ನಿಪ್ಪಾಣಿ:  ಇಲ್ಲಿನ ಮಹಾತ್ಮಾ ಗಾಂಧಿ ಸ್ಮಾರಕ ಆಸ್ಪತ್ರೆ, ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ,  ಆಕ್ಸಿಜನ್ ಪೂರೈಕೆ ವಿಳಂಬದ ಆರೋಪ ಹಿನ್ನೆಲೆಯಲ್ಲಿ ಕೆಪಿಸಿಸಿ  ಕಾರ್ಯಾಧ್ಯಕ್ಷ “ಸತೀಶ ಜಾರಕಿಹೊಳಿ ” ಅವರು ಬುಧವಾರ ಭೇಟಿ ನೀಡಿ, ಆಸ್ಪತ್ರೆಯ ಪರಿಸ್ಥಿತಿಯನ್ನು ಅವಲೋಕಿಸಿ, ಅಧಿಕಾರಿಗಳ ಜತೆ ಚರ್ಚೆ ನಡೆಸಿದ್ದಾರೆ.

ವೈದ್ಯಾಧಿಕಾರಿಗಳ ಜತೆ ಸಭೆ ನಡೆಸಿ ಮಾತನಾಡಿದ “ಸತೀಶ ಜಾರಕಿಹೊಳಿ ” ಅವರು, “ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ, ಸೋಂಕಿತರಿಗೆ ಆಕ್ಸಿಜನ್ ಪೂರೈಕೆ ವಿಳಂಬ ಹಾಗೂ  ಇಲ್ಲಿನ ಅವ್ಯವಸ್ಥೆ ಬಗ್ಗೆ ಸಿಎಂ ಯಡಿಯೂರಪ್ಪನವರ  ಗಮನ ಸೆಳೆಯಲಾಗುವುದು” ಎಂದು ವೈದ್ಯಾಧಿಕಾರಿಗಳಿಗೆ ಭರವಸೆ ನೀಡಿದರು.

ಸಿಎಂ  ಗಮನ ಸೆಳೆಯಲಾಗುವುದು

ಸೋಂಕಿತರಿಗೆ ಸೂಕ್ತ  ಚಿಕಿತ್ಸೆ ಕಲ್ಪಿಸುವ ಉದ್ದೇಶ ಹಾಗೂ   ಈ ಆರೋಗ್ಯ ಕೇಂದ್ರದ ಬಗ್ಗೆ ವಿಶೇಷ ಕಾಳಜಿ ವಹಿಸಲಾಗುವುದು.  ಇದೇ 4 ರಂದು ಸಿಂಎ  ಯಡಿಯೂರಪ್ಪ ಬೆಳಗಾವಿಗೆ  ಆಗಮಿಸಲಿದ್ದಾರೆ.  ಸಿಎಂ  ಸಭೆಯಲ್ಲಿ ಈ ಕುರಿತು ಸರ್ಕಾರಕ್ಕೆ ಎಚ್ಚರಿಸಿಲಾಗುವುದು  ಎಂದರು.

ಮೂರನೇಯ ಅಲೆ ನಿಯಂತ್ರಿಸಲು  ಸಜ್ಜಾಗಿ:

ವೈದ್ಯಾಧಿಕಾರಿಗಳು ಆಸ್ಪತ್ರೆಯಲ್ಲಿನ ಸಮಸ್ಯೆಗಳ ಬಗ್ಗೆ ಪಟ್ಟಿ ಮಾಡಿ,  ಇಲ್ಲಿನ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ವೈದ್ಯರಿಗೆ ಭರವಸೆ ನೀಡಿದ್ದಾರೆ.

ಆಸ್ಪತ್ರೆಯಲ್ಲಿನ ಅವ್ಯಸ್ಥೆಯ ಬಗ್ಗೆ ಆರೋಪಗಳ ಕೇಳಿ ಬರುತ್ತಿರುವುದು ನಿಜವಾಗಿದೆ. ಇದಕ್ಕೆ ಸೂಕ್ತ ಮಾರ್ಗವನ್ನು ಕಂಡುಕೊಳ್ಳಬೇಕಿದೆ.  ಎರಡನೇಯ ಅಲೆಯಲ್ಲಿ ಸಾವುನೋವುಗಳು ಆಗಿವೆ, ಮೂರನೇಯ ಅಲೆ ನಿಯಂತ್ರಿಸಲು ಅಧಿಕಾರಿಗಳು ಸಜ್ಜಾಗಬೇಕೆಂದು ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ನಿಪ್ಪಾಣಿಯ  ಬೃಹತ್  ಆಕ್ಸಿಜನ್ ಪ್ಲಾಂಟ್ ಗೆ ಭೇಟಿ ನೀಡಿ, ಮಾಹಿತಿ ಪಡೆದರು.

ಡಾ. ಎಸ್ ಎಸ್. ಗಡೇದ,  ಡಾ. ವಿ ವಿ ಸಿಂಧೆ, ಡಾ, ಸೀಮಾ ಗುಂಜಾಳ, ಲಕ್ಷ್ಮಣರಾವ್ ಚಿಂಗಳೆ, ಶಂಕರ ಗಿಡ್ಡನ್ನವರ, ಶಿವು  ಪಾಟೀಲ, ಮಹಾವೀರ ಮೋಹಿತೆ, ಕಾಕಾಸಾಹೇಬ್ ಪಾಟೀಲ , ರಾಜು ಪವಾರ್,  ಕಿರಣ ರಜಪೂತ ಹಾಗೂ ವೈದ್ಯಾಧಿಕಾರಿಗಳು   ಇತರರು ಇದ್ದರು.////

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');