ಜೂನ್ 7ರ ಬಳಿಕ ಲಾಕ್ ಡೌನ್ ಹಂತ ಹಂತವಾಗಿ ತೆರವುಗೊಳಿಸಿ : ಸತೀಶ್ ಜಾರಕಿಹೊಳಿ

0

ಹುಕ್ಕೇರಿ : ದೇಶದಲ್ಲಿ ಮುಂಜಾಗ್ರತಾ ಕ್ರಮ  ತೆಗೆದುಕೊಳ್ಳದೇ ಇರುವುದರಿಂದ ಕೊರೊನಾದಿಂದ ಸಮಸ್ಯೆ ಅನುಭವಿಸಬೇಕಾಯಿತು. ಮುಂದಿನ ದಿನಗಳಲ್ಲಿ ಆ ರೀತಿ ಆಗದಂತೆ ಸರ್ಕಾರ ನೋಡಿಕೊಳ್ಳಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.

ಹುಕ್ಕೇರಿ ವೈದ್ಯಾಧಿಕಾರಿ, ತಹಶೀಲ್ದಾರ್ ಜತೆ  ಕೊವೀಡ್ ಪರಿಸ್ಥಿತಿ ಬಗ್ಗೆ ಅವಲೋಕಿಸಿದರು. ಬಳಿಕ ಮಾಧ್ಯಮದರೊಂದಿಗೆ ಮಾತನಾಡಿ,  ರಾಜ್ಯ ಸರ್ಕಾರ ಜೂನ್ 7 ರ ಬಳಿಕ ಲಾಕ್ ಡೌನ್ ಅನ್ನು ಮುಂದುವರೆಸದೆ ಹಂತ ಹಂತವಾಗಿ ತೆರವುಗೊಳಿಸಬೇಕು.  ಜೂನ್ 30ರೊಳಗೆ ಸಂಪೂರ್ಣ ತೆರವುಗೊಳಿಸಬೇಕು. ಆದರೆ ಕೆಲವುಗಳಿಗೆ ಸರ್ಕಾರ ನಿರ್ಬಂಧಗಳನ್ನು ಹೇರಬೇಕು ಎಂದು ಸಲಹೆ ನೀಡಿದರು.

ಕಳೆದ ತಿಂಗಳಿಗೆ ಹೋಲಿಕೆ ಮಾಡಿದರೆ ರಾಜ್ಯದಲ್ಲಿ ರೋಗಿಗಳು ಹಾಗೂ ವೈದ್ಯರಿಗೆ ಒತ್ತಡ ಕಡಿಮೆ ಆಗಿದೆ.  ಕೆಲವು ದಿನಗಳಿಂದ ಕೊರೊನಾ ಪ್ರಕರಣ ಸಂಖ್ಯೆಯೂ ಕೂಡಾ ಕಡಿಮೆ ಆಗಿದೆ. ಆದರೆ ಜನರು ಸಹ ಎಚ್ಚರಿಕೆಯಿಂದ ಇರಬೇಕು ಎಂದು ಮನವಿ ಮಾಡಿದರು. ಸರ್ಕಾರ ಕೊರೊನಾ ತಡೆಗಟ್ಟುವಲ್ಲಿ ವಿಫಲವಾಗಿದೆ. ಅನೇಕ ಸಾವು ನೋವುಗಳು ಆಗಿವೆ‌‌. ಆದರೆ ಹಿಂದೆ ಆದ ತಪ್ಪುಗಳು ಮತ್ತೆ ಮರುಕಳಿಸದಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ನೋಡಿಕೊಳ್ಳಬೇಕು. ಮೂರನೇ ಅಲ್ಲೆ ಬಂದರೆ  ಎದುರಿಸಲು ಸಿದ್ದರಾಗಿರಬೇಕು ಎಂದು ಸಲಹೆ ನೀಡಿದರು.

ಇನ್ನೂ ಕೊರೊನಾ ದಿಂದ ಮೃತಪಟ್ಟ ಕುಟುಂಬಗಳಗೆ ಪರಿಹಾರ ಕೂಡಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುತ್ತದೆ. ಶುಕ್ರವಾರ ಸಿಎಂ ಬೆಳಗಾವಿಗೆ ಆಗಮಿಸುತ್ತಿದ್ದು, ಅವರ ಗಮನಕ್ಕೆ ಈ ವಿಚಾರಗಳನ್ನು ತರಲಾಗುತ್ತದೆ ಎಂದರು.////

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');