ಕೂಲಿಗಾಗಿ ಬೇರೆ ರಾಜ್ಯಕ್ಕೆ ಹೋಗಿದ್ದ ಹದಿನೈದು ಕುಟುಂಬಗಳು ಕರ್ನಾಟಕಕ್ಕೆ ವಾಪಸ್:ಪ್ರತಿಯೊಬ್ಬರ ವರದಿ ನೆಗೆಟಿವ್

0
ಬೆಳಗಾವಿ :  ಕಾಗವಾಡ : ಮಹಾರಾಷ್ಟ್ರದ ರತ್ನಾಗಿರಿಗೆ ಕೂಲಿ ಕೆಲಸಕ್ಕೆ ಹೋಗಿದ್ದ ಹದಿನೈದು ಕುಟುಂಬಗಳು ಮರಳಿ ಕರ್ನಾಟಕ್ಕೆ ವಾಪಸ್ಸಾಗುತ್ತಿದ್ದರು ಮಹಾರಾಷ್ಟ್ರದಲ್ಲಿ ಲಾಕ್ಡೌನ್ ಮುಂದುವರಿದ ಪರಿಣಾಮವಾಗಿ ಕರ್ನಾಟಕ ಬಿಜಾಪುರ ಜಿಲ್ಲೆಯ ತೊರವಿ ಗ್ರಾಮಕ್ಕೆ ಮರಳುತ್ತಿದ್ದಾರೆ ಆದರೆ ಅವರಿಗೆ ಬಂದ ಸಂಕಷ್ಟವೆಂದರೆ ಅವರ್ಯಾರು ಕೋವಿಡ್ ಟೆಸ್ಟ್ ಗೆ ಒಳಗಾಗದೇ ಕರ್ನಾಟಕ ಗಡಿ ತಾಲ್ಲೂಕು ಕಾಗವಾಡ ಚೆಕ್ ಪೊಸ್ಟ ಬಂದಿದ್ದಾರೆ ಆದರೆ ಕರ್ನಾಟಕದ ಗಡಿ ಪ್ರವೇಶ ಮಾಡಬೇಕಾದರೆ ಪಾಸಿಟಿವ್ ರಿಪೋರ್ಟ್ ಕಡ್ಡಾಯವಾಗಿದೆ

 

ಕೋವಿಡ್ ಟೆಸ್ಟ್ ಇಲ್ಲದೇ ಮಹಾರಾಷ್ಟ್ರದಿಂದ ಬರುತ್ತಿದ್ದ ಏಳರಿಂದ ಏಂಟು ಟ್ರ್ಯಾಕ್ಟರ್ ನಲ್ಲಿ ಅನೇಕ ಕುಟುಂಬಗಳು ಹೊರಟಿದ್ದವು ಆಗ ಪೋಲಿಸರು ತಡೆ ಹಿಡಿದಿದ್ದರಿಂದ ಕೆಲಕಾಲ ವಾಗ್ವಾದವೂ ಆಯಿತು ನಂತರ ಪಿಎಸ್ಐ ಹಣಮಂತ ಧರ್ಮಟ್ಟಿ ಅವರು ಸ್ಥಳಕ್ಕೆ ಆಗಮಿಸಿ ಘಟನೆಯನ್ನು ತಿಳಿಗೊಳಿಸಿ ಪ್ರತಿಯೊಬ್ಬರೂ ಸ್ವಾಬ್ ಟೆಸ್ಟ್ ಗೆ ಒಳಗಾಗುವಂತೆ ಮನವೊಲಿಸಿದರು.

 

ತಾಲ್ಲೂಕಾ ದಂಡಾಧಿಕಾರಿ ಪ್ರಮೀಳಾ ದೇಶಪಾಂಡೆ ಅವರು ಪ್ರತಿಯೊಬ್ಬರ ಸ್ವ್ಯಾಬ್ ಟೆಸ್ಟ ಮಾಡಿಸುವಂತೆ ಆರೋಗ್ಯ ಇಲಾಖೆಯವರಿಗೆ ಆದೇಶಿಸಿ ಯಾರು ಸ್ವ್ಯಾಬ್ ಟೆಸ್ಟ್ ದಿಂದ ಯಾರಿಗೆ ನೆಗೆಟಿವ್ ಬಂದಿದೇವೆಯೋ ಅಂಥವರನ್ನು ಪರಿಶೀಲನೆ ಮಾಡಲಾಗಿ ಯಾರೂ ಪಾಸಿಟಿವ್ ಬರದೇ ಇದ್ದ ಕಾರಣದಿಂದ ಅವರನ್ನು ಅವರ ಊರಿಗೆ ತೆರಳಲು ಅವಕಾಶ ಮಾಡಿಕೊಟ್ಟರು.

 

ಈ ಕಾರ್ಯದಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವೀರಣಗೌಡ ಏಗಣಗೌಡರ, ಸಿಡಿಪಿಒ ಸಂಜೀವಕುಮಾರ ಸದಲಗಿ,ಉಪತಹಶಿಲ್ದಾರ,ಅಣ್ಣಾಸಾಬ ಕೋರೆ,ಜಿತೇಂದ್ರ ನಿಡೋಣಿ, ಆರೋಗ್ಯ ಇಲಾಖೆ ಅಧಿಕಾರಿಗಳು ಸಾಥ್ ನೀಡಿ ಎಲ್ಲ ಜನರನ್ನ ಸಾಲಾಗಿ ಶಿಸ್ತಿನಿಂದ ಅವರನ್ನ ಟೆಸ್ಟ ಮಾಡಿಸಲು ಸಹಕರಿಸಿದರು.
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');