ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಸಾರ್ವಜನಿಕರ ಸೇವೆಗೆ ಕಂಕಣಬದ್ಧ : ಸಚಿವ ಶ್ರೀಮಂತ ಪಾಟೀಲ

0

ಬೆಳಗಾವಿ :  ಕಾಗವಾಡ :   ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಸಾರ್ವಜನಿಕರ ಸೇವೆಗೆ ಕಂಕಣಬದ್ಧರಾಗುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಕೈಮಗ್ಗ, ಜವಳಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಶ್ರೀಮಂತ ಪಾಟೀಲ ಹೇಳಿದರು.

ಕಾಗವಾಡ ಪಟ್ಟಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ವತಿಯಿಂದ ಕಾಗವಾಡ ಸಮುದಾಯ ಆರೋಗ್ಯ ಕೇಂದ್ರಕ್ಕೆ ಉಚಿತವಾಗಿ ನೀಡಲಾಗಿರುವ ೫ ಆಕ್ಸಿಜನ್ ಕಾನ್ಸಟೆಂಟರ್‌ಗಳನ್ನು ಸ್ಥಳೀಯ ವೈದ್ಯಾಧಿಕಾರಿಗಳಿಗೆ ಹಸ್ತಾಂತರಿಸಿ ಮಾತನಾಡುತ್ತಿದ್ದರು.

ಅವರು ಮುಂದೆ ಮಾತನಾಡುತ್ತಾ ಡಾ. ವೀರೇಂದ್ರ ಹೆಗ್ಗಡೆಯವರು ಹಾಗೂ ಮಾತೋಶ್ರೀ ಹೇಮಾವತಿ ಹೆಗ್ಗಡೆಯವರು ಪ್ರಸ್ತುತ ಕೋವಿಡ್-೧೯ ಪರಿಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು ಕರ್ನಾಟಕದಲ್ಲಿ ಬೇಡಿಕೆಯಿರುವ ಆಸ್ಪತ್ರೆಗಳಿಗೆ ಕೋವಿಡ್ ಚಿಕಿತ್ಸೆಗಾಗಿ ಉಚಿತವಾಗಿ ಆಕ್ಸಿಜನ್ ಕಾನ್ಸಟೆಂಟರ್, ಮೆಡಿಕಲ್ ವೆಂಟಿಲೇಟರ್, ಆಕ್ಸಿಜನ್ ಹೈ-ಫ್ಲೋ ಮೆಷಿನ್, ಆಹಾರ ಧಾನ್ಯ ಕಿಟ್‌ಗಳನ್ನು ವಿತರಿಸಿ ಮಾನವೀಯತೆ ಮೆರೆಯುತ್ತಿದ್ದಾರೆ. ಧರ್ಮಸ್ಥಳದ ಈ ಧರ್ಮ ಕಾರ್ಯ, ಬಡ ಜನರ, ದೀನ ದಲಿತರ ಸೇವೆ ನಿರಂತರವಾಗಿ ಸಾಗಲಿ ಎಂದು ಶುಭಹಾರೈಸಿದರು.

 

.ಇದೇ ಸಮಯದಲ್ಲಿ ಕಾಗವಾಡ ತಾಲೂಕಿನಲ್ಲಿ ಬರುವ ಪ್ರತಿ ಗ್ರಾಮಗಳಿಗೆ ಶ್ರೀಮಂತ ಪಾಟೀಲ ಪೌಂಢೇಶನ ವತಿಯಿಂದ ಉಚಿತವಾಗಿ ಸೋಡಿಯಂ ಹೈಪೋ ಕ್ಲೋರೈಡ್ (ಸೋಂಕು ನಿವಾರಕ ದ್ರಾವಣ) ತಾಲೂಕಾ ದಂಡಾಧಿಕಾರಿಗಳಿಗೆ ಸಚಿವರು ಹಸ್ತಾಂತರಿಸಿದರು.

ಈ ಸಮಯದಲ್ಲಿ ಸಚಿವರು ಮಾತನಾಡಿ ಕಾಗವಾಡ ತಾಲೂಕಿನಲ್ಲಿ ಕೊರೋನಾ ಸೋಂಕನ್ನು ತಡೆಗಟ್ಟಲು ತಾಲೂಕಿನಲ್ಲಿರುವ ಅಧಿಕಾರಿಗಳು ಹಗಲು-ರಾತ್ರಿ ಎನ್ನದೇ ಶ್ರಮಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಅವರ ಅವಿರತ ಪರಿಶ್ರಮದಿಂದಲೇ ಇಂದು ಕಾಗವಾಡ ತಾಲೂಕಿನಲ್ಲಿ ಕೊರೋನಾ ಸೋಂಕು ನಿಯಂತ್ರಿಸಲು ಸಾಧ್ಯವಾಗಿದೆ. ಅದರ ಶ್ರೇಯಸ್ಸು ಎಲ್ಲ ಸರ್ಕಾರಿ ಅಧಿಕಾರಿಗಳಿಗೆ ಸಲ್ಲುತ್ತದೆ ಎಂದು ಬಣ್ಣಿಸಿದರು.

ಅದರಲ್ಲಿಯೂ ಮಹಿಳಾ ಅಧಿಕಾರಿಗಳಾದ ತಹಶೀಲ್ದಾರ ಪರಿಮಳಾ ದೇಶಪಾಂಡೆ, ಆರೋಗ್ಯ ಅಧಿಕಾರಿ ಪುಷ್ಪಲತಾ ಸುಣ್ಣದಕಲ್ಲ ಅವರ ಸೇವೆ ವರ್ಣಾತೀತವಾಗಿದೆ. ಅವರಿಗೆ ಎಷ್ಟೇ ಅಭಿನಂದಿಸಿದರು ಸಾಲದು. ಅವರು ನನ್ನ ಮತಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆ ವಿಷಯವಾಗಿದೆ ಎಂದು ಸಚಿವ ಶ್ರೀಮಂತ ಪಾಟೀಲರು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಮಯದಲ್ಲಿ ಧರ್ಮಸ್ಥಳದ ಜಿಲ್ಲಾ ನಿರ್ದೇಶಕರಾದ ಕೃಷ್ಣ ಟಿ., ಕಾಗವಾಡ ತಹಶೀಲ್ದಾರ ಪರಿಮಳಾ ದೇಶಪಾಂಡೆ, ವೈದ್ಯಾಧಿಕಾರಿ ಪುಷ್ಪಲತಾ ಸುಣ್ಣದಕಲ್ಲ, ಸಿಇಓ ಈರನಗೌಡ ಏಗನಗೌಡರ,

ಬಿಇಓ ಎಂ.ಆರ್. ಮುಂಜೆ, ಸಿಡಿಪಿಓ ಸಂಜೀವ ಸದಲಗಿ, ಉಪತಹಶೀಲ್ದಾರ ಅಣ್ಣಾಸಾಬ ಕೋರೆ, ಎಂ.ಆರ್.ಪಾಟೀಲ, ಬಿ.ಬಿ.ಬೋರಗಲ್, ರಾಜು ನಾಯಕ, ಸದಾಶಿವ ಚೌಗಲಾ, ರವಿ ಪಾಟೀಲ, ವಿಠ್ಠಲ ಪವಾರ, ವೈದ್ಯಕೀಯ ಅಧಿಕಾರಿಗಳು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಸೇರಿದಂತೆ ಅನೇಕ ಮುಖಂಡರು, ಗ್ರಾಮಸ್ಥರು ಇದ್ದರು.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');