ಕೇರಳದ ಪಾಲಾದ ‘KSRTC’ ಟ್ರೇಡ್ ಮಾರ್ಕ್: 7 ವರ್ಷಗಳ ಕಾನೂನು ಹೋರಾಟದ ಬಳಿಕ ತೀರ್ಪು ಪ್ರಕಟ

0

ಬೆಂಗಳೂರು: ಏಳು ವರ್ಷಗಳ ಕಾನೂನು ಹೋರಾಟದ ಬಳಿಕ ಕೆಎಸ್‌ಆರ್‌ಟಿಸಿ ಬ್ರ್ಯಾಂಡ್ ಕೇರಳಕ್ಕೆ ಸೇರಿಕೊಂಡಿದೆ. ಕೆಎಸ್‌ಆರ್‌ಟಿಸಿ ಹೆಸರನ್ನು ಕರ್ನಾಟಕ ಬಳಕೆ ಮಾಡುವಂತಿಲ್ಲ ಎಂದು ಬುಧವಾರ ಆದೇಶ ಹೊರಡಿಸಲಾಗಿದೆ. ‘ಟ್ರೇಡ್ ಮಾರ್ಕ್‌ ರಿಜಿಸ್ಟರಿ’ ಬೌದ್ಧಿಕ ಆಸ್ತಿ ಹಕ್ಕುಗಳ (ಐಪಿಆರ್‌) ಆಧಾರದ ಮೇಲೆ ಈ ತೀರ್ಪು ಪ್ರಕಟಿಸಿದೆ.

Karnataka State Road Transport Corporation (KSRTC) ವಿಸ್ತೃತ ರೂಪವನ್ನು ಕರ್ನಾಟಕ ಬಳಕೆ ಮಾಡುವಂತಿಲ್ಲ ಎಂದು ಆದೇಶಿಸಲಾಗಿದೆ.

ಕಳೆದ ಕೆಲವು ವರ್ಷಗಳಿಂದ ಕರ್ನಾಟಕದ ಮತ್ತು ಕೇರಳ ರಾಜ್ಯದ ನಡುವೆ ಕೆಎಸ್‌ಆರ್‌ಟಿಸಿ ವಿಸ್ತೃತ ರೂಪಕ್ಕಾಗಿ ಕಾನೂನು ಹೋರಾಟ ನಡೆಯುತ್ತಿತ್ತು. ಕೆಎಸ್‌ಆರ್‌ಟಿಸಿ ಎಂಬ ಹೆಸರನ್ನು ಕೇರಳ 1962ರಲ್ಲೇ ನೋಂದಣಿ ಮಾಡಿಸಿದೆ. ಕರ್ನಾಟಕ 1972ರಲ್ಲಿ ನೋಂದಣಿ ಮಾಡಿಸಿದ್ದು ಎಂಬ ಅಂಶವನ್ನು ತೀರ್ಪು ನೀಡುವಾಗ ಪರಿಗಣಿಸಲಾಗಿದೆ.

ಅಧಿಕೃತ ಆದೇಶ ಕೈಸೇರಿದ ನಂತರ ಮುಂದಿನ ನಿರ್ಧಾರ:

ಈ ಕುರಿತು ರಾಜ್ಯ ಸಾರಿಗೆ ಸಚಿವ ಲಕ್ಷ್ಮಣ ಸವದಿ ಪ್ರತಿಕ್ರಿಯೆ ನೀಡಿದ್ದಾರೆ. ಕೆಎಸ್‌ಆರ್‌ಟಿಸಿ ಬ್ರ್ಯಾಂಡ್ ಕುರಿತು ಟ್ರೇಡ್ ಮಾರ್ಕ್ ರಿಜಿಸ್ಟರ್ ತೀರ್ಪು ನೀಡಿದೆ. ಆದರೆ ಈ ತೀರ್ಪಿನಲ್ಲಿ ಏನಿದೆ ಎಂಬುದರ ವಿವರ ನಮಗೆ ಬಂದಿಲ್ಲ. ಅಧಿಕೃತವಾಗಿ ಈ ಆದೇಶ ನಮ್ಮ ಕೈಸೇರಿದ ನಂತರ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ ಹೊರಿಡಿಸಿರುವ ಅವರು, “ಈ ಹೆಸರಿನ ಬಳಕೆ ಕುರಿತು ಕಾನೂನು‌ ಹೋರಾಟದ ಕುರಿತು ಆನಂತರ ನಿರ್ಧರಿಸುತ್ತೇವೆ. ದುರದೃಷ್ಟದ ವಿಷಯ ಎಂದರೆ, ಈ ವಿವಾದ ಅನಗತ್ಯವಾಗಿದೆ. ಟ್ರೇಡ್ ಮಾರ್ಕ್ ಎನ್ನುವುದು ಖಾಸಗಿ ಸಂಸ್ಥೆಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ ಸರ್ಕಾರಿ ಸಂಸ್ಥೆಗಳ ಮೇಲೆ ಪ್ರಭಾವ ಬೀರಲ್ಲ. ಇಲ್ಲಿ ಜನರ ಸೇವೆಯೇ ಮುಖ್ಯ. ಕರ್ನಾಟಕ, ಕೇರಳ ಲಾಭ ಗಳಿಸುವ ಸ್ಪರ್ಧೆಗೆ ಮುಂದಾಗಿಲ್ಲ ಸಾರ್ವಜನಿಕ ಹಿತ, ಸೇವೆ ಗಮನದಲ್ಲಿಟ್ಟು ಕೆಲಸ ಮಾಡುತ್ತಿವೆ ಎಂದಿದ್ದಾರೆ.

ಒಂದು ರಾಜ್ಯ ಮತ್ತೊಂದು ರಾಜ್ಯದ ಜೊತೆ ಸೌಹಾರ್ದಯುತವಾಗಿರಬೇಕು ಎಂದು ಒಕ್ಕೂಟ ವ್ಯವಸ್ಥೆ ತಿಳಿಸುತ್ತದೆ. ಈ ವಿಷಯದಲ್ಲಿ ಅನಗತ್ಯ ವಿವಾದ ಹೆಚ್ಚು ಮಾಡೋದು ಬೇಡ. ಈ ವಿಷಯವನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಳ್ಳಬಾರದು. ಇದು ಕೇರಳಕ್ಕೆ ಸಂಭ್ರಮಪಡುವಂಥ ವಿಚಾರವೇನಲ್ಲ ಎಂದು ಹೇಳಿದ್ದು, ಎರಡೂ ರಾಜ್ಯಗಳು ಸಾರಿಗೆ ಸಂಸ್ಥೆ ವಿಚಾರದಲ್ಲಿ ಪೈಪೋಟಿಯಲ್ಲಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ./////

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');