ಸುಶ್ರೂಷಕರಿಗೆ ಉಚಿತ ಫೇಸ್ ಶಿಲ್ಡ ವಿತರಣೆ

0
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ವಿಮೋಚನಾ ಸಂಘ ಮತ್ತು ಉತ್ತರ ಕರ್ನಾಟಕ ಸ್ನೇಹಲೋಕ ಟ್ರಸ್ಟ ಬೆಂಗಳೂರು ವತಿಯಿಂದ ಕೊರೊನಾ ಪ್ರಂಟ್ ಲೈನ್ ವಾರಿಯರ್ ಗಳಾದ ಸುಶ್ರೂಷಕರು ಮತ್ತು ಡಿ ದರ್ಜೆ ನೌಕರರಿಗೆ ಫೇಸ್ ಶಿಲ್ಡ ಗಳನ್ನು ಉಚಿತವಾಗಿ ವಿತರಣೆ ಮಾಡಲಾಯಿತು.
ಈ ವೇಳೆ ಮಾತನಾಡಿದ ನಿವೃತ್ತ ನೀರವರಿ ಇಲಾಖೆಯ ಅಭಿಯಂತರ ಅರುಣ ಯಲಗುದ್ರಿ ವಿಮೋಚನಾ ಸಂಘ ಮತ್ತು ಉತ್ತರ ಕರ್ನಾಟಕ ಸ್ನೇಹಲೋಕ ಟ್ರಸ್ಟ ವತಿಯಿಂದ ಜನರಿಗಾಗಿ ತಮ್ಮ ಪ್ರಾಣದ ಹಂಗು ತೊರೆದು ಕೆಲಸ ಮಾಡುವ ಆರೋಗ್ಯ ಇಲಾಖೆಯ ಕೊರೊನಾ ವಾರಿಯರಗಳಾದ ಸುಶ್ರೂಷಕರು ಮತ್ತು ಡಿ ದರ್ಜೆ ನೌಕರರ ಆರೋಗ್ಯ ಕೂಡ ಬಹಳ ಮುಖ್ಯ
 ಆದ್ದರಿಂದ ಬೆಳಗಳೂರಿನಲ್ಲಿ ಸರ್ಕಾರಿ ನೌಕರ ರಿಂದ ಸ್ಥಾಪಿತವಾದ ಉತ್ತರ ಕರ್ನಾಟಕ ಸ್ನೇಹಲೋಕ ಟ್ರಸ್ಟ ಮತ್ತು ಅಥಣಿಯ ವಿಮೋಚನಾ ಸಂಘದಿಂದ ಇಂದು ತೊಂಭತ್ತೈದು ಫೆಸ್ ಶಿಲ್ಡಗಳನ್ನು ಉಚಿತವಾಗಿ ಕೊಡುತ್ತಿದ್ದೇವೆ ಎಂದರು.ಈ ವೇಳೆ ಬಿ ಎಲ್ ಪಾಟೀಲ, ಭಾರತಿ ಬಿಜಾಪೂರೆ,ಎಲ್ ವಿ ಕುಲಕರ್ಣಿ,ಸೇರಿದಂತೆ ಹಲವರು ಉಪಸ್ಥಿತರಿದ್ದರು
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');