ಕೊರೊನಾ ವಾರಿಯರ್ ಪತ್ರಕರ್ತರಿಗೆ ಕೋವಿಶಿಲ್ಡ ವ್ಯಾಕ್ಸಿನ್

0
ಅಥಣಿ ಸಾರ್ವಜನಿಕ ಆಸ್ಪತ್ರೆಯಿಂದ ಕೊರೊನಾ ವಾರಿಯರ್ ಗಳಾದ ಪತ್ರಕರ್ತರಿಗೆ ಕೋವಿಶಿಲ್ಡ ವ್ಯಾಕ್ಸಿನ್ ನೀಡಲಾಯಿತು. ಸರ್ಕಾರದ ಆಧ್ಯತೆಯ ತತ್ವದ ಅಡಿಯಲ್ಲಿ ಇಂದು ಐದು ಜನ ಪತ್ರಕರ್ತರು ಇಂದು ಕೋವಿಶಿಲ್ಡ ವ್ಯಾಕ್ಸಿನ್ ಪಡೆದರು.ಈ ವೇಳೆ ವ್ಯಾಕ್ಸಿನ್ ಪಡೆದು ಮಾತನಾಡಿದ ಪ್ರಕಾಶ ಕಾಂಬಳೆ ಬಹಳ ದಿನಗಳ ಹಿಂದೆಯೇ ಪತ್ರಕರ್ತರನ್ನು ಕೊರೊನಾ ವಾರಿಯರ್ ಗಳು ಎಂದು ಸರ್ಕಾರ ಘೋಷಣೆ ಮಾಡಿದ್ದರೂ ಕೂಡ ಅರವತ್ತು ವರ್ಷ ಮೆಲ್ಪಟ್ಟ ಹಿರಿಯ ನಾಗರೀಕರಿಗೆ,ವಿಕಲಚೇತನರಿಗೆ
ಮತ್ತು ಆರೋಗ್ಯ ಇಲಾಖೆ ಹಾಗೂ ಪೋಲಿಸ್ ಇಲಾಖೆಯ ಪ್ರಂಟ್ ಲಾಯಿನ್ ವಾರಿಯರ್ ಗಳಿಗೆ ವ್ಯಾಕ್ಸಿನ್ ಕೊರತೆ ಎದುರಾಗಬಾರದು ಎಂಬ ಹಿತದೃಷ್ಟಿಯಿಂದ ಇಷ್ಟು ದಿನ ವ್ಯಾಕ್ಸಿನ್ ಪಡೆದಿರಲಿಲ್ಲ ಸದ್ಯ ಸರ್ಕಾರದಿಂದ ಹೆಚ್ಚಿನ ವ್ಯಾಕ್ಸಿನ್ ಪೂರೈಕೆ ಆಗುತ್ತಿದ್ದು ನಲವತ್ತೈದು ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನ್ ಕೊಡಲಾಗುತ್ತಿದೆ ಅಲ್ಲದೆ,ಕಟ್ಟಡ ಕಾರ್ಮಿಕರು,ಹಮಾಲರು,ಮತ್ತು ವಿಕಲಚೇತನರಿಗೆ ಕೂಡ ಆದ್ಯತಾ ಪಟ್ಟಿಯಲ್ಲಿ ಅವಕಾಶ ನೀಡಿ ವ್ಯಾಕ್ಸಿನ್ ನೀಡಲಾಗುತ್ತಿದ್ದು
ವ್ಯಾಕ್ಸಿನ್ ಎಲ್ಲ ಕಡೆಯೂ ಸಮರ್ಪಕವಾಗಿ ಲಭ್ಯವಾಗುತ್ತಿರುವದರಿಂದ ಇಂದು ವ್ಯಾಕ್ಸಿನ್ ಪಡೆದಿದ್ದೇವೆ ಎಂದರು.ಈ ವೇಳೆ ಪತ್ರಕರ್ತರಾದ ರಾಕೇಶ್ ಮೈಗೂರ, ಅನೀಲ ಗದ್ಯಾಳ,ಸತೀಶ ಕೋಳಿ,ಸಚೀನ ಕಾಂಬಳೆ,ಪ್ರಕಾಶ ಕಾಂಬಳೆ,ದೀಪಕ ಶಿಂಧೇ, ರಮೇಶ ಬಾದವಾಡಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');