ಶ್ರೀಮಂತ ಪಾಟೀಲ ಫೌಂಡೇಶನ್ ನಿಂದ ಪತ್ರಕರ್ತರಿಗೆ ಹೆಲ್ತ ಕಿಟ್ ವಿತರಣೆ

0

ಶ್ರೀಮಂತ ಪಾಟೀಲ ಫೌಂಡೇಶನ್ ನಿಂದ ಪತ್ರಕರ್ತರಿಗೆ ಹೆಲ್ತ ಕಿಟ್ ವಿತರಣೆ

ಕೊರೊನಾ ವಾರಿಯರ್ ಗಳಾಗಿ ಕರ್ತವ್ಯ ನೀರ್ವಹಿಸುತ್ತಿರುವ ಪ್ರಂಟ್ ಲೈನ್ ವಾರಿಯರ್ ಪತ್ರಕರ್ತರು ಮತ್ತು ಅವರ ಕುಟುಂಬದ ರಕ್ಷಣೆಗೆ ಅಲ್ಪಸಂಖ್ಯಾತ ಮತ್ತು ಜವಳಿ ಖಾತೆ ಸಚೀವ ಶ್ರೀಮಂತ ಪಾಟೀಲ ಮಿಡಿಯುವ ಮೂಲಕ ಮಾನವೀಯತೆ ತೋರಿದ್ದಾರೆ.ಕೆಂಪವಾಡ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಇಂದು ನಲವತ್ತಕ್ಕೂ ಹೆಚ್ಚು ಪತ್ರಕರ್ತರಿಗೆ ಆರೋಗ್ಯ ಸುರಕ್ಷತಾ ಕಿಟ್ ವಿತರಿಸಲಾಯಿತು.

ಲಾಕ್ ಡೌನ್ ನಡುವೆಯೂ ಪತ್ರಕರ್ತರು ತಮ್ಮ ಜೀವದ ಹಂಗು ತೊರೆದು ಸಮಾಜದ ಸ್ವಾಸ್ಥ್ಯ ಕ್ಕಾಗಿ ನಿರಂತರವಾಗಿ ವರದಿ ಮಾಡುತ್ತ ಸಮಾಜಮುಖಿ ಕೆಲಸದಲ್ಲಿ ತೊಡಗಿದ್ದು ಅವರನ್ನು ಗೌರವಿಸುವ ಮತ್ತು ಬೆನ್ನು ತಟ್ಟುವ ಕೆಲಸವನ್ನು ಮಾಡುವ ಅಗತ್ಯ ಇದೆ ಆದ್ದರಿಂದ ಈಗಾಗಲೇ ಶ್ರೀಮಂತ ಪಾಟೀಲ ಫೌಂಡೇಶನ್ ವತಿಯಿಂದ ಕಾಗವಾಡ ಮತಕ್ಷೇತ್ರದ ಎಂಟು ಪಂಚಾಯತಿ ವ್ಯಾಪ್ತಿಯ ಇಪ್ಪತ್ತೆರಡು ಗ್ರಾಮಗಳಲ್ಲಿ ಈಗಾಗಲೇ ಐದು ಟನ್ ಹೈಪೋಕ್ಲೋರೈಡ ಸಿಂಪಡಣೆ ಮಾಡಲಾಗಿದ್ದು

,ಸ್ಯಾನೀಟೈಜರ್ ಸೇರಿದಂತೆ ಐವತ್ತು ಲಕ್ಷರೂಪಾಯಿ ವೆಚ್ಚದಲ್ಲಿ ಎಲ್ಲ ಅಂಗನವಾಡಿ ಮತ್ತು ಪಂಚಾಯತಿ ಹಾಗೂ ಅಥಣಿ ಕಾಗವಾಡ ಕುಡಚಿ ಮತ್ತು ಐಗಳಿ ಪೋಲಿಸ್ ಠಾಣೆ ಸೇರಿದಂತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ಹಂಚಲಾಗಿದ್ದು ಇಂದು ಪತ್ರಕರ್ತ ಮಿತ್ರರ ಆರೋಗ್ಯದ ಹಿತದೃಷ್ಟಿಯಿಂದ

ಸ್ಯಾನಿಟೈಜರ್,ಫೇಸ್ ಸಿಲ್ಡ,ಥರ್ಮಾಮೀಟರ್,ಆಕ್ಸಿ ಮೀಟರ್,ಪಿಪಿಇ ಕಿಟ್,ವಿಟಮಿನ್ ಸಿ ಟ್ಯಾಬ್ಲೆಟ್ ಸೇರಿದಂತೆ ನಲವತ್ತು ಜನರಿಗೆ ಹೆಲ್ತ ಕಿಟ್ ಗಳನ್ನು ವಿತರಿಸಿದ್ದೇವೆ ಎಂದು ಬಿಜೆಪಿ ಮುಖಂಡ ನಾನಾಸಾಬ್ ಅವತಾಡೆ ಹೇಳಿದರು. ಈ ವೇಳೆ ಸಚಿನ್ ದೇಸಾಯಿ,ರಾಜು ಮಾನೆ,ರಾಜು ಡೊಳ್ಳಿ,ಪ್ರಶಾಂತ ಅಪರಾಜ,
ವಿನಾಯಕ ಶಿಂಧೆ,ಸೇರಿದಂತೆ ಹಲವರು ಉಪಸ್ಥಿತರಿದ್ದರು.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');