ಅಣ್ಣಪ್ಪ ಬಜಂತ್ರಿ ಸ್ನೇಹಿತರ ಬಳಗದಿಂದ ಬಡವರಿಗೆ ಸಹಾಯ ಹಸ್ತ

0
ಅಥಣಿ ಶಾಸಕ ಮಹೇಶ್ ಕುಮಠಳ್ಳಿ ಅಭಿಮಾನಿ ಗೆಳೆಯರ ಬಳಗದಿಂದ ಬಡ ಕುಟುಂಬಗಳಿಗೆ ಸುಮಾರು ಒಂದು ಲಕ್ಷ ಹದಿನೈದು ಸಾವಿರ ರೂಪಾಯಿ ಮೊತ್ತದಲ್ಲಿ ದಿನಸಿ ಕಿಟ್ ವಿತರಣೆ ಮಾಡಲಾಯಿತು.ಗವಿಸಿದ್ದನ ಮಡ್ಡಿಯ ಬಜಂತ್ರಿ ಸಮುದಾಯದ ಮುಖಂಡ ಅಣ್ಣಪ್ಪ ಬಜಂತ್ರಿ ನೇತೃತ್ವದಲ್ಲಿ ಅಥಣಿ ಪಟ್ಟಣದ ಗವಿಸಿದ್ದನ ಮಡ್ಡಿ,ಮುರಗುಂಡಿ, ಮತ್ತು ಸಂಕೋನಟ್ಟಿ ಗ್ರಾಮದ ಎರಡನೂರಕ್ಕೂ ಹೆಚ್ಚು  ಬಡ ಕುಟುಂಬಗಳಿಗೆ ಗೋದಿ ಐದು ಕೇಜಿ,ಅವಲಕ್ಕಿ ಒಂದು ಕೇಜಿ, ಸಕ್ಕರೆ ಅರ್ಧ‌ ಕೇಜಿ,ತೊಗರಿ ಬೇಳೆ ಚೆನ್ನಂಗಿ ಬೇಳೆ ಅರ್ಧ ಕೇಜಿ, ಅಡುಗೆ ಎಣ್ಣೆ ಅರ್ದ ಕೇಜಿ,ಒಂದು ಸೋಪ್ ಸೇರಿದಂತೆ ಹದಿನೈದು ದಿನಗಳಿಗೆ ಆಗುವಷ್ಟು ಪಡಿತರ ವಿತರಣೆ ಮಾಡಲಾಯಿತು.
ಕೊರೊನಾ ಸಂಕಷ್ಟದ ಸಮಯದಲ್ಲಿ ಲಾಕ್ ಡೌನ ಇಂದಾಗಿ ದಿನನಿತ್ಯದ ದುಡಿಮೆ ಅವಲಂಬಿಸಿ ಜೀವನ ಸಾಗಿಸುತ್ತಿದ್ದ ಕುಟುಂಬಗಳು ಸದ್ಯ ಉದ್ಯೋಗ ಇಲ್ಲದೆ ಪರದಾಡುವಂತಾಗಿದ್ದು  ಹಸಿವಿನಿಂದ ಯಾರೂ ಪರದಾಡುವಂತೆ ಆಗಬಾರದು ಎಂದು ಅಣ್ಣಪ್ಪ ಬಜಂತ್ರಿ ಹೇಳಿದರು.ಈ ವೇಳೆ ಉತ್ತಮ ಸಂಕ,ವಿರೇಂದ್ರ ಕಾಗವಾಡೆ,ಪ್ರಶಾಂತ ಬೊಮ್ಮನ್ನವರ,ಮಹಂತೇಶ್ ಬನಸೋಡೆ,ರಾಜು ಕುಮಠಳ್ಳಿ,ಹನುಮಂತ ಬಜಂತ್ರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');