ಪೋಲಿ ಅಲೆಯುವ ಜನರಿಗೆ ಪೋಲಿಸರ ಬಿಸಿ

0
ಅಥಣಿ ಪಟ್ಟಣದಲ್ಲಿ ರಾಜ್ಯಾದ್ಯಂತ ಲಾಕ್ ಡೌನ್ ಮುಂದುವರೆದ ಹಿನ್ನೆಲೆಯಲ್ಲಿ ಅಥಣಿ ಪೋಲಿಸ್ ಮತ್ತು ತಾಲ್ಲೂಕು ಪಂಚಾಯತ ಹಾಗೂ ಕಂದಾಯ ಇಲಾಖೆಯಿಂದ ಜಂಟಿ ಕಾರ್ಯಾಚರಣೆ ನಡೆಸಲಾಯಿತು. ಅನವಶ್ಯಕ ವಾಗಿ ಅಲೆಯುವ ಬೈಕ್ ಸವಾರರನ್ನು ತಡೆದ ಪೋಲಿಸರು ಬೈಕ್ ಗಳನ್ನು ಸೀಜ್ ಮಾಡಿದರು.ಸರ್ಕಾರ ದಿನಸಿ ವಸ್ತುಗಳು ಹಾಲು ತರಕಾರಿಯಂತಹ ಅಗತ್ಯ ವಸ್ತುಗಳ ಖರೀದಿಗೆ ಸಮಯ ನಿಗದಿಪಡಿಸಿದ್ದರೂ ಕೂಡ ಅನಗತ್ಯವಾಗಿ ಅಲೆಯುವ ಜನರಿಗೆ ಕಡಿವಾಣ ಹಾಕಲು ಬೈಕ್ ಸೀಜ್ ಮತ್ತು ದಂಡ ವಿಧಿಸುವ ಕಾರ್ಯ ಅಗತ್ಯವಿದ್ದು ವಿನಾಕಾರಣ ಮಾರುಕಟ್ಟೆಗೆ ಬರುವ ಮತ್ತು ಪೋಲಿ ಅಲೆಯುವ ಜನರಿಗೆ ಇಂದು ಪೋಲಿಸರು ಬಿಸಿ ಮುಟ್ಟಿಸಿದರು.
ಈ ವೇಳೆ ಮೂವತ್ತಕ್ಕೂ ಹೆಚ್ಚು ಬೈಕ್ ಗಳನ್ನು ವಶಕ್ಕೆ ಪಡೆಯಲಾಯಿತು ಇಲ್ಲಿಯವರೆಗೆ ಅಥಣಿ ಪೋಲಿಸರಿಂದ 320 ಕ್ಕೂ ಅಧಿಕ ಬೈಕಗಳನ್ನು ವಶಕ್ಕೆ ಪಡೆಯಲಾಗಿದೆ. ಲಾಕ್ ಡೌನ ಅನ್ನು ಸರ್ಕಾರ ಜೂನ್ ಹದಿನಾಲ್ಕರವರಗೆ ಮುಂದೂಡಿದ್ದು ಅಥಣಿ ತಾಲ್ಲೂಕಿನ ಟಾಸ್ಕ್ ಪೊರ್ಸ ಕಮೀಟಿಯಿಂದ ಶಿಸ್ತು ಕ್ರಮ ಜರುಗಿಸುವ ಮೂಲಕ ಅಥಣಿ ತಾಲೂಕಿನಲ್ಲಿ ಕೊರೊನಾ ಸೊಂಕು ಇಳಿಮುಖವಾಗುವಂತೆ
 ಶ್ರಮಿಸಲಾಗುತ್ತಿದೆ.
ಅಲ್ಲದೆ ಗ್ರಾಮೀಣ ಭಾಗದಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ತಾಲ್ಲೂಕು ಪಂಚಾಯತ, ಕಂದಾಯ ಇಲಾಖೆ,ಪೋಲಿಸ್ ಇಲಾಖೆ ಮತ್ತು ಅಂಗನವಾಡಿ ಕಾರ್ಯಕರ್ತರು,ಆಶಾ ಕಾರ್ಯಕರ್ತರ ಸಹಕಾರದೊಂದಿಗೆ ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸಿ ಕೊರೊನಾ ಲಕ್ಷಣಗಳು ಇದ್ದರೆ ಟೆಸ್ಟ ಮಾಡಿಸುವಂತೆ ಜನರ ಮನ ಒಲಿಸಲಾಗುತ್ತಿದೆ ಎಂದು ತಾಲ್ಲೂಕು ಪಂಚಾಯತ ಅಧಿಕಾರಿ ರವಿಬಂಗಾರಪ್ಪನ ಹೇಳಿದರು.ಈ ವೇಳೆ ಪಿ ಎಸ್ ಐ ಕುಮಾರ ಹಾಡಕಾರ,ಉಪತಹಶಿಲ್ದಾರ ಮಹದೇವ ಬಿರಾದಾರ ಮತ್ತು ಪೋಲಿಸ್ ಸಿಬ್ಬಂದಿ ಉಪಸ್ಥಿತರಿದ್ದರು.
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');