ಅಂಕಲಿಯ ಮೊಬೈಲ್ ಅಂಗಡಿಯಲ್ಲಿ ಕಳ್ಳತನ ಮಾಡಿದ್ದ ಆರೋಪಿಗಳ ಬಂಧನ

0

ಚಿಕ್ಕೋಡಿ: ತಾಲೂಕಿನ ಅಂಕಲಿ ಗ್ರಾಮದಲ್ಲಿ ಮೊಬೈಲ್ ಅಂಗಡಿಯನ್ನು ಒಡೆದು ಕಳ್ಳತನ ಮಾಡಿ, ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಅಂಕಲಿ ಪೊಲೀಸರು ಬುಧುವಾರ ರಾತ್ರಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಹಾರಾಷ್ಟ್ರದ ಶಿರೋಳ ತಾಲೂಕಿನ ಔರವಾಡ ಗ್ರಾಮದ ಅಮೀನ ಪಟೇಲ್ ಹಾಗೂ ಸಂಜಯ ಭಂಡಾರೆ ಬಂಧಿತ ಆರೋಪಿಗಳಾಗಿದ್ದಾರೆ.

ಪೊಲೀಸರು ಈ ಇಬ್ಬರು ಆರೋಪಿಗಳನ್ನು ಬಂಧಿಸಿ, ಅವರಿಂದ ಅವರಿಂದ 1,81,998 ರೂ.ಗಳ ಮೊತ್ತದ ವಿವಿಧ ಕಂಪನಿಯ ಮೊಬೈಲ್‍ಗಳು ಮತ್ತು ಒಂದು ದ್ವಿಚಕ್ರ ವಾಹನವನ್ನು ವಶಕ್ಕೆ ತೆಗೆದುಕೊಂಡು ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಪ್ರಕರಣದ ಹಿನ್ನೆಲೆ:

ಅಂಕಲಿ ಗ್ರಾಮದಲ್ಲಿ ಮೇ. 9 ರಂದು ಮೊಬೈಲ್ ಅಂಗಡಿಯ ಬಾಗಿಲು ಮುರಿದು, ಅಂಗಡಿಯಲ್ಲಿದ್ದ 1,81,998 ರೂ. ಮೊತ್ತದ ವಿವಿಧ ಕಂಪನಿಯ ಮೊಬೈಲ್‍ಗಳನ್ನು ಮತ್ತು ಒಂದು ದ್ವಿಚಕ್ರ ವಾಹನವನ್ನು ಕದ್ದು ಪರಾರಿಯಾಗಿದ್ದರು.

ಕಳ್ಳರ ಪತ್ತೆಗಾಗಿ ಬೆಳಗಾವಿ ಎಸ್ಪಿ ಲಕ್ಷ್ಮಣ ನಿಂಬರಗಿ ಹಾಗೂ ಚಿಕ್ಕೋಡಿ ಡಿಎಸ್ಪಿ ಮನೋಜಕುಮಾರ ನಾಯಕ ಹಾಗೂ ಸಿಪಿಐ ಆರ್.ಆರ್.ಪಾಟೀಲರ ನೇತೃತ್ವದಲ್ಲಿ ಅಂಕಲಿ ಪಿಎಸ್‍ಐ ಎಲ್.ಎಂ. ಆರಿಯವರು ಕಳ್ಳರನ್ನು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಂಕಲಿ ಪೊಲೀಸ ಠಾಣೆ ಸಿಬ್ಬಂದಿ ಎಸ್.ಎಸ್. ಅರಬಾಂವಿ, ಎನ್.ಎಸ್. ಪರಮಾನಟ್ಟಿ, ಆರ್.ಎಸ್.ಖೋತ, ಎ.ಎಸ್.ಸಪ್ತಸಾಗರ, ಎಸ್.ಟಿ. ಪೂಜಾರಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.////

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');