ಸಂಚಾರಿ ಆಸ್ಪತ್ರೆ ಉದ್ಘಾಟಿಸಿದ ಡಿಸಿಎಮ್ ಸವದಿ

0
 ಅಥಣಿ: ಪಟ್ಟಣದಲ್ಲಿ ಕೊರೊನಾ ತಡೆಗಟ್ಟುವ ನಿಯಂತ್ರಣ ಕ್ರಮವಾಗಿ ಡಿಸಿಎಮ್ ಹಾಗೂ ಸಾರಿಗೆ ಸಚೀವ ಲಕ್ಷ್ಮಣ ಸವದಿ ಅವರು ಇಂದು ಸುಸಜ್ಜಿತ ಪ್ರಥಮ ಚಿಕಿತ್ಸೆ ಬಸ್ ಹಾಸ್ಪಿಟಲ್ ಆನ್ ವ್ಹೀಲ್ಸ ನ ಉದ್ಘಾಟನೆ ಮಾಡಿದರು.
ಕೆ ಎಸ್ ಆರ್ ಟಿ ಸಿ ಯಿಂದ ಪರಿವರ್ತನೆ ಗೊಳಿಸಿ ಕೊಡಲಾದ ಈ ಬಸ್ಸಿನಲ್ಲಿ ಆಕ್ಸಿಜನ್  ಕಾನ್ಸಂಟ್ರೇಟ್ ಅಳವಡಿಸಿದ ನಾಲ್ಕು ಬೆಡ್, ವೆಂಟಿಲೇಟರ್ ಸಹಿತ ಒಂದು ಬೆಡ್ ಸೇರಿದಂತೆ ಆಸ್ಪತ್ರೆ ಸಿಬ್ಬಂದಿ ಇರಲಿದ್ದು ಸಂಚಾರಿ ಚಿಕಿತ್ಸಾ ಘಟಕವಾಗಿಯೂ ಇದನ್ನು ಬಳಸಬಹುದಾಗಿದೆ.
 ಉದ್ಘಾಟನೆ ನೆರವೇರಿಸಿ ಮಾತನಾಡಿದ ಡಿಸಿಎಮ್ ಲಕ್ಷ್ಮಣ ಸವದಿ,ಕೊರೊನಾ ಎರಡನೆಯ ಅಲೆಯ ಕಾರಣದಿಂದಾಗಿ ಕರ್ನಾಟಕದಲ್ಲಿ ಎರಡು ಹಂತದ ಲಾಕ್ ಡೌನ ಮಾಡಲಾಗಿತ್ತು, ಎಲ್ಲರಿಗೂ ತಿಳಿದಂತೆ ಸದ್ಯ  ಇಳಿಮುಖ ಆಗಿದೆ.ತಜ್ಞರ ಸಲಹೆ ಮತ್ತು ಮಾಹಿತಿ ಆಧಾರದಲ್ಲಿ 15 ದಿನಗಳ ಲಾಕಡೌನ್  ಮುಂದುವರೆಸಲಾಗಿತ್ತು ಪ್ರತಿದಿನ ಸೊಂಕಿತರ ಸಂಖ್ಯೆ ಪ್ರತಿದಿನ ೫೦೦೦ ದಷ್ಟು ಇಳಿಮುಖವಾಗಿದ್ದು ಕರ್ನಾಟಕದಲ್ಲಿ ಸಮಾಧಾನಕರ ಸ್ಥಿತಿ ಇದೆ.ಮೂರನೆ ಅಲೆಗೆ ಸಜ್ಜಾಗುವ ವಿಚಾರವಾಗಿ ದೂರ ದೃಷ್ಟಿ ಇಟ್ಟುಕೊಂಡು ಚಿಕ್ಕಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಸಾರಿಗೆ ಇಲಾಖೆಯಲ್ಲಿ  ಒಂಭತ್ತರಿಂದ  ಹತ್ತು ಲಕ್ಷ ಸಾವಿರ ಕಿಮೀ ಓಡಿದ ಬಸ್ಸುಗಳನ್ನು  ಬಳಸಿಕೊಂಡು ಕಡಿಮೆ ದರದಲ್ಲಿ ಗುಜ್ಜರಿ ಹಾಕಬೇಕಿದ್ದ ಬಸ್ಸುಗಳನ್ನು ಚಿಕಿತ್ಸೆಗಾಗಿ ಸಂಚಾರಿ ಆಸ್ಪತ್ರೆಯಾಗಿ ಬಳಸಿಕೊಳ್ಳಲಾಗುತ್ತಿದೆ
ಬಹಳಷ್ಟು  ಪ್ರಾಥಮಿಕ ಆರೋಗ್ಯ ಕೆಂದ್ರದಲ್ಲಿ ಆಕ್ಸಿಜನ್ ಬೆಡ್ ಗಳು ಇಲ್ಲದ ಸಮಯದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಲು ಮೊಬೈಲ್ ಆಸ್ಪತ್ರೆಗಳನ್ನು ಈ ರೀತಿ ಆರಂಭಿಸಿದ್ದೇವೆ.ನಾಲ್ಕು ಆಕ್ಸಿಜನ್ ಬೆಡ್ ಒಂದು ವೆಂಟಿಲೇಟರ್ ಇರುವ ಬಸ್ ಆರಂಭಿಸಿದ್ದು ಬೆಂಗಳೂರು, ರಾಯಚೂರು,ಕೊಪ್ಪಳ, ಬೆಳಗಾವಿ ಸೇರಿದಂತೆ ಹಲವೆಡೆ ಈ ರೀತಿಯ ಬಸ್ಸುಗಳನ್ನು ಬಳಸಲಾಗುತ್ತಿದೆ
ರಾಜ್ಯದ ಎಲ್ಲ ಶಾಸಕರು ಲೋಕಸಭಾ ಸದಸ್ಯರು ಆಸ್ಪತ್ರೆ ಕೊರತೆ ಇರುವ ಕಡೆ ತುರ್ತು ಚಿಕಿತ್ಸೆ ಕೊಡಲು ಸಹಕರಿಸಬೇಕಾದ ಅಗತ್ಯವಿದ್ದು ಒಂದು ಬಸ್ ಸಿದ್ದವಾಗಲು ಎಂಟರಿಂದ ಹತ್ತು ಲಕ್ಷ ರೂಪಾಯಿ ಖರ್ಚಾಗುತ್ತದೆ ಆದ್ದರಿಂದ ತಮ್ಮ ಅನುದಾನದಲ್ಲಿ ಈ ಬಸ್ಸುಗಳನ್ನು ಬಳಸಿಕೊಳ್ಳಬೇಕು.ರಾಜ್ಯದಲ್ಲಿ ಕೊರೊನಾ ತಡೆಯಲು ಇಂತಹ ಗುಜರಿ ಬಸ್ಸುಗಳನ್ನು ಸದುಪಯೋಗ ಪಡಿಸಿಕೊಳ್ಳುವ ಅಗತ್ಯವಿದೆ ಎಂದರು
ಇನ್ನೂ ಪ್ರಾಥಮಿಕ ಆರೋಗ್ಯ ಕೆಂದ್ರಗಳಲ್ಲಿ ಸುಸಜ್ಜಿತ ವ್ಯವಸ್ಥೆಯ ಚಿಕಿತ್ಸೆಗೆ ಮೂಲಭೂತ ಪರಿಕರಗಳನ್ನು ಹೊಂದಿಸಲು ವಿಳಂಬವಾಗುವದರಿಂದ ಅಥಣಿಯಲ್ಲಿ ವಿಶೇಷವಾಗಿ ನಮ್ಮ ಕ್ಷೇತ್ರದಲ್ಲಿ ಆರಂಭಿಕವಾಗಿ ಈ ಬಸ್ಸನ್ನು ಇಂದು ಹಸ್ತಾಂತರ ಮಾಡುತ್ತಿದ್ದೇವೆ ಪಟ್ಟಣದ ಹೊರವಲಯದ
ರಾಣಿ ಚೆನ್ನಮ್ಮ ಶಾಲೆಯಲ್ಲಿ ಈಗಾಗಲೇ 50 ಬೆಡ್ ಆಸ್ಪತ್ರೆ ಆರಂಭಿಸಿದ್ದು ಸರ್ಕಾರದ ಅನುದಾನ ಹೊರತು ಪಡಿಸಿ 98 ಲಕ್ಷ ವೆಚ್ಚದ ಆಕ್ಸಿಜನ್ ತಯಾರಿಕಾ ಘಟಕ ಕೂಡ ಸದ್ಯದಲ್ಲೇ ಆರಂಭವಾಗಲಿದೆ ಜೊತೆಗೆ ದಿನವೊಂದಕ್ಕೆ 390 ಲೀಟರ್ ನಷ್ಟು ಆಮ್ಲಜನಕ ಉತ್ಪಾದಿಸುವ ಆಕ್ಸಿಜನ್ ಪ್ರೊಡಕ್ಷನ್ ಯುನಿಟ್ ಕೂಡ ಸಿದ್ದವಾಗುತ್ತಿದ್ದು ಒಟ್ಟು ನಾಲ್ಕನೂರು ಬೆಡ್ ಗಳಿಗೆ ಆಕ್ಸಿಜನ್ ಸಿಗಲಿದೆ.
ಈಗಾಗಲೆ ಸಾವು ನೋವುಗಳನ್ನು ತಪ್ಪಿಸುವುದಕ್ಕಾಗಿ ಅಥಣಿ ಸರ್ಕಾರಿ ಆಸ್ಪತ್ರೆಗೆ ಎರಡು ಅಂಬುಲೆನ್ಸ ಕೊಟ್ಟಿದ್ದೇವೆ.
ಬಡರೋಗಿಗಳ ಡಯಾಲಿಸಿಸ್ ಚಿಕಿತ್ಸೆಗಾಗಿ ಶಾಸಕರ ನಿಧಿಯಿಂದ ಮಷಿನ್ ಅಳವಡಿಕೆ ಮಾಡಿದ್ದೇವೆ.ಎಂದರಲ್ಲದೆ
ವ್ಯಾಕ್ಸಿನ್ ಕೊರತೆ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ದೊಡ್ಡ ಪ್ರಮಾಣದಲ್ಲಿ ವ್ಯಾಕ್ಸಿನ್ ಬಗ್ಗೆ ಅಪಪ್ರಚಾರ ಆಗಿದ್ದರಿಂದ ಜನರು ವ್ಯಾಕ್ಸಿನ್ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ.
ಅನಿವಾರ್ಯವಾಗಿ ವ್ಯಾಕ್ಸಿನ್ ಹಾಳಾಗದ ರೀತಿಯಲ್ಲಿ ಬಳಕೆ ಮಾಡುವ ಉದ್ದೇಶದಿಂದ ವಿದೇಶಗಳಿಗೆ ಪೂರೈಸಲಾಗಿತ್ತು ಸದ್ಯ ಜನರು ವ್ಯಾಕ್ಸಿನ್ ಪಡೆಯಲು ಮುಂದೆ ಬರುತ್ತಿದ್ದು ವ್ಯಾಕ್ಸಿನ್ ಗಾಗಿ ಬೇಡಿಕೆ ಇದೆ. ಕರ್ನಾಟಕ ರಾಜ್ಯವು ದಕ್ಷಿಣ ಭಾರತದಲ್ಲಿಯೇ ವ್ಯಾಕ್ಸಿನ್ ಕೊಡುವಲ್ಲಿ ನಂಬರ ಒನ್ ಸ್ಥಾನದಲ್ಲಿ ಇದೆ  ಎಂದರು
ಈ ಸಂದರ್ಭದಲ್ಲಿ ತಾಲೂಕಾ ದಂಡಾಧೀಕಾರಿ ದುಂಡಪ್ಪ ಕೋಮಾರ ಉಪ ತಹಶಿಲ್ದಾರ  ಮಾಹದೇವ ಬಿರಾದಾರ, ಡಾ, ಬಸನಗೌಡ ಕಾಗೆ ಡಾ, ಸಿ ಎಸ್ ಪಾಟೀಲ್, ಡಿವೈಎಸ್ ಎಸ್ ವಿ ಗೀರಿಶ, ಸಿಪಿಐ ಶಂಕರಗೌಡ ಬಸನಗೌಡ,
ಬಿಜೆಪಿ ಮುಖಂಡರಾದ ಶ್ರೀಶೈಲ ನಾಯಕ್, ದತ್ತ ವಾಸ್ಟರ,ದಿಲೀಪ್ ಲೋನಾರೆ,ಶಿವಾನಂದ ದಿವಾನಮಾಳ,ಶಿವಾನಂದ್ ನಾಯಕ್, ಎಸ್ ಆರ್ ಗುಳ್ಳಪ್ಪನವರ,ಪ್ರದೀಪ ನಂದಗಾವ, ಕುಮಾರ್ ಪಾಟೀಲ್, ರಾಜು ನಾಯಿಕ  ,ಹಾಗೂ ಮತ್ತಿತರು ಉಪಸ್ಥಿತರಿದ್ದರು
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');