ಪಿಡಬ್ಬ್ಲ್ಯೂಡಿ ಸರಕಾರಿ ಜಾಗ ಕಂದಾಯ ಇಲಾಖೆ ಯಡವಟ್ಟು ಸರಕಾರಿ ಜಮೀನು ಗುಳುಂ ಬಡವರ ಮೇಲೆ ಚಿಕ್ಕೋಡಿ ಖಾಕಿ ದರ್ಪ ತೋರಿಸಿದ್ರಾ ?

0

ಬೆಳಗಾವಿ:ಚಿಕ್ಕೋಡಿ: ಕಂದಾಯ ಇಲಾಖೆ ಯಡವಟ್ಟು ಸರಕಾರಿ ಜಮೀನು ಗುಳುಂ   ಮಾಡಿದ್ರಾ ಚಿಕ್ಕೋಡಿ ತಹಸೀಲ್ದಾರರು ಬಡವರ ಮೇಲೆ  ಖಾಕಿ ದರ್ಪ ತೋರಿಸಿದ್ರಾ ಚಿಕ್ಕೋಡಿ ಪಿಎಸ್ಐ ಹೌದು  ಉತಾರನಲ್ಲಿ ಕರ್ನಾಟಕ ಸರ್ಕಾರ ಇತ್ತು ಈಗ ನಾಲ್ಕು ಜನ  ಮಾಲೀಕರ ಹೆಸರಿನಲ್ಲಿ ಉತಾರ ಗೋಲಮಾಲ್ ಮಾಡಿ  ಉತಾರ ಮಾಡಿಸಿರುವ ಆರೋಪ ಕೇಳಿ ಬರುತ್ತಿದೆ.

ಹೌದು ಚಿಕ್ಕೋಡಿ ತಾಲೂಕಿನ ಪಿಡಬ್ಬ್ಲ್ಯೂಡಿ ಸರಕಾರಿ ಜಾಗ ಉತಾರನಲ್ಲಿ ಮಾಲೀಕನ ಹೆಸರು ಗೋಲಮಾಲ್ ಮಾಡಿದ ಚಿಕ್ಕೋಡಿ  ತಹಸೀಲ್ದಾರರು ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಜಾಗನೂರು ಗ್ರಾಮದ ಹೊರವಲಯದಲ್ಲಿ ನೀರಾವರಿ ಇಲಾಖೆ ಜಮೀನು ಇದ್ದು ಈ ಸರ್ಕಾರಿ ಜಮೀನನ್ನು ಅಕ್ರಮವಾಗಿ ನಾಲ್ಕು ಜನರ ಹೆಸರಿನಲ್ಲಿ ಉತಾರ ಮಾಡಿದ ಚಿಕ್ಕೋಡಿ ಕಂದಾಯ ಇಲಾಖೆಯವರು ಇದೀಗ ಹಲವು ಅನುಮಾನಗಳಿಗೆ ಈಡಾಗಿದ್ದಾರೆ. ಹಿಡಕಲ್  ಜಲಾಶಯದದಿಂದ ಹರಿಯುವ ಬಲದಂಡೆ ಕಾಲುವೆಯ 15 ನೆ ಕಿಲೋಮೀಟರ್ ಕಲ್ಲಿನ ಹತ್ತಿರ ಇರುವ 204/1 ಈ ಪಿಡಬ್ಬ್ಲ್ಯೂಡಿ ಸರಕಾರಿ ಜಾಗ ಇದ್ದು ಇದನ್ನು ಅಕ್ರಮವಾಗಿ ಇವರುಗಳು ಹೆಸರಿನಲ್ಲಿ ಉತಾರ (ಪಹಣಿ ) ಮಾಡಿದ್ದಾರೆ.

ಬಸಪ್ಪ ಪರಸಪ್ಪ ಮಂಗಿ   ಪ್ರಕಾಶ ಪರಸಪ್ಪ ಮಂಗಿ    ಲಕ್ಷ್ಮಣ ಪರಸಪ್ಪ ಮಂಗಿ   ಮಹಾದೇವ ಪರಸಪ್ಪ ಮಂಗಿ         ಹಾಗಾದರೆ ಸರ್ಕಾರಿ ಜಮೀನು ನಮಗೂ ಮಾಡಿ ಕೊಡಲಿ ಎಂದು ಆ ಭಾಗದ ಜನ ತಹಸೀಲ್ದಾರರಿಗೆ ಮನವಿ ಮಾಡುತ್ತಿದ್ದಾರೆ. ಸರಕಾರಿ ಜಮೀನು ಸರಕಾರಿ ಆಸ್ತಿ ಅರಣ್ಯ ಇಲಾಖೆ ಹೀಗೆ ಹಲವಾರು ಇಲಾಖೆಯ ಆಸ್ತಿ ಪಾಸ್ತಿ ಇದ್ದು ಅದು ಯಾವಾಗಲು ಸರ್ಕಾರದ್ದೇ ಆಗುತ್ತದೆ ಆದರೆ ಚಿಕ್ಕೋಡಿ ಕಂದಾಯ ಇಲಾಖೆಯವರು ಚೆಕಬಂದಿ ನೋಡದೆ ಈ ಜಮೀನು ಮಾರಿಬಿಟ್ಟಿದ್ದಾರೆ. ಎಷ್ಟಕ್ಕೆ ಸೇಲ್ ಆಯ್ತು ಎಂದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟ ಹಾಗೆ ಆಗಿದೆ.

ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು. ಯಲವ್ವ ಮ ಮಂಗಿ ಎನ್ನುವ ಮಹಿಳೆ 14 ವರ್ಷಗಳಿಂದ ಆ ಜಮೀನನ್ನು ಉಳುಮೆ ಮಾಡಿಕೊಂಡು ತನ್ನ ಉಪಜೀವನ ಮಾಡುತ್ತಿದ್ದರು. ಜೊತೆಗೆ ಮೂಲ ವಂಶಜರೆಲ್ಲರೂ ಇಲ್ಲೇ ಉಳುಮೆ ಮಾಡಿಕೊಂಡು ಬಂದವರು ಇದೀಗ ಈ ಜಮೀನು ನಿಮ್ಮದಲ್ಲ ಎಂದು ಆಗಾಗ ಪರಸ್ಪರ ತಂಟೆ ತಕರಾರು ಮಾಡುತ್ತಿದ್ದರು.

ತಂಟೆ ತಕರಾರು ಬಗ್ಗೆ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದಾಗ ಗೊತ್ತಾಯ್ತು ಇದು ಸರ್ಕಾರಿ ಪಿಡಬ್ಲ್ಯೂಡಿ ಜಮೀನು ಅಂತಾ ಪಹಣಿಯಲ್ಲಿ ಹೆಸರು ಇರುವ  ಎಲ್ಲರೂ ಕೂಡಿ  ಚಿಕ್ಕೋಡಿ ಪೊಲೀಸ್ ಠಾಣೆಗೆ ದೂರು ನೀಡಿ ಈ ಜಮೀನು ನಮ್ಮ ಹೆಸರಿನಲ್ಲಿ ಇದೆ ಸರ್ ನಮ್ಮ ಕಬ್ಜಾ ಹೆಸರು ಕೊಡಿ ಎಂದು ದೂರು ನೀಡಿದ್ದರೂ ಈ ದೂರಿನನ್ವಯ ಚಿಕ್ಕೋಡಿ ಪಿಎಸ್ಐ ಸ್ಥಳಕ್ಕೆ ಭೇಟಿ ನೀಡಿ ಎರಡು ಪಾರ್ಟಿಗಳನ್ನು ಪೊಲೀಸ್ ಠಾಣೆಗೆ ಕರೆಯಿಸಿ ಕೇಸ್ ದಾಖಲಿಸಬೇಕಾಗಿತ್ತು ಜಾಗನೂರು ಗ್ರಾಮದಲ್ಲಿ ಪಂಚರ ಸಮಕ್ಷಮ ಬಗೆಹರಿಸಿಕೊಳ್ಳಿ ಸುಮ್ಮನೆ ತಂಟೆ-ತಕರಾರು ಮಾಡಿಕೊಳ್ಳಬೇಡಿ ಎಂದು ಬುದ್ಧಿವಾದ ಹೇಳಿ ಮರಳಿ ಠಾಣೆಗೆ ಹೋದರು ಪಹನಿ ಹೆಸರಿನಲ್ಲಿ ಇರುವವರು ನಾಲ್ಕು ಜನ ಅವರಿಗೆ ನಿಮ್ಮ ಹೊಲ  ಬಿಟ್ಟುಕೊಡಿ ಸುಮ್ಮನೆ ಅದು ಇದು ಅಂತ ಬೇಕಾಬಿಟ್ಟಿ ಕತೆ ಹೇಳಬೇಡಾ  ಮಾತನಾಡಬೇಡಿ ಹಾಗೇನಾದರೂ ಆದರೆ ನಿನ್ನ ಮೇಲೆ ಕೇಸ್ ದಾಖಲಿಸುತ್ತೇನೆ ಎಂದು ಬೆದರಿಕೆ ಹಾಕಿದರು.ಎಂದು  ಸಣ್ಣರಾಮ ಪುಕಾಟೆ  ಅವರು ಆರೋಪ ಮಾಡಿದ್ದಾರೆ.

ಇಷ್ಟೆಲ್ಲಾ ಆಗುವುದರೊಳಗೆ ಪಿಎಸ್ಐ ಬುದ್ಧಿವಾದ ಹೇಳಿ ಜಾಗನೂರಿನಿಂದ  ಹೊರಟರು ಹತ್ತೇ ನಿಮಿಷದಲ್ಲಿ  ಸಾಹೇಬ್ರು ಜೀಪು ಎಲ್ಲೋ ಕೇವಲ ಎರಡು ಕಿಲೋಮೀಟರ್ ದಾಟಿರಲಿಲ್ಲ ವಿರೋಧಿ ಪಾರ್ಟಿಯ ಬಸಪ್ಪ ಮಂಗಿ ಪ್ರಕಾಶ್ ಮಂಗಿ ಲಕ್ಷ್ಮಣ ಮಂಗಿ  ಮಹಾದೇವ ಮಂಗಿ ಹಾಗೂ ಇನ್ನೂ ಎರಡು ನೂರು ಜನ ಸೇರಿ ಯಲ್ಲವ್ವ್  ಮಂಗಿ  ಮಾಲಿಂಗ ಮಂಗಿ ಲಕ್ಷ್ಮೀ ಕೋಣಿ  ಹಾಗೂ ಸಣ್ಣರಾಮ್ ಪುಕಾಟೆ ಸಿದ್ರಾಮ್ ಇವರನ್ನು ವಿರೋಧಿ ಪಾರ್ಟಿಯ ಸಂಗನ ಮತವಾಗಿ ಕೂಡಿಬಂದು ಎಲ್ಲರೂ ಹೊಡಿಬಡಿ ಮಾಡಿ ಕಲ್ಲು ಕಟ್ಟಿಗೆಯಿಂದ ಬಡಿದು ಕೈ ಕಾಲು ಮುರಿದು ಎಲ್ಲರಿಗೂ ದೊಡ್ಡ ಪ್ರಮಾಣದಲ್ಲಿ ಗಾಯ ಮಾಡಿದ್ದಾರೆ.

ಅದಲ್ಲದೇ ಹೊಡೆದಾಟದ ಸಮಯದಲ್ಲಿ ಆಡು ಕುರಿ-ಮೇಕೆ ಎಮ್ಮೆ ಮೂಕ ಪ್ರಾಣಿಗಳನ್ನು ಕೂಡ ಜೀವ ಹೋಗುವ ಹಾಗೆ ಹೊಡೆದರು ಅಲ್ಲಿದ್ದ ಪಾರಿವಾಳಗಳ ಗುಂಪು ಅಲ್ಲಿರುವ ಕೋಳಿಗಳಿಗೆ ನಾಯಿಗಳಿಗೆ ಕೀಟನಾಶಕದ ಔಷಧಿ ಕುಡಿಸಿ ಎಲ್ಲವುಗಳನ್ನು ಕೊಂದು ಬಿಟ್ಟಿದ್ದರು. ಮನೆ ಮೇಲೆ ಕಲ್ಲು ಹೊಡೆದು ಸಂಪೂರ್ಣ ಜಖಂ ಮಾಡಿದ್ದಾರೆ.

ಗಲಾಟೆಯಲ್ಲಿ ಹೆಣ್ಣುಮಕ್ಕಳ ಬಂಗಾರದ ಒಡವೆಗಳನ್ನು ಕೂಡಾ ಕಿತ್ತುಕೊಂಡು  ಪರಾರಿಯಾಗಿದ್ದಾರೆ ಎಲ್ಲಾ ಸಾಕ್ಷಿ ಪುರಾವೆಗಳು ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದೇವೆ ನನ್ನ ಮೊಬೈಲ್ ಪೊಲೀಸರೇ ಕಸಿದುಕೊಂಡು ಹೋಗಿದ್ದಾರೆ  ಇನ್ನು ತನಕ ನನ್ನ ಮೊಬೈಲ್ ಕೊಟ್ಟಿಲ್ಲ ಬಡೆದಾಟ ಆದ ತಕ್ಷಣ ಸಣ್ಣರಾಮ ಪುಕಾಟೆಯವರು ಪಿಎಸ್ಐ ಇವರಿಗೆ ಫೋನ್ ಮಾಡಿದ್ದಾರೆ ಹಲೋ ಸರ್ ಇದೀಗ ಬಂದಿದ್ರಿ ಮತ್ತೆ ಅವರು ನಮ್ಮನ್ನು ಸಾಕಷ್ಟು ಹೊಡಿಬಡಿ ಮಾಡ್ತಾ ಇದ್ದಾರೆ ಸರ್  ಬನ್ನಿ ಎಂದು ಹೇಳಿದಾಗ ಪಿಎಸ್ಐ ನೋಡಪ್ಪ ನಿಮ್ಮ ಜಗಳ ಬಗೆಹರಿಸಲಿ ಕ್ಕೆ ನಾನೇನು ಖಾಲಿ ಇಲ್ಲ ನಾನು ರಜೆದಲ್ಲಿ ಇದ್ದೇನೆ ಎಂದು ಫೋನ್ನಲ್ಲಿ ಮಾತನಾಡುತ್ತಾರೆ.

ಜಾಗನೂರು ನಿಂದ ಕೇವಲ ಎರಡು ಕಿಲೋಮೀಟರ್ ದೂರ ಹೋದ ಪಿಎಸ್ಐ  ರಜೆ ಹೇಗೆ ಪಡೀತಾರೆ  ಸದರಿ ಹೊಡಿಬಡಿ ಮಾಡಿದ ವಿಡಿಯೋ ಗಳೆಲ್ಲವೂ ನಮ್ಮ ಪತ್ರಿಕೆಗೆ ಲಭ್ಯವಾಗಿವೆ. ಹೊಡೆದಾಟದಲ್ಲಿ ಇರುವ ವಿಡಿಯೋನಲ್ಲಿ ನೂರಕ್ಕಿಂತ ಹೆಚ್ಚು ಜನ ವಿಡಿಯೋ ನಲ್ಲಿ ಕಾಣಿಸಿಕೊಂಡರು ಎಫ್ ಐ ಆರ್ ನಲ್ಲಿ  8 ಜನರ ಮೇಲೆ ಕೇಸ್ ದಾಖಲಿಸಿದ್ದಾರೆ. ಇದು ಕೂಡ ಹಲವು ಸಂಶಯಾಸ್ಪದಕ್ಕೆ ಹಾದಿಯಾಗಿದೆ   ಜಗಳ ಬಡೆದಾಟ ಹೊಡೆದಾಟ ಮುಗಿದನಂತರ 112 ಗೆ ಕರೆ  ಮಾಡಿ ಆಂಬುಲೆನ್ಸ್ ಗೆ  ಫೋನ್ ಮಾಡಿ ಗೋಕಾಕ್ ಆಸ್ಪತ್ರೆಗೆ ದಾಖಲಾಗುತ್ತಾರೆ.

ಆಸ್ಪತ್ರೆಗೆ ದಾಖಲಾದ ಮರುದಿನವೇ ಪೊಲೀಸರು ಮೆಡಿಕಲ್ ಲಿಗಲ್ ಕೇಸ್ MLC  ಮಾಡಲು ಆಸ್ಪತ್ರೆಗೆ ಬರುತ್ತಾರೆ ಅಲ್ಲಿ PSI ಫೋನ್ ಮಾಡಿ  ಹಾಗೂ ಇನ್ನುಳಿದ ಎಲ್ಲರಿಗೂ ನಾನು ಹೇಳಿದ ಕಂಪ್ಲೇಂಟನ್ನು ಮಾತ್ರ ಕೊಡಬೇಕು ನಿಮಗೆ ಹೇಳಿದನ್ನ ಕಂಪ್ಲೇಂಟ್ ಕೊಡಬಾರದು ಇಲ್ಲಾಂದ್ರೆ ನಿನ್ನ ಬಿಡೋದಿಲ್ಲ ಅಂತ ಜೀವ ಬೆದರಿಕೆ ಹಾಕಿದ್ದಾರೆ ಪಿಎಸ್ಐ ಅವರು ಎಂದು  ಸಣ್ಣರಾಮ ಪುಕಾಟೆ  ಆರೋಪಿಸಿದ್ದಾರೆ ಮಾಡುತ್ತಿದ್ದಾರೆ.

ಇಷ್ಟೆಲ್ಲ ಅನಾಹುತ ಗಲಾಟೆಯ ಹೊಡೆದಾಟ-ಬಡಿದಾಟಕ್ಕೆ ಚಿಕ್ಕೋಡಿ ಪಿಎಸ್ಐ ಸಾಹೇಬ್ರೆ ನೇರ್ ಹೊಣೆ ಎಂದು ಇಷ್ಟೆಲ್ಲಾ ಸಮಸ್ಯೆ ಆಗಲಿಕ್ಕೆ ಪಿಎಸ್ಐ ಸಾಹೇಬರೇ ಕಾರಣ ಎಂದು ಸಿದ್ದರಾಮ್ ಇನ್ನೂ ಗಂಭೀರವಾಗಿ ಆರೋಪಿಸಿದ್ದಾರೆ ಸಿವಿಲ್ ಮ್ಯಾಟರ್ ರಲ್ಲಿ ಪೊಲೀಸರ ಕೆಲಸ ಕಾನೂನುಪ್ರಕಾರ ಇರುತ್ತದೆ ಆದರೆ ಅವರು ಅಲ್ಲಿ ಬಂದು ದಬ್ಬಾಳಿಕೆ ಮಾಡಿ ನಮ್ಮನ್ನು ಹೊಡಿಬಡಿ ಮಾಡಿದ್ದಾರೆ ಎಂದು ದೂರ ಕೊಟ್ಟವರು ಗಂಭೀರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನ್ಯಾಯ ಕೊಡಿಸಬೇಕಾದ  ಪಿಎಸ್ಐ   ನಮ್ಮಣ್ಣu ಠಾಣೆಗೆ ಕರಿಸಿ ಬಾ ಇಲ್ಲೇ ಪಂಚರ ಸಮಕ್ಷಮ ಬಗೆಹರಿಸೋಣ ಎಂದು ಠಾಣೆಗೆ ಕರೆಸಿ ಬೇಕಾಬಿಟ್ಟಿ ಹೊಡಿಬಡಿ ಮಾಡಿ ಜೀವ ಬೆದರಿಕೆ ಹಾಕಿ  ಅಂದರೆ ನಿನ್ನನ್ನು ಜೀವಸಹಿತ ಬಿಡುವದಿಲ್ಲ ಎಂದು ಮಾತನಾಡಿದ್ದಾರೆ. ಇಷ್ಟೆಲ್ಲಾ ಇರಲಿ ಮೊದಲು ಈ ಜಮೀನು ಯಾರದು ಕರ್ನಾಟಕ ಸರ್ಕಾರದ ಇರುವ ಉತಾರ್ ದಿಡೀರನೆ ಮಾಲಕಿ ಜಮೀನು ಹೇಗಾಗುತ್ತದೆ ಎಂದು ಸ್ವಲ್ಪನಾದರೂ ಪಿಎಸ್ಐ ವಿಚಾರಣೆ ಮಾಡಬೇಕಾಗಿತ್ತು ನಕಲಿ ದಾಖಲೆ ಸೃಷ್ಟಿಸಿ ಪಹಣಿ ಮಾಡಿರುವವರು ಯಾರು ಎಂದು ಎನ್ಕ್ವೈರಿ ಮಾಡಿ ಜೈಲಿಗೆ ಕಳಿಸಬೇಕಾದ ಪಿಎಸ್ಐ ಯಲ್ಲವ್ವ ಮಂಗಿ ಸಣ್ಣ ರಾಮ ಫುಕಾಟೆ ಸಿದ್ರಾಮ್ ಕೊನೆ ಲಕ್ಷ್ಮೀ ಕೊನೆ  ಇವರ ಮೇಲೆ ಕಾಖಿ ದರ್ಪ ತೋರಿದ್ದಾರೆ.
 ಪೊಲೀಸ್ ಠಾಣೆಗಳು ಇರುವುದು ಯಾಕೆ  ಎಫ್ ಐ ಆರ್  ದಾಖಲೆ ಮಾಡುವ ಸಲುವಾಗಿ ಪಂಚರ ಸಮಕ್ಷಮ ಬಗೆಹರಿಸುವುದು ಆದರೆ ಪೊಲೀಸ್ ಠಾಣೆಗಳ ಕೆಲಸ ಏನು ಕೋರ್ಟ್ ಕಚೇರಿ ಮಾಡಿದ್ದು ಯಾರ ಸಲುವಾಗಿ ಅದನ್ನೆಲ್ಲ ಬಿಟ್ಟು ನಮ್ಮ ಮೇಲೆ ನಮಗೆ ಜೀವ ಬೆದರಿಕೆ ಹಾಕಿರುವ ಪಿಎಸ್ಐ ನೋಡಪ್ಪ ನಿನಗೆ ಅನುಕೂಲ ಮಾಡುತ್ತೇನೆ ನೀನು ನನಗೆ ಭೇಟಿಯಾಗು ನಾನು ನಿನಗೆ ಠಾಣೆಯಲ್ಲಿ ಹೇಳುತ್ತೇನೆ ಎಂದು ಪಿಎಸ್ಐ ಹೇಳಿದಹಾಗೆ ನಾನು ಠಾಣೆಗೆ ಹೊದೆ ಆಗ    ನನ್ನ ಕರೆಸಿ ಎಷ್ಟು ಹಣ ಕೊಡುತ್ತಿ ಹೇಳು ನಾನು ನಿನಗೆ ಸಹಾಯ ಮಾಡುತ್ತೇನೆ ಎಂದು ಸಣ್ಣ ರಾಮನನ್ನು ಕೇಳಿದಾಗ ಸರ್ ನಾವು ದುಡಿದು ತಿನ್ನುವವರು ಬಡವರು ನಮ್ಮ ಹತ್ತಿರ ದುಡ್ಡು ಇಲ್ಲ ದಯಮಾಡಿ ನಮಗೆ ಕಾನೂನು ಪ್ರಕಾರ ಸಹಾಯ ಮಾಡಿ ಎಂದು ರಾಮ ಕೇಳಿದ್ದಾನೆ.
ಎರಡು ಲಕ್ಷ ಹಣ ಕೊಟ್ಟರೆ ನಿನಗೆ ಸಹಾಯ ಮಾಡುತ್ತೇನೆ ಎಂದು ಹೇಳಿದರು ಅಷ್ಟು ಹಣ ಇಲ್ಲ ಸರ್ 10 ಸಾವಿರ ರೂಪಾಯಿ ಕೊಡುತ್ತೇನೆ ಮಾಡಿಕೊಡಿ ಎಂದ ಸಣ್ಣ ರಾಮನಿಗೆ ಮತ್ತೆ ಬಿತ್ತು ಲಾಠಿ ಏಟು ಅಷ್ಟೊಂದು ಹಣ ಎಲ್ಲಿಂದ ತರಲಿ ಸರ್ ನಾನು ಬಡವ ಎಂದಿದ್ದಕ್ಕೆ ಮತ್ತೆ ನನ್ನನ್ನು ಬಡೆದರೂ ಸರ್ ಹಾಗಾಗಿ ನ್ಯಾಯಕ್ಕಾಗಿ ಅಲೆದಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಭೇಟಿಯಾಗಲು ಬೆಳಗಾವಿಗೆ ಹೋದೆ ಆದರೆ ಅಲ್ಲಿರುವ ಪೊಲೀಸರು ನನ್ನನ್ನು ಒಳಗೆ ಬಿಡಲಿಲ್ಲ ನಾನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಭೇಟಿಯಾಗಲಿಕ್ಕೆ ಪೊಲೀಸರು ಅನುಮತಿ ನೀಡಲಿಲ್ಲ ಹಾಗಾಗಿ ನಾವು ಮತ್ತೆ ಮರಳಿ ಮನೆಗೆ ಬಂದೆವು ಆದರೂ ಆಯ್ತು ಎಂದು ನಾನು rs.20000 ಜೋಡಿನಿ ಮಾಡಿಕೊಂಡು ಪಿಎಸ್ಐ ರಾಕೇಶ್ ಬಗಲಿ ಅವರ ಕೈಯಲ್ಲಿ ಕೊಟ್ಟು ಬಂದೆ ಆದರೂ ಕೂಡ ನಮಗೆ ಸಹಾಯ ಮಾಡದೆ ಅವರಂತೆ ಮಾಡಿ ಅವರಿಗೆ ಮುಂದೆ ನಿಲ್ಲಿಸಿ ಹೊಲ ಉಳುಮೆ ಮಾಡುವಂತೆ ಅವರಿಗೆ ಆದೇಶ ನೀಡಿದರು.
 ಪಿಎಸ್ಐ ಅವರೆ  ಜಮೀನು ಯಾವ ಮಾಲ್ಕಿ ಜಮೀನು ಅಲ್ಲ ಅದು ಸರಕಾರಿ ಪಿಡಬ್ಲ್ಯುಡಿ ಇಲಾಖೆಯ ಜಮೀನು ನಿಮಗಾದರೂ ಸ್ವಲ್ಪ ತಿಳಿಯಲಿಲ್ಲವೆ ಇದು ಪಹಣಿ ಉತಾರ ಹೇಗೆ ಮಾಡಿದರೂ ಯಾರು ಗೋಲ್ಮಾಲ್ ಮಾಡಿದ್ದಾರೆ ಸ್ವಲ್ಪ ನೀವೂ ಕೂಡಾ  ವಿಚಾರ ಮಾಡಲಿಲ್ಲವೆ?
ಮೇಲಾಧಿಕಾರಿಗಳು ತನಿಖೆ ಮಾಡಬೇಕೆಂದುಮೇಲಾಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಅನ್ಯಾಯವಾದ ಕುಟುಂಬಕ್ಕೆ ನ್ಯಾಯ ಕೊಡಿಸುವ ಹಾಗೆ ಮಾಡಿ ತಪ್ಪಿತಸ್ಥರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೀರಿ ಎಂದು ನಂಬಿದ್ದೇವೆ.
ವಿಡಿಯೋನಲ್ಲಿ ಹೊಡಿಬಡಿ ಮಾಡಿರುವ 150 ಜನರ  ಗುಂಪು ಯಾವೂರದು ಅವರ  ವಿರುದ್ಧ ಎಫ್ ಐ ಆರ್ ದಾಖಲಿಸಬೇಕು. ಶೀಘ್ರವೇ ತಾಸಿಲ್ದಾರರು ಸ್ಥಳಕ್ಕೆ ಭೇಟಿ ನೀಡಿ ಪಿಡಬ್ಲ್ಯುಡಿ ಇಲಾಖೆಗೆ ಸಂಬಂಧಿಸಿದ ಜಮೀನನ್ನು ಸರ್ಕಾರಕ್ಕೆ ಒಪ್ಪಿಸುವ ಕೆಲಸವನ್ನು ದಿಡೀರನೆ ಮಾಡಬೇಕೆಂದು ಸಣ್ಣರಾಮ ಪುಕಾಟೆ ಯವರು ಪತ್ರಿಕೆ ಮುಖಾಂತರ ಅಧಿಕಾರಿಗಳಿಗೆ  ಬೇಡಿಕೊಂಡಿದ್ದಾರೆ. ಮಾನ್ಯ ಜಿಲ್ಲಾಧಿಕಾರಿಗಳು ಕೂಡ ಸರ್ಕಾರಿ ಜಮೀನನ್ನು ಆಕ್ರಮಣ ಮಾಡಿರುವವರ ವಿರುದ್ಧ ಪ್ರಕರಣ ದಾಖಲಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');