ಬೆಳಗಾವಿಯಲ್ಲಿ ಕಳ್ಳಭಟ್ಟಿ, ಅಕ್ರಮ ಮದ್ಯ ಮರಾಟ : ಓರ್ವನ ಬಂಧನ, ಮತ್ತೋರ್ವ ಪರಾರಿ

0

ಬೆಳಗಾವಿ : ಯಮಕನಮರಡಿ ಗ್ರಾಮದ ಮನೆಯೊಂದರಲ್ಲಿ ಅಕ್ರಮವಾಗಿ ಕಳ್ಳ ಭಟ್ಟಿ ಹಾಗೂ, ವಿವಿಧ ಬಗೆಯ ಸಾರಾಯಿ  ಮಾರಾಟ ಮಾಡುತ್ತಿದ್ದ ಓರ್ವ ವ್ಯಕ್ತಿಯನ್ನು ಪೊಲೀಸರು ಇಂಂದು ಬಂಧಿಸಿದ್ದು, ಮತ್ತೊರ್ವ ಪರಾರಿಯಾಗಿದ್ದಾನೆ.

ಈರಪ್ಪ ಯಲ್ಲಪ್ಪಾ ಗೊರವ ಬಂಧಿತನಾಗಿದ್ದು, ಪ್ರಕಾಶ ಬಸಪ್ಪಾ ಬರಗಾಲಿ ಪರಾರಿಯಾಗಿದ್ದಾನೆ. ಈತನಿಗೆ ಪೊಲೀಸರು ಬಲೆ ಬಿಸಿದ್ದಾರೆ.

ಹುಲ್ಯಾನೂರಗ ಗ್ರಾಮದಿಂದ ಯಮಕನಮರಡಿ ಗ್ರಾಮಕ್ಕೆ ಕಳ್ಳಭಟ್ಟಿ ಹಾಗೂ ವಿವಿಧ ಬಗ್ಗೆ ಸಾರಾಯಿಗಳನ್ನು ತಂದು ಮಾರಾಟ ಮಾಡಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಬೆಳಗಾವಿ ಉತ್ತರ ಅಬಕಾರಿ ಉಪ ಆಯುಕ್ತ ನಿರ್ದೇಶನದ ಮೇರೆಗೆ ಶನಿವಾರ  ಅಬಕಾರಿ ಪೊಲೀಸರು  ದಾಳಿ ನಡೆಸಿದ್ದಾರೆ.

ಬಂಧಿತನಿಂದ 30 ಲೀ ಸಾಮರ್ಥ್ಯದ 8 ರಬ್ಬರ್ ಟ್ಯೂಬ್ ಗಳಲ್ಲಿ  ಒಟ್ಟು 240 ಲೀಟರ್ ಕಳ್ಳಭಟ್ಟಿ, ವಿವಿಧ ನಮೂನೆಯ ಒಟ್ಟು 91.980 ಲೀಟರ್ ಸಾರಾಯಿ, ಒಟ್ಟು 4.950 ಲೀಟರ್ ಬಿಯರ್ ಅನ್ನು ವಶ ಪಡಿಸಿಕೊಂಡಿದ್ದಾರೆ.////

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');