ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಜೊಲ್ಲೆ ಸಮೂಹ ಸಂಸ್ಥೆಯಿಂದ ಹೆಲ್ತ ಕಿಟ್ ವಿತರಣೆ

0

 

ಕಾಗವಾಡ:ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯ ಕಾಗವಾಡ ಪಟ್ಟಣದಲ್ಲಿ, ಬಿಜೆಪಿ “ಸೇವಾಹೀ ಸಂಘಟನ್” ಅಭಿಯಾನದಡಿ ಜೊಲ್ಲೆ ಉದ್ಯೋಗ ಸಮೂಹ ಹಾಗೂ ಪಕ್ಷದ ವತಿಯಿಂದ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಕೋವಿಡ್-19 ತಪಾಸಣಾ ಕಿಟ್, ಅಗತ್ಯವಿರುವವರಿಗೆ ಹೋಮ್ ಐಸೋಲೇಶನ್ ಕಿಟ್ ಗಳನ್ನ ಸಂಸದ ಅಣ್ಣಾಸಾಬ ಜೊಲ್ಲೆ ಹಾಗೂ ಸಚಿವರಾದ ಶ್ರೀಮಂತ ಪಾಟೀಲ ಅವರ ಜೊತೆಗೂಡಿ ವಿತರಣೆ ಮಾಡಿದರು

ಈ ವೇಳೆ ಮಾತನಾಡಿದ ಮಾತನಾಡಿದ ಸಂಸದ ಅಣ್ಣಾಸಾಬ ಜೊಲ್ಲೆ,ಕೊರೋನಾ ಸೋಂಕು ನಿವಾರಿಸಲು ನಿರಂತರವಾಗಿ ಶ್ರಮಿಸುತ್ತಿರುವ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಅವರ ಸೇವೆಗೆ ಸಲ್ಲಿಸುತ್ತಿರುವದನ್ನ ಗಮನಿಸಿ ನಾವು ಅವರಿಗೆ ನಮ್ಮ ಜೊಲ್ಲೆ ಸಮೂಹ ಸಂಸ್ಥೆ ವತಿಯಿಂದ ಹೆಲ್ತ ಕಿಟ್ ನೀಡಲಾಗುತ್ತಿದ್ದೆ ಅವರು ಅವರವರ ಕುಟುಂಬದ ಸುರಕ್ಷತೆ ಮಾಡಿಕೊಳ್ಳುವದಲ್ಲದೇ ತಮ್ಮ ಕಾರ್ಯವ್ಯಾಪ್ತಿಯಲ್ಲಿನ ಪ್ರತಿ ಮನೆಗೂ ಭೇಟಿ ನೀಡಿ, ಅಗತ್ಯ ಸೇವೆ ಒದಗಿಸುವಂತೆ ಅವರಿಗೆ ಹೇಳಿದರು

ನಂತರ ಮಾತನಾಡಿದ ಜವಳಿ ಸಚಿವ ಶ್ರೀಮಂತ ಪಾಟೀಲ್ ನಮ್ಮ ಕಾಗವಾಡ ಮತಕ್ಷೇತ್ರದಲ್ಲಿ ಕೊರೊನಾ ಹಿಮ್ಮೆಟ್ಟಿಸಲು ಅವರತವಾಗಿ ಶ್ರಮಿಸಲಾಗಿತ್ತಿದೆ ಅದರಂತೆ ಸಂಸದ ಅಣ್ಣಾಸಾಬ ಜೊಲ್ಲೆ ಅವರು ನಮ್ಮ ಜೊತೆ ಕೈಜೋಡಿಸಿದ್ದಾರೆ ನಾವೆಲ್ಲರೂ ಸೇರಿ ಕೊರೊನಾ ಮುಕ್ತ ಕ್ಷೇತ್ರ ಮಾಡಲು ಪಣ ತೊಟ್ಟಿದ್ದೇವೆ ಅದರಂತೆ ನಾವಷ್ಟೇ ಜಾಗಯ ವಹಿಸಿದರೆ ಸಾಲದು ಸಾರ್ವಜನಿಕರು ಸಹಕರಿಸಿಬೇಕು ಆಗ ಮಾತ್ರ ಕೊರೊನಾ ಹೋಗಲಾಡಿಸಲು ಸಾಧ್ಯವಿದೆ ಎಂದರು.

ಈ ಸಂದರ್ಭದಲ್ಲಿ ತಹಶೀಲ್ದಾರಾದ ಶ್ರೀಮತಿ ಪ್ರಮೀಳಾ ದೇಶಪಾಂಡೆ, ತಾ.ಪಂ. ಅಧಿಕಾರಿ ಈರಣ್ಣ ಏಗನಗೌಡರ, ಸಿಡಿಪಿಒ ಸಂಜೀವಕುಮಾರ ಸದಲಗೆ, ಸ್ವಪ್ನೀಲ ಪಾಟೀಲ, ರಮೇಶ ಚೌಗಲೆ, ಸ್ಥಳೀಯ ಮುಖಂಡರು ಹಾಗೂ ಗಣ್ಯರು ಉಪಸ್ಥಿತರಿದ್ದರು

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');