ಐಸಿಎಆರ್-ಕೆಎಲ್‍ಇ ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಶ್ವ ಪರಿಸರ ದಿನಾಚರಣೆ

0

ಮತ್ತಿಕೊಪ್ಪದ ಐಸಿಎಆರ್-ಕೆಎಲ್‍ಇ ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಕೇಂದ್ರದ ಮುಖ್ಯಸ್ಥೆ ಶ್ರೀಮತಿ ಶ್ರೀದೇವಿ ಅಂಗಡಿಯವರು ತೋಟಗಾರಿಕೆ ಸಸಿಗಳನ್ನು ನೆಡುವುದರ ಮೂಲಕ ಪರಿಸರ ದಿನಾಚರಣೆಗೆ ಚಾಲನೆ ನೀಡಿದರು. ಪರಿಸರ ದಿನಾಚರಣೆ ಅಂಗವಾಗಿ “ಕೃಷಿ ಹವಾಮಾನ ಬದಲಾವಣೆಯ ಪರಿಣಾಮ” ಕುರಿತು ರೈತರಿಗೆ ಆನ್‍ಲೈನ್ ತರಬೇತಿಯನ್ನು ಹಮ್ಮಿಕೊಳ್ಳಲಾಯಿತು.

ಅರಭಾವಿ ಕಿತ್ತೂರ ಚೆನ್ನಮ್ಮಾ ತೋಟಗಾರಿಕೆ ಮಹಾವಿದ್ಯಾಲಯದ ಬೇಸಾಯ ಶಾಸ್ತ್ರಜ್ಞ ಡಾ. ವಿಜಯ ಮಹಾಂತೇಶ ಮಾತನಾಡಿ ಪ್ರತಿ ವರ್ಷ ಪರಿಸರ ಮಾಲಿನ್ಯವಾಗುತ್ತಿದೆ. ಇದಕ್ಕೆ ಮಾನವನ ಅವೈಜ್ಞಾನಿಕ ನಡೆ ಮುಖ್ಯ ಕಾರಣವಾಗಿದೆ. ಈ ಪರಿಣಾಮದಿಂದ ಹವಾಮಾನದ್ಲಲಿ ಬದಲಾವಣೆಗೊಂಡು ಅತಿವೃಷ್ಠಿ ಮತ್ತು ಅನಾವೃಷ್ಠಿಗಳು ಸಂಭವಿಸುತ್ತಿವೆ. ಇದು ಕೃಷಿ ಕ್ಷೇತ್ರದ ಮೇಲೆ ನೇರವಾಗಿ ಪರಿಣಾಮವನ್ನು ಬೀರಿ ಜಮೀನಿನ ಉತ್ಪಾದನಾ ಸಾಮಥ್ರ್ಯ ಕುಂಠಿತಗೊಳ್ಳುತ್ತಿದೆ. ಆದ್ದರಿಂದ ರೈತರು ರಾಸಾಯನಿಕ ಪರಿಕರಗಳನ್ನು ಕಡಿಮೆ ಮಾಡಿ ಸಾವಯವ ವಸ್ತುಗಳನ್ನು ಹೆಚ್ಚು ಬಳಸಬೇಕು, ಇದರಿಂದ ಉತ್ಪಾದನೆಯಲ್ಲಿ ಸ್ಥಿರತೆ ಕಾಯ್ದುಕೊಂಡು ಪರಿಸರದ ಹಾನಿಯನ್ನು ಕಡಿಮೆಮಾಡಬೇಕೆಂದು ಕರೆ ನೀಡಿದರು.

ಪರಿಸರ ದಿನಾಚರಣೆಯ ಕುರಿತು ಮಾತನಾಡಿದ ಕೇಂದ್ರದ ವಿಜ್ಞಾನಿ ಎಸ್. ಎಮ್. ವಾರದ, ವಿಶ್ವದಲ್ಲೆಡೆ ಜೂನ್ 5 ರಂದು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಮಾನವನ ಅವೈಜ್ಞಾನಿಕ ಚಟುವಟಿಕೆಗಳಿಂದ ಪರಿಸರ ಮಾಲಿನ್ಯ ಅಧಿಕಗೊಂಡು ಪರಿಸರ ವ್ಯವಸ್ಥೆಗೆ ಧಕ್ಕೆ ಉಂಟಾಗಿ ಪರಿಸರ ವ್ಯವಸ್ಥೆ ಅತ್ಯಂತ ಗಂಭೀರ ಹಂತ ತಲುಪಿದೆ.

ಈ ಹಿನ್ನಲೆಯಲ್ಲಿ ವಿಶ್ವ ಸಂಸ್ಥೆಯು ಪ್ರತಿವರ್ಷ ಪರಿಸರದ ಕುರಿತು ಜನರ ಗಮನ ಸೆಳೆಯಲು ಘೋಷವಾಕ್ಯದೊಂದಿಗೆ ಈ ದಿನಾಚರಣೆಯನ್ನು ಆಚರಿಸುತ್ತಿದೆ. “ಪರಿಸರ ವ್ಯವಸ್ಥೆಯ ಮರು ಸ್ಥಾಪನೆ” ಈ ವರ್ಷದ ಫೋಷವಾಕ್ಯಯಾಗಿದೆ. ಪರಿಸರ ವ್ಯವಸ್ಥೆಯು ಜೀವಿಗಳು ಮತ್ತು ನಿಸರ್ಗದ ನಡುವಿನ ಸಂಕೀರ್ಣ ವ್ಯವಸ್ಥೆಯಾಗಿದೆ

. ಆದರೆ ಇಂದು ಮಾನವನ ಅಗತ್ಯಗಳನ್ನು ಪೂರೈಸಿಕೊಳ್ಳುವ ದಿಕ್ಕಿನಲ್ಲಿ ಆತ ನಿಯಮಿತವಾಗಿ ಈ ವ್ಯವಸ್ಥೆಯನ್ನು ನಾಶ ಮಾಡುತ್ತಿದ್ದಾನೆ. ಹಿಂದಿನ ದಿನಗಳಲ್ಲಿ ಪರಿಸರ ಸಮೃದ್ಧವಾಗಿದ್ದು ಜೀವಿಗಳ ಮತ್ತು ನಿಸರ್ಗದ ಸಂಬಂಧಗಳು ಸಮತೋಲವಾಗಿತ್ತು. ಅಂತಹ ಪರಿಸರ ವ್ಯವಸ್ಥೆಯನ್ನು ಮರು ಸ್ಥಾಪಿಸುವುದು ಕಷ್ಟ ಸಾಧ್ಯ. ಆದರೆ ಈ ವ್ಯವಸ್ಥೆಯನ್ನು ಹಾನಿಯಾಗದಂತೆ ಮುನ್ನೆಚ್ಚರಿಕೆ ವಹಿಸಿ ಮಾರ್ಗೋಪಾಯಗಳನ್ನು ಅಳವಡಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದರು.

ಪರಿಸರ ದಿನಾಚರಣೆಯಲ್ಲಿ ಕೇಂದ್ರದ ವಿಜ್ಞಾನಿಗಳಾದ ಡಾ. ಎಸ್. ಎಸ್. ಹಿರೇಮಠ, ಜಿ. ಬಿ. ವಿಶ್ವನಾಥ ಹಾಗೂ ಪ್ರವೀಣ ಯಡಹಳ್ಳಿ ಉಪಸ್ಥಿತರಿದ್ದರು ಹಾಗೂ ಆನ್‍ಲೈನ್ ತರಬೇತಿಯಲ್ಲಿ ಜಿಲ್ಲೆಯ 40 ರೈತರು ಭಾಗವಹಿಸಿದ್ದರು.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');