ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಗಿಡ ಬೆಳೆಸಿ ಜೀವ ಉಳಿಸಿ

0

ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ  ಗಿಡ ಬೆಳೆಸಿ ಜೀವ ಉಳಿಸಿ ಎಂದು ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ ಆಸ್ಪತ್ರೆಯ ನಿರ್ದೇಶಕರಾದ ಡಾ. ಎಸ್ ಸಿ ಧಾರವಾಡ ಮಾತನಾಡುತ್ತಿದ್ದರು. ಅವರು ಇಂದು ನಗರದ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ, ವಿಶ್ವ ಪರಿಸರ ದಿನಾಚರಣೆಯ ನಿಮಿತ್ತವಾಗಿ ಮತನಾಡುತ್ತಿದ್ದರು. ಪ್ರಸ್ತುತ ಕೊರೊನಾ-19 ರ ಅವಧಿಯಲ್ಲಿ ಕೃತಕ ಆಮ್ಲಜನಕವನ್ನು ಕೊಂಡುತೆಗೆದುಕೊಳ್ಳುತ್ತಿರುವದು ನಿಜಕ್ಕೂ ಖೇದಕರವೆನ್ನಿಸುತ್ತದೆ. ನಮ್ಮ ಭಾರತದೇಶzಲ್ಲಿರುವ ಪ್ರತಿಯೊಬ್ಬ ಪ್ರಜೆಯೂ ಒಂದು ಗಿಡವನ್ನು ನೆಟ್ಟರೆ ನಮ್ಮ ದೇಶ ಹಸಿರಿನಿಂದ ಸಮೃಧ್ದವಾಗಿರುತ್ತದೆ. ಯಾವುದೇ ರೋಗ ರುಜಿನಗಳಲ್ಲದೇ ಆರೋಗ್ಯಯುತವಾದ ಜೀವನ ನಡೆಸಬಹುದಾಗಿದೆ ಎಂದು ತಿಳುವಳಿಕೆ ನೀಡಿದರು.

ಈ ಸಮಯದಲ್ಲಿ ಉಪಸ್ಥಿತರಿದ್ದ ಹಿರಿಯ ವೈದ್ಯರು ಹಾಗೂ ಮೆಡಿಸಿನ್ ವಿಭಾಗದ ಮುಖ್ಯಸ್ಥರೂ ಆದ ಡಾ. ಆರ್ ಆರ್ ವಾಳ್ವೆಕರ ಮಾತನಾಡುತ್ತ ಇಂದಿನ ದಿನ ವಿಶೇಷವಾಗಿದ್ದು ಎಲ್ಲರೂ ನಮ್ಮನ್ನೆಲ್ಲ ಸಾಕಿ ಸಲಹುತ್ತಿರುವ ಪೃಕೃತಿ ಮಾತೆಗೆ ನಾವು ಗಿಡ ನೆಡುವ ಮೂಲಕ ಕೃತಜ್ಞತೆ ಸಲ್ಲಿಸಬೇಕಿದೆ. ಇದು ಪ್ರತಿಯೊಬ್ಬರೂ ಪಾಲ್ಗೊಂಡು ರೂಢಿಯಲ್ಲಿ ತರಬೇಕಿದೆ ಎಂದು ತಿಳುವಳಿಕೆ ನೀಡಿದರು.
ಕಾರ್ಯಕ್ರಮದಲ್ಲಿ ಹಿರಿಯ ವೈದ್ಯರಾದ ಡಾ. ಬಿ ಎಸ್ ಮಹಾಂತಶೆಟ್ಟಿ, ಹಿರಿಯ ಶಸ್ತ್ರಚಿಕಿತ್ಸಜ್ಞ ಡಾ. ಎಸ್ ಟಿ ವೇದಭೂಷಣ ಹಾಗೂ ಆಸ್ಪತ್ರೆಯ ಸಿಬ್ಬಂದಿ ಮಾಸ್ಕ ಧರಿಸಿ ಅಂತರ ಕಾಯ್ದುಕೊಂಡು ಉಪಸ್ಥಿತರಿದ್ದರು

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');