ಅನೈತಿಕ ಸಂಬಂಧಕ್ಕೆ ಪತಿ ಅಡ್ಡಿಯಾಗಿದ್ದಾನೆಂದು ಪತಿ ಕೊಲೆ

0

ಬೆಳಗಾವಿ: ಅನೈತಿಕ ಸಂಬಂಧಕ್ಕೆ ಪತಿ ಅಡ್ಡಿಯಾಗಿದ್ದಾನೆಂದು ಅವನನ್ನು ಕೊಲೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಮುಗಳಿಹಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಲಕ್ಷ್ಮಣ ತಿಪ್ಪಣ್ಣಾ ಮುಂಜಿ (38), ಮೃತ ದುರ್ದೈವಿ ಆಗಿದ್ದು ಬುಧವಾರ ಮಧ್ಯಾಹ್ನದಂದು ಮೃತನ ಜಮೀನಿನೊಂದರ ಮನೆಯಲ್ಲಿ ಆತನ ಪತ್ನಿ ಉದ್ದವ್ವ ಲಕ್ಷ್ಮಣ ಮಂಜಿ ಮತ್ತು ಈಕೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಮೆಳ್ಳಿಕೇರಿ ನಿವಾಸಿ ಅರ್ಜುನ ಆರೇರ ಈ ಕೃತ್ಯ ಎಸಗಿದ್ದಾರೆ.

ಇವರಿಬ್ಬರ ಅನೈತಿಕ ಸಂಬಂಧಕ್ಕೆ ಅವಳ ಗಂಡ ಲಕ್ಷ್ಮಣ ತಿಪ್ಪಣ್ಣಾ ಪುಂಜಿ ಅಡ್ಡಿಯಾಗಿದ್ದಾನೆಂದು ಅವನನ್ನು ಕೊಲೆ ಮಾಡುವ ಉದ್ದೇಶದಿಂದ ಪತ್ನಿ ಅನೈತಿಕ ಸಂಬಂಧ ಹೊಂದಿದ್ದ ಪ್ರಿಯಕರನಿಗೆ ಫೋನ ಮಾಡಿ ಮನೆಗೆ ಕರೆಯಿಸಿಕೊಂಡು ಕುತ್ತಿಗೆಗೆ ಹಗ್ಗ ಹಾಕಿ ಜಗ್ಗಿ ಕೊಲೆ ಮಾಡಿದ್ದಾರೆ.

ಕೊಲೆಯ ಸಂಗತಿಯು ಯಾರಿಗೂ ಗೊತ್ತಾಗಬಾರದೆಂದು ಹೆಣವನ್ನು ಬೈಕ್ ಮೇಲೆ ಇಟ್ಟುಕೊಂಡು ಹೋಗಿ ಘಟಪ್ರಭಾ ಬಲದಂಡೆ ಕಾಲುವೆಯಲ್ಲಿ ಬೈಕ್ ಸಮೇತ ಒಗೆದು ಮೋಟಾರ ಸೈಕಲ ಅಪಘಾತ ಆದ ರೀತಿಯಲ್ಲಿ ಸನ್ನಿವೇಷವನ್ನು ನಿರ್ಮಾಣ ಮಾಡಿ ಸಾಕ್ಷ್ಯ ನಾಶಪಡಿಸಿ ಕೊಲೆ ಮಾಡಿದ್ದಾರೆ.

ಈ ಘಟನೆ ಕುರಿತು ಮೃತನ ಅಣ್ಣ ಬಾಲಪ್ಪ ತಿಪ್ಪಣ್ಣ ಮುಂಜಿ ಫಿರ್ಯಾದಿ ನೀಡಿದ್ದು ಮುರಗೋಡ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳಕ್ಕೆ ಬೇಟಿ ನೀಡಿದ ಡಿ ವಾಯ್ ಎಸ್ ಪಿ ರಾಮನಗೌಡ ಹಟ್ಟಿ, ಸಿಪಿಐ ಮಂಜುನಾಥ ನಡವಿನಮನಿ, ಪಿಎಸ್ಐ ಪ್ರವೀಣ್ ಗಂಗೋಳ್ಳಿ ಬೇಟಿ ನೀಡಿದ ಪರಶೀಲಿಸಿ ತನಿಖೆ ಕೈಗೊಂಡಿದೆ ಶೀಘ್ರದಲ್ಲಿ ಆರೋಪಿತರನ್ನು ಬಂದಿಸಲಾಗುವುದು ಎಂದು ಹೇಳಿದರು.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');