ಭಾರತಿ ಫೌಂಡೇಶನ್ ವತಿಯಿಂದ ಪರಿಸರ ದಿನ ಆಚರಣೆ

0

ಬೆಳಗಾವಿ: ಭಾರತಿ ಫೌಂಡೇಶನ್ ವತಿಯಿಂದ ಇಲ್ಲಿನ ಕೆಎಸ್ಆರ್ ಟಿಸಿ ವಸತಿಗೃಹ ಕಂಪೌಂಡ್ (ದಂಡು ಮಂಡಳಿ) ವ್ಯಾಪ್ತಿಯಲ್ಲಿ ಸಸಿಗಳನ್ನು ನೆಡುವ ಮೂಲಕ ಇಂದು ವಿಶ್ವ ಪರಿಸರ ದಿನ ಆಚರಿಸಲಾಯಿತು.

ಭಾರತಿ ಫೌಂಡೇಶನ್ ಪ್ರಧಾನ ಕಾರ್ಯದರ್ಶಿ ಮಹೇಶ ಶೀಗಿಹಳ್ಳಿ ಮಾತನಾಡಿ,  “ಪ್ರತಿಯೊಬ್ಬರು ಅವರ ಮನೆಯ ಆವರಣದಲ್ಲಿ ಸಸಿಗಳನ್ನು ನೆಟ್ಟು ಪೋಷಿಸಬೇಕು. ಇದರಿಂದ ನಾವು ಹೆಚ್ಚು ಆಮ್ಲಜನಕ ಪಡೆಯಬಹುದಾಗಿದೆ” ಎಂದು ಹೇಳಿದರು.

ಭಾರತಿ ಫೌಂಡೇಶನ್ ಸದಸ್ಯರಾದ ಡಾ.ಮಾಲಾಶ್ರೀ ನಾಯಿಕ, ಮಾರ್ಕೆಟ್ ಪೋಲಿಸ್ ಠಾಣೆಯ ಸಿಪಿಐ ಶ್ರೀನಿವಾಸ, ಪಿಎಸ್ಐ ವಿಠ್ಠಲ, ಹವಾಲ್ದಾರ್ ಮೈಲಾಕಿ ಸೇರಿ ಪೌಂಡೇಶನ್ ನ ಇನ್ನಿತರ ಸದಸ್ಯರು ಉಪಸ್ಥಿತರಿದ್ದರು.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');