ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಯವರ ಸ್ಫೋಟಕ ಆಡಿಯೋ ಬಿಡುಗಡೆಯಾಗಿದ್ದು, ತೀವ್ರ ಸಂಚಲನ

0

ಚಾಮರಾಜನಗರ: ವರ್ಗಾವಣೆ ಬೆನ್ನಲ್ಲೇ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಯವರ ಸ್ಫೋಟಕ ಆಡಿಯೋ ಬಿಡುಗಡೆಯಾಗಿದ್ದು, ತೀವ್ರ ಸಂಚಲನ ಉಂಟುಮಾಡಿದೆ.

ಮೇ 2 ರಂದು ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ 36 ಜನ ಸಾವನಪ್ಪಿದ ಪ್ರಕರಣಕ್ಕೆ ಸಂಬಂಧಿಸಿ ಮೈಸೂರು ಡಿಸಿ ರೋಹಿಣಿ ಸಿಂಧೂರಿ ಮತ್ತು ಗ್ಯಾಸ್ ಏಜೆನ್ಸಿ ಮಾಲೀಕನ ನಡುವೆ ನಡೆದ ಸಂಭಾಷಣೆಯ ಆಡಿಯೋವನ್ನು ಸ್ಥಳೀಯ ಬಿಜೆಪಿ ಮುಖಂಡ ಅಮ್ಮನಪುರ ಮಲ್ಲೇಶ್ ಇಂದು ಮಧ್ಯಾಹ್ನ ರಿಲೀಸ್ ಮಾಡಿದ್ದಾರೆ.

ಮೈಸೂರಿನ ಸದರನ್ ಗ್ಯಾಸ್ ಏಜೆನ್ಸಿ ಜೊತೆ ರೋಹಿಣಿ ಸಿಂಧೂರಿ ಮಾತುಕತೆ ನಡೆಸಿದ್ದಾರೆ. ರಿಲೀಸ್ ಮಾಡಲಾಗಿರುವ ಆಡಿಯೋದಲ್ಲಿ ಅಲ್ಲಿಗೆ (ಚಾಮರಾಜನಗರಕ್ಕೆ) ಏಕೆ ಅಷ್ಟು ಆಕ್ಸಿಜನ್ ಕೊಡುತ್ತಿದ್ದೀರಾ? ಸರಿಯಾಗಿ ಮಾಹಿತಿ ಪಡೆದು ಆಕ್ಸಿಜನ್ ಪೂರೈಕೆ ಮಾಡಿ. ನೀನು ಆಕ್ಸಿಜನ್ ಪೂರೈಕೆ ಮಾಡುತ್ತಿರುವ 43 ಆಸ್ಪತ್ರೆಗಳ ರೆಕಾರ್ಡ್ ತೆಗೆದು ಕೊಂಡು ಕಚೇರಿಗೆ ಬಾ ಎಂದು ಮೈಸೂರು ಡಿಸಿ ರೋಹಿಣಿ ಸಿಂಧೂರಿ ಆದೇಶಿಸಿದ್ದಾರೆ. ಇದಕ್ಕೆ ಆಯ್ತು ಮೇಡಂ ಬರುತ್ತೇನೆ ಎಂದು ಸಿಬ್ಬಂದಿ ಹೇಳಿದ್ದಾರೆ.

ಎಡಿಸಿ ಮಾತನಾಡಿರುವ ಆಡಿಯೋ ಕೂಡ ರಿಲೀಸ್:

ಮೈಸೂರು ಎಡಿಸಿ ನಾಗಾರಾಜು ಮತ್ತು ಪದಕಿ ಗ್ಯಾಸ್ ಏಜೆನ್ಸಿ ಸಿಬ್ಬಂದಿ ನಡುವೆ ನಡೆದ ಆಡಿಯೋ ಕೂಡ ರಿಲೀಸ್ ಆಗಿದೆ. ಈ ವಿಡಿಯೋದಲ್ಲಿ ಎಡಿಸಿ ನಾಗಾರಾಜು ಪದಕಿ ಗ್ಯಾಸ್ ಏಜೆನ್ಸಿ ಸಿಬ್ಬಂದಿ ಜೊತೆ ಮಾತನಾಡಿದ್ದಾರೆ. ಚಾಮರಾಜನಗರದಲ್ಲಿ ಮೆಡಿಕಲ್ ಎಮರ್ಜೆನ್ಸಿ ಆಗಿದೆ. ದಯವಿಟ್ಟು ಆಕ್ಸಿಜನ್ ಸಿಲಿಂಡರ್ ಕಳುಹಿಸಿ ಕೊಡು. ಈಗ ತಾನೇ ಸದರನ್ ಗ್ಯಾಸ್ ಏಜೆನ್ಸಿ ಮುಂಭಾಗದಿಂದ ಲಿಕ್ವಿಡ್ ಅಕ್ಸಿಜನ್ ಟ್ಯಾಂಕರ್ ಹೋಗಿದೆ. ನಾವು ಕೂಡ ಸದರನ್ ಗ್ಯಾಸ್ ಏಜೆನ್ಸಿಯಲ್ಲಿ ಇದ್ದು, ಸಿಲಿಂಡರ್ ಫಿಲ್ ಮಾಡಿಸುತ್ತಿದ್ದೇವೆ. ನೀವು ಕೂಡ 50 ಸಿಲಿಂಡರ್ ತುಂಬಿಸಿ ಕೊಡಿ ಎಂದು ಮೈಸೂರು ಎಡಿಸಿ ನಾಗಾರಾಜು ಸಿಬ್ಬಂದಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');