ನಗರದ ಕಣಬರಗಿಯ ಕುಟುಂಬ ಕಲ್ಯಾಣ ಕೇಂದ್ರದ ಸಿಬ್ಬಂದಿಗೆ ಉಚಿತ ಆಹಾರ ಧಾನ್ಯ ಕಿಟ್ ವಿತರಣೆ ಮಾಡಲಾಯಿತು.

0

ಬೆಳಗಾವಿ: ಬೆಳಗಾವಿಯ ಸಂಕಲ್ಪ ಫೌಂಡೇಶನ್ ವತಿಯಿಂದ ಬೆಳಗಾವಿ ನಗರದ ಕಣಬರಗಿಯ ಕುಟುಂಬ ಕಲ್ಯಾಣ ಕೇಂದ್ರದ ಸಿಬ್ಬಂದಿಗೆ ಉಚಿತ ಆಹಾರ ಧಾನ್ಯ ಕಿಟ್ ವಿತರಣೆ ಮಾಡಲಾಯಿತು.

ಕಣಬರಗಿಯ ಶ್ರೀ ರವಿಶಂಕರ ವಿದ್ಯಾವರ್ಧಕ ಸಂಸ್ಥೆಯ ಸಮತಾ ಶಾಲೆಯ ಅಧ್ಯಕ್ಷ ಶಂಕರ ಬಾಗೇವಾಡಿ ಮಾತನಾಡಿ, “ಕೊರೊನದ ಸಂಕಟದ ಸಂದರ್ಭದಲ್ಲಿ ನಮ್ಮೆಲ್ಲರ ಸುರಕ್ಷಿತವಾಗಿ ಆರೋಗ್ಯ ಇಲಾಖೆಯ ಸಿಬ್ಬಂದಿಯು ಕೊರೋನಾ ವಾರಿಯರ್ಸ್ ರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಲಾಕ್-ಡೌನ್ ಪರಿಣಾಮದಿಂದ ಆರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಸಮಯಕ್ಕೆ ಸರಿಯಾಗಿ ವೇತನ ಸಿಗುತ್ತಿಲ್ಲವಾದ್ದರಿಂದ ಸಂಕಲ್ಪ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ನಾನಾಗೌಡ ಬಿರಾದಾರ ನೇತೃತ್ವದಲ್ಲಿ ಉಚಿತವಾಗಿ ಆಹಾರ ಧಾನ್ಯ ಕಿಟ್ ನೀಡುತ್ತಿರುವುದು ದಾಸೋಹ ಪರಂಪರೆಯ ಪ್ರತೀಕವಾಗಿದೆ.

ಹಸಿದವರ ಹಸಿವಿನಲ್ಲಿ ನಿಜ ದೇವರ ಕಾಣುವ ಫೌಂಡೇಶನ್ ಹಾಗೂ ಅವರ ತಂಡದ ದೃಷ್ಟಿಕೋನ ಎಲ್ಲರಲ್ಲಿ ಬೆಳೆಯುವಂತಾಗಲಿ. ಆ ಮೂಲಕ ಕೋವಿಡ್-19 ರ ಲಾಕ್-ಡೌನ್ ನಲ್ಲಿ ತುತ್ತು ಅನ್ನಕ್ಕಾಗಿ ಪರಿತಪಿಸುತ್ತಿರುವ ಬಡವರಿಗೆ ಹೆಚ್ಚಿನ ಸಮಾಜ ಸೇವಕರು, ಸಂಘ-ಸಂಸ್ಥೆಗಳು ಸಹಾಯ ಹಸ್ತ ಚಾಚುವಂತಾಗಲಿ” ಎಂದು ಅಭಿಪ್ರಾಯ ಪಟ್ಟರು.

ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ನಾನಾಗೌಡ ಬಿರಾದಾರ, ಆಟೋನಗರ ಇಂಡಸ್ಟ್ರಿಯಲ್ ಏರಿಯಾ ಅಸೋಸಿಯೇಶನ್ ಅಧ್ಯಕ್ಷ ಸುರೇಶ ಯಾದವ, ಬ್ಯಾಂಕ್ ಆಫ್ ಬರೋಡಾದ ಮ್ಯಾನೇಜರುಗಳಾದ ಮಹಾಂತೇಶ ನರಗುಂದ, ಕೀರ್ತಿ ಭಟ್, ವಿಜಯ್, ಕಿರಿಯ ಆರೋಗ್ಯ ಸಹಾಯಕಿಯರಾದ ನಾಗರತ್ನ ಮಾಕಿ, ಪ್ರಿಯಾಂಕಾ ಉಂಡಿ, ವಿನೋದಾ ಕುಂಬಾರ, ಆಶಾ ಕಾರ್ಯಕರ್ತೆ ಗೀತಾ ಕುರುಬರ ಮುಂತಾದವರು ಪಾಲ್ಗೊಂಡಿದ್ದರು.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');