ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ ಬಿಎಸ್ ವೈ ಪರವಾಗಿ ಡಿಸಿಎಮ್ ಲಕ್ಷ್ಮಣ ಸವದಿ ಬ್ಯಾಟಿಂಗ್

0
ಬೆಳಗಾವಿ:  ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ಮುಖ್ಯಮಂತ್ರಿ ಬಿ ಎಸ್ ವೈ ರಾಜೀನಾಮೆ ವಿಚಾರವಾಗಿ ಸದ್ಯ ಹಲವು ಊಹಾಪೋಹಗಳು ಕೇಳಿಬರುತ್ತಿವೆ.ಒಂದು ಕಡೆ ಬಿ ಎಸ್ ವೈ ಅವರಿಗೆ ಇ ಡಿ ನೋಟಿಸ್ ಶಾಕ್ ಕೊಟ್ಟಿದ್ದರೆ ನಿನ್ನೆಯಷ್ಟೆ ಹೈಕಮಾಂಡ್ ಹೇಳಿದರೆ ಯಾವಾಗ ಬೇಕಾದರೂ ರಾಜಿನಾಮೆ ಕೊಡುತ್ತೇನೆ ಅಂದಿರುವ ಮುಖ್ಯಮಂತ್ರಿ ಬಿ ಎಸ್  ವೈ ಹೇಳಿಕೆಗೆ ಸದ್ಯ ಉಪಮುಖ್ಯ ಮಂತ್ರಿ ಹಾಗೂ ಸಾರಿಗೆ ಸಚೀವ ಡಿ ಸಿ ಎಮ್ ಲಕ್ಷ್ಮಣ ಸವದಿ ಪ್ರತಿಕ್ರಿಯೆ ನೀಡಿದ್ದು ಮಾನ್ಯ ಮುಖ್ಯಮಂತ್ರಿಗಳು
ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಶ್ನೆಯೇ ಉದ್ಭವಿಸುವದಿಲ್ಲ
ಸಿಎಂ ಯಡಿಯೂರಪ್ಪ ನಿನ್ನೆ ಮನಸ್ಸಿಗೆ ಆದ ಬೇಸರದಿಂದ ಹಾಗೆ ಹೇಳಿದ್ದಾರೆ ರಾಜ್ಯದ ರಾಜಕಾರಣದಲ್ಲಿ
ಅನೇಕರು ಬೇರೆಬೇರೆ ತರಹ ಮಾತನಾಡಿದ್ದರಿಂದ ಅವರ ಮನಸ್ಸಿಗೆ ಬೇಜಾರಾಗಿರಬಹುದು
ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಇಂತಹ ಚಟುವಟಿಕೆಗಳು ಸರಿಯಲ್ಲ ಅಂತಾ ಭಾವನೆ ಇಟ್ಟುಕೊಂಡು ಅವರು ಆ ರೀತಿಯಾಗಿ ಹೇಳಿರಬಹುದು
ನಾಯಕತ್ವ ಬದಲಾವಣೆ ಪ್ರಶ್ನೆ ನಮ್ಮ ವರಿಷ್ಠರ ಮುಂದೆಯೂ ಇಲ್ಲ
ಸ್ಥಳೀಯ ಕೆಲವು ವಿಚಾರಗಳು ಅವರ ಮನಸ್ಸಿಗೆ ನೋವಾಗಿ ಮುಖ್ಯಮಂತ್ರಿಗಳು ಹಾಗೇ ಹೇಳಿದ್ದಾರೆ
ನಾನು ರಾಯಚೂರು ಮತ್ತು ನನ್ನ ಕ್ಷೇತ್ರದ ಪ್ರವಾಸದಲ್ಲಿ ಇದ್ದೇ
ಇವತ್ತು ಬೆಂಗಳೂರಿಗೆ ಹೋಗ್ತಿನಿ,ವಾಸ್ತವ ವಿಚಾರ ತಿಳಿದುಕೊಳ್ಳಲು ಪ್ರಯತ್ನ ಮಾಡ್ತಿನಿ
ಸ್ಥಳೀಯ ಮುಖಂಡರ ಹೇಳಿಕೆ ಅವರ ಮನಸ್ಸಿಗೆ ನೋವಾಗಿ ಹೇಳಿದ್ದಾರೆ ಎಂಬುದು  ನನ್ನ ಅನಿಸಿಕೆಯಾಗಿದೆ ಎಂದರಲ್ಲದೆ
ಉತ್ತರ ಕರ್ನಾಟಕದವರು ಸಿಎಂ ಆಗ್ಲಿ ವಿಶ್ವನಾಥ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅವರು
ಅದು ವಿಶ್ವನಾಥ ಅವರ ವೈಯಕ್ತಿಕ ವಿಚಾರ ಎಂದರು.
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');