ಸುರಪುರ: ಸಾಲ ಬಾಧೆ ತಾಳಲಾರದೆ ರೈತ ಆತ್ಮಹತ್ಯೆ

0

ಸುರಪುರ : ತಾಲ್ಲೂಕಿನ ತಿಂಥಣಿ ಗ್ರಾಮದ ರೈತನೊರ್ವ ಸಾಲ ಬಾಧೆ ತಾಳಲಾರದೆ ಸೋಮವಾರ ನೇಣಿಗೆ ಶರಣಾಗಿದ್ದಾನೆ.

ದೊಡ್ಡಮೋದಿನ್ ಸಾಬ್ (65) ಮೃತ ರೈತ.

ರೈತ ತನ್ನ 4 ಎಕರೆ ಜಮೀನಲ್ಲಿ ಬೆಳೆದ ಹತ್ತಿ ಬೆಳೆ ನಷ್ಟವಾಗಿತ್ತು. ಇದರಿಂದ ತೀವ್ರವಾಗಿ ನೊಂದಿದ್ದ ಎಂದು ಹೇಳಲಾಗುತ್ತಿದೆ.

ರೈತ ದೊಡ್ಡ ಮೋದಿನ್ ಸಾಬ್ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್‌ಲ್ಲಿ 65 ಸಾವಿರ, ವಿಎಸ್‌ಎಸ್‌ಎನ್ ಬ್ಯಾಂಕ್‌ಲ್ಲಿ 45 ಸಾವಿರ ಹಾಗೂ   ಖಾಸಗಿಯವರ ಬಳಿ 3 ಲಕ್ಷ ಸೇರಿ ಒಟ್ಟು 4 ಲಕ್ಷಕ್ಕೂ ಅಧಿಕ ಸಾಲ ಮಾಡಿದ್ದಾನೆ ಎನ್ನಲಾಗಿದೆ.

ಕಳೆದ ವರ್ಷದ ಸಾಲದ ಜೊತೆಗೆ ಈ ಬಾರಿ ಕೃಷಿಗೆ ಹಣ ಸೇರಿ ಎಲ್ಲಿಂದ ತರೋದ ಎಂದು ನೊಂದು ಜಮೀನಿನ ಮರದಲ್ಲಿ ನೇಣಿಗೆ ಶರಣಾಗಿದ್ದಾನೆ.

ಸುರಪುರ ಠಾಣೆಯಲ್ಲಿ ದೂರು ದಾಖಲಾಗಿದೆ.////

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');