ಗುಟಗುದ್ದಿ ಸರ್ಕಾರಿ ಪ್ರೌಢಶಾಲೆ ಕಟ್ಟಡ ನಿರ್ಮಾಣಕ್ಕೆ ನಿವೇಶನ ನೀಡಲು ದಾನಿಗಳಲ್ಲಿ ಮನವಿ

0

ಬೆಳಗಾವಿ: ಹುಕ್ಕೇರಿ ತಾಲೂಕು ಗುಟಗುದ್ದಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಕಟ್ಟಡ ನಿರ್ಮಾಣಕ್ಕೆ ದಾನಿಗಳು ನಿವೇಶನ ಒದಗಿಸಬೇಕು ಶಾಲೆಯ ಮುಖ್ಯೋಪಾಧ್ಯಾಯ ಮನವಿ ಮಾಡಿಕೊಂಡಿದ್ದಾರೆ.

ಸರ್ಕಾರಿ ಪ್ರೌಢಶಾಲೆಯನ್ನು 2016-17 ರಲ್ಲಿ ಉನ್ನತೀಕರಿಸಲಾಗಿದ್ದು, ನಿವೇಶನ ಇಲ್ಲದ ಕಾರಣ ಇದುವರೆಗೆ ಕಟ್ಟಡ ನಿರ್ಮಾಣವಾಗಿಲ್ಲ.

ಪ್ರಾಥಮಿಕ ಶಾಲೆಯ 310 ವಿದ್ಯಾರ್ಥಿಗಳು 3 ಚಿಕ್ಕ ಕೊಠಡಿಗಳಲ್ಲಿ ವ್ಯಾಸಂಗ ಮಾಡುತ್ತಿದ್ದು , ಕಟ್ಟಡ ನಿರ್ಮಾಣಕ್ಕಾಗಿ ನಿವೇಶನದ ಅಗತ್ಯವಿದೆ ಆದಕಾರಣ ನಿವೇಶನ ಒದಗಿಸಲು ದಾನಿಗಳು ಇದ್ದಲ್ಲಿ ಗುಟಗುದ್ದಿ ಗ್ರಾಮದ ಆರ್.ಎಂ.ಎಸ್.ಎ ಸರಕಾರಿ ಶಾಲೆಯನ್ನು ಸಂಪರ್ಕಿಸಬೇಕು ಎಂದು ಶಾಲೆಯ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ಕೋರಿದ್ದಾರೆ.////

 

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');