ತಂದೆ ತಾಯಿ ಹೆಸರಲ್ಲಿ ದಾನಧರ್ಮ ಮಾಡುತ್ತಿರುವ ಧರೆಪ್ಪ ಠಕ್ಕನ್ನವರ

0
ಬೆಳಗಾವಿ:  ಪತ್ರಕರ್ತರನ್ನು ರಾಜ್ಯ ಸರ್ಕಾರ ಕೊರೊನಾ ಪ್ರಂಟ್ ಲೈನ್ ವಾರಿಯರ್ ಎಂದು ಗುರುತಿಸಿದೆ ಆದರೆ ಸರ್ಕಾರದ ಸಹಾಯಧನ ನೀಡುವ ಸಮಯದಲ್ಲಿ ಮತ್ತು ಪ್ಯಾಕೇಜ್ ಘೊಷಣೆಯ ಸಮಯದಲ್ಲಿ ಮಾತ್ರ ಪತ್ರಕರ್ತರನ್ನು ಕಡೆಗಣಿಸಲಾಗಿದ್ದು ಸಮಾಜದ ಕಾಳಜಿ ಮಾಡುವ ಪತ್ರಕರ್ತರ ಬದುಕು ಮಾತ್ರ ಆರ್ಥಿಕವಾಗಿ ಸಬಲವಾಗಿಲ್ಲ.ಈ ಹಿನ್ನೆಲೆಯಲ್ಲಿ ಪತ್ರಕರ್ತರ ಸಂಕಷ್ಟ ಅರಿತ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಹಾಗೂ ಸಮಾಜಸೇವಕ ಧರೆಪ್ಪ ಠಕ್ಕನ್ನವರ ಪತ್ರಕರ್ತರಿಗೆ ಪಡಿತರ ಕಿಟ್ ವಿತರಿಸುವ ಮೂಲಕ ಪತ್ರಕರ್ತರ ನೋವಿಗೆ ಸ್ಪಂದಿಸುವ ಕೆಲಸಮಾಡಿದ್ದಾರೆ.
ಅಥಣಿ ಪಟ್ಟಣದಲ್ಲಿ ಕಳೆದ ಹತ್ತಾರು ದಿನಗಳಿಂದ ನಿತ್ಯವೂ ಐದುನೂರು ಜನರಿಗೆ ಆಗುವಷ್ಟು ಉಪಹಾರವನ್ನು ಅವಶ್ಯಕತೆ ಇರುವ ಜನರು ಮತ್ತು ಕೊರೊನಾ ವಾರಿಯರ್ ಗಳು ಕೆಲಸ ನೀರ್ವಹಿಸುವ ಸ್ಥಳಕ್ಕೆ ಹೋಗಿ ಊಟ ಮತ್ತು ನೀರು ತಲುಪಿಸುವ ಮೂಲಕ ಹಸಿದವರ ಹಸಿವು ನೀಗಿಸುವ ಕೆಲಸವನ್ನು ಎಲೆ ಮರೆಯ ಕಾಯಿಯಂತೆ ಮಾಡುತ್ತಿದ್ದು ಸದ್ಯ ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.ಅಥಣಿ ತಾಲ್ಲೂಕಿನಲ್ಲಿ ಕೃಷ್ಣಾ ನದಿ ಪ್ರವಾಹ ಸಮಯದಲ್ಲಿ ಸಂತ್ರಸ್ತರಿಗೆ ನೆರವು ನೀಡಿದ್ದ ಧರೆಪ್ಪ ಠಕ್ಕನ್ನವರ ಅವರ ಸಮಾಜ ಸೇವೆ ಸದ್ದಿಲ್ಲದೆ ನಡೆಯುತ್ತಿದೆ.
ಅಥಣಿ ತಾಲ್ಲೂಕು ಆಸ್ಪತ್ರೆಯಲ್ಲಿ ನೀರಿನ ಕೊರತೆ ಎದುರಾದ ಸಮಯದಲ್ಲಿ ಟ್ಯಾಂಕರ್ ಮೂಲಕ ನೀರಿನ ವ್ಯವಸ್ಥೆ ಮಾಡಿದ್ದ ಧರೆಪ್ಪ ಠಕ್ಕನ್ನವರ ಕಳೆದ ಲಾಕ್ ಡೌನ ಸಮಯದಲ್ಲಿಯೂ ಹಲವರಿಗೆ ಪಡಿತರ ಹಂಚುವ ಮೂಲಕ ಬಡವರಿಗೆ ಸಹಾಯ ಹಸ್ತ ಚಾಚಿದ್ದರು.ಕೊರೊನಾ ಎರಡನೆಯ ಅಲೆಯಲ್ಲಿ ಪೋಲಿಸರು, ಹೋಮ್ ಗಾರ್ಡ,ಪುರಸಭೆ ಸಿಬ್ಬಂದಿ, ಆರೋಗ್ಯ ಇಲಾಖೆಯ ಸಿಬ್ಬಂದಿ ಸೇರಿದಂತೆ ವಾರಿಯರ್ ಗಳಿಗೆ ಊಟದ ವ್ಯವಸ್ಥೆ ಮಾಡುವ ಮೂಲಕ ಅವರ ಬೆನ್ನು ತಟ್ಟುವ ಕೆಲಸಕ್ಕೆ ಮುಂದಾಗಿದ್ದಾರೆ.
ತಮ್ಮ ಮನೆಯ ಆವರಣದಲ್ಲಿ ಪತ್ರಕರ್ತರಿಗೆ ದಿನಸಿ ಕಿಟ್ ವಿತರಿಸಿ ಮಾತನಾಡಿದ ಸಮಾಜ ಸೇವಕ ಕಾಂಗ್ರೆಸ್ ಮುಖಂಡ ಧರೆಪ್ಪ ಠಕ್ಕನ್ನವರ ಜನರಲ್ಲಿ ಜಾಗೃತಿ ಮೂಡಿಸುತ್ತ ತಮ್ಮ ಕುಟುಂಬದ ಸದಸ್ಯರು ಮತ್ತು ತಮ್ಮ ಜೀವದ ಹಂಗು ತೊರೆದು ವರದಿ ಮಾಡಲು ಹಗಲುರಾತ್ರಿ ಎನ್ನದೆ ಶ್ರಮಿಸುವ ಪತ್ರಕರ್ತರು ಚೆನ್ನಾಗಿ ಇದ್ದಾಗ ಮಾತ್ರ ಸ್ವಸ್ಥ ಸಮಾಜ ನಮ್ಮದಾಗುತ್ತದೆ ಎಂದು ಹೇಳಿದರು.ಈ ವೇಳೆ ಪಡಿತರ ಕಿಟ್ ಸ್ವೀಕರಿಸಿ
 ಮಾತನಾಡಿದ ಹಿರಿಯ ಪತ್ರಕರ್ತ ಸಿ ಎ ಇಟ್ನಾಳಮಠ ತಾವು ಹಲವಾರು ವರ್ಷಗಳಿಂದ ಧರೆಪ್ಪ ಅವರ ಸಾಮಾಜಿಕ ಕಾರ್ಯವನ್ನು ನೋಡುತ್ತ ಬಂದಿದ್ದು ರಾಜಕಾರಣವನ್ನು ಸೇವೆಗೆ ಸೋಕಿಸದ ರೀತಿಯಲ್ಲಿ ಮತ್ತು ಯಾವುದೇ ಪ್ರಚಾರವನ್ನು ಬಯಸದೆ ಸಾಮಾಜಿಕ ಕಾರ್ಯದಲ್ಲಿ ಧರೆಪ್ಪ ಠಕ್ಕನ್ನವರ ತೊಡಗಿದ್ದು ಅವರ ತಂದೆ ಶಿವಪ್ಪ ಠಕ್ಕನ್ನವರ ಮತ್ತು ತಾಯಿ ಚಂದ್ರಮ್ಮನವರ ಆಶಿರ್ವಾದದ ಜೊತಗೆ ದೇವರ ಆಶಿರ್ವಾದವೂ ಧರೆಪ್ಪ ಅವರಿಗೆ ಇರಲಿ ಎಂದು ಶುಭಕೋರಿದರು.ಈ ವೇಳೆ ತೆಲಸಂಗ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀಕಾಂತ ಪೂಜಾರಿ,ಕಾಂಗ್ರೆಸ್ ಯುಥ್ ಘಟಕದ ರವಿ ಬಡಕಂಬಿ,ರಾಜು ಜಮಖಂಡೀಕರ,ಮೂರುಗೇಶ ಬಾನೆ,ಸೇರಿದಂತೆ ಹಲವರು ಉಪಸ್ಥಿತರಿದ್ದರು.
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');