ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ 50 ಜನರಿಗೆ ಉಚಿತ ಕೋವಿಡ್ ಲಸಿಕೆ ವಿತರಣೆ

0

ಬೆಳಗಾವಿ: ತಾಲೂಕಿನ ಹಂದಿಗನೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕೋವಿಡ್-19 ಹೆಲ್ಪ್ ಲೈನ್ ಸರ್ವೀಸ್ ಸೆಂಟರ್ ವತಿಯಿಂದ ಸೋಮವಾರ ಉಚಿತ ಲಸಿಕೆ ವಿತರಣೆ ಕಾರ್ಯಕ್ರಮ ಜರುಗಿತು.

ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿನಯ ನಾವಲಗಟ್ಟಿ ಅವರು ಸ್ವತಃ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಂಗ್ರಾಳಿ ಕೆ.ಎಚ್. ಹಾಗೂ ಹಂದಿಗನೂರು ಗ್ರಾಮದ 50 ಜನರು ಕೋವಿಡ್ ಲಸಿಕೆ ಪಡೆದರು. ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಲಸಿಕೆ ನೀಡಿದರು.

ಸರ್ವೀಸ್ ಸೆಂಟರ್ ನ ಸದಸ್ಯರಾದ ಜಗದೀಶ ಸಾವಂತ, ರಾಜೇಂದ್ರ ಪಾಟೀಲ, ಆನಂದ ವೈದ್ಯ, ವಿಶಾಲ ಪಾಟೀಲ, ಶಹೀನ ವೈದ್ಯ, ಮಂಜುಳಾ ಬಡಿಗೇರ, ಉತ್ತಮ ಚಿಟ್ಟಿ, ಸಾವಿತ್ರಿ ಲಿಂಬೋಜಿ, ಪಯಜಾ ವಂಟಮುರಿ ಸೇರಿ ಇನ್ನಿತರರು ಇದ್ದರು.////

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');