ಬಡವರಿಗೆ ಆಸರೆಯಾದ ಭೋಪಾಲ್ ಸೌದಾಗರ ಕುಟುಂಬ

0
ಬೆಳಗಾವಿ: ಕೊರೊನಾ ಮಹಾಮಾರಿ ಈಗಾಗಲೇ ಹಲವರನ್ನು ಬಲಿ ಪಡೆದಿದ್ದು ಪ್ರತಿ ಮನೆಗಳಲ್ಲೂ ದುಃಖ, ಸಾವು,ನೋವಿನ ಭಯ ಆವರಿಸಿದೆ ಅಥಣಿ ತಾಲ್ಲೂಕಿನಲ್ಲಿ 130 ಕ್ಕೂ ಹೆಚ್ಚು ಕೋವಿಡ್ ಸಾವುಗಳು ಸಂಭವಿಸಿದ್ದು ರಾಜ್ಯ ಸರ್ಕಾರದ ಲಾಕ ಡೌನ್ ಮಾಡಿದ ಪರಿಣಾಮವಾಗಿ ನಿತ್ಯದ ದುಡಿಮೆಯನ್ನು ನಂಬಿ ಬದುಕುತ್ತಿದ್ದ ಹಲವಾರು ಕುಟುಂಬಗಳು ಸದ್ಯ ಒಪ್ಪೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.ಹಲವು ಕಡೆ ದಾನಿಗಳು ಸ್ವಯಂ ಪ್ರೇರಿತರಾಗಿ ತಮ್ಮ ಕೈಲಾದ ಸಹಾಯವನ್ನು ಬಡ ಕುಟುಂಬಗಳಿಗೆ ಮಾಡಲು ಮುಂದಾಗಿದ್ದು ಬೆಳಗಾವಿ ಜಿಲ್ಲೆಯ
ಅಥಣಿ ಪಟ್ಟಣದ ವ್ಯಾಪಾರಿಗಳಾದ
ಭೋಪಾಲ್ ಸೌದಾಗರ ಕುಟುಂಬದ ವತಿಯಿಂದ ಶಾಂತಿ ನಗರದಲ್ಲಿ 100  ಪಡಿತರ ಕಿಟ್ ಗಳನ್ನು ಉಚಿತವಾಗಿ ವಿತರಿಸಲಾಯಿತು.
ಅರ್ಹ ಬಡ ಕುಟುಂಬಗಳನ್ನು ಆಯ್ಕೆ ಮಾಡಿ ಪಡಿತರವನ್ನು ಮನೆ ಬಾಗಿಲಿಗೆ ತಲುಪಿಸುವ ಕೆಲಸವನ್ನು ಸುಂದರ ಸೌದಾಗರ ಮತ್ತು ಅವರ ಕುಟುಂಬ ಸದಸ್ಯರು ಮತ್ತು ಸ್ನೇಹಿತರು ಮಾಡುತ್ತಿದ್ದು ಈಗಾಗಲೇ ಅಥಣಿ ಪಟ್ಟಣದ ಪಾರಗಾಂವ್ ಗಲ್ಲಿ,ಪಟಾಯಿತ ಗಲ್ಲಿ,ಮದ್ದಿನ ಮಡ್ಡಿ,ಡಿಎಸ್ಎಮ್ಎಸ್ ಕಾಲನಿ ಮತ್ತು ಶಾಂತಿನಗರದಲ್ಲಿ ಒಟ್ಟು  ಐದುನೂರಕ್ಕೂ ಹೆಚ್ಚು ಬಡ ಕುಟುಂಬಗಳಿಗೆ ಹತ್ತು ಕೆಜಿ ಜೋಳ,ಹತ್ತು ಕೇಜಿ ಗೋಧಿ,ಮತ್ತು ದಿನಸಿ ಪದಾರ್ಥಗಳನ್ನು ಒಳಗೊಂಡ ಪಡಿತರ ಕಿಟ್ ಗಳನ್ನು ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಈ ವೇಳೆ ಉಪಸ್ಥಿತರಿದ್ದು ಪಡಿತರ ಹಂಚಿಕೆ ಮಾಡಿ ಮಾತನಾಡಿದ  ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ರವಿ ಬಂಗಾರಪ್ಪನವರ ಎಲ್ಲವನ್ನೂ ಸರ್ಕಾರ ಅಥವಾ ಅಧಿಕಾರಿಗಳು ಮಾಡಲಿ ಅಂತ ದೂರುತ್ತ ಕೂಡುವದಕ್ಕಿಂತ ಸಮಾಜಮುಖಿ ಕೆಲಸಕ್ಕೆ ಜನರು ತಮ್ಮದೆ ಆದ ಸಹಾಯ ಸಹಕಾರವನ್ನು ನೀಡಬೇಕಾದ ಅಗತ್ಯವಿದೆ.
ತಾಲ್ಲೂಕಿನ ಹಲವೆಡೆ ದಾನಿಗಳು ಇಂತಹ ಕೆಲಸ ಮಾಡಿ ಬಡವರ ಹೊಟ್ಟೆ ತುಂಬಿಸುತ್ತಿದ್ದಾರೆ.ಕೊಡುವ ಕೈಗಳು ಖಾಲಿ ಆಗದಂತೆ ಕಾಯಲು ದೇವರು ಇರುತ್ತಾನೆ.ಕಷ್ಟದ ಕಾಲದಲ್ಲಿ ಕೈ ಹಿಡಿದು ನಡೆಸುವ ಮನಸ್ಸು ಭೋಪಾಲ್ ಸೌದಾಗರ ಅವರ ಕುಟುಂಬ ಸದಸ್ಯರದಾಗಿದ್ದು ಅವರ ಹೃದಯ ವಿಶಾಲತೆಗೆ ನಾವು ಧನ್ಯವಾದಗಳನ್ನು ಹೇಳುತ್ತೇವೆ ಬಡವರಿಗೆ ಅವರಿಂದ ಮತ್ತಷ್ಟು ಸಹಾಯ ಸಹಕಾರಗಳು ಸಿಗುವಂತಾಗಲಿ ಎಂದರು.ಈ ಸಂಧರ್ಭದಲ್ಲಿ ಶಾಂತಿ ನಗರದ ನಿವಾಸಿ ಗಳಾದ ಸಂಜೀವ ರಾಯಮಾನೆ ಗಿರೀಶ್ ಚನ್ನಬಸವನವರ  ತಾನಾಜಿ ನಿಂಬಾಳ್ಕರ್ ಉದಯ ಜಾಧವ,ಸೇರಿದಂತೆ ಹಲವರು ಉಪಸ್ಥಿತರಿದ್ದರು
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');