ಜೂನ್ 21ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ವ್ಯಾಕ್ಸಿನ್ : ಪ್ರಧಾನಿ ಮೋದಿ

0

ಹೊಸದೆಹಲಿ : ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ .. ಜೂನ್ 21 ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ವ್ಯಾಕ್ಸಿನ್ ಘೋಷಿಸಿದರು.ಅಂತಾರಾಷ್ಟ್ರೀಯ ಯೋಗ ದಿನವಾದ ಜೂನ್ 21 ರಿಂದ  ಜಾರಿಯಾಗಲಿದೆ ಎಂದರು .

ಇನ್ನು ಮುಂದೆ ವ್ಯಾಕ್ಸಿನೇಷನ್‌ನ್ನು ಸೆಂಟ್ರಲೈಸ್ ಮಾಡಲಾಗುತ್ತಿದೆ . ರಾಜ್ಯಗಳಿಗೆ ವ್ಯಾಕ್ಸಿನ್ ಖರೀದಿಸಲು ನೀಡಿದ್ದ ಅವಕಾಶವನ್ನ ವಾಪಸ್ ತೆಗೆದುಕೊಳ್ಳುತ್ತೇವೆ . ಹಾಗೂ ಕೇಂದ್ರ ಸರ್ಕಾರವೇ ಇನ್ನುಮುಂದೆ ವ್ಯಾಕ್ಸಿನ್‌ನ್ನು ಖರೀದಿಸಿ ರಾಜ್ಯಗಳಿಗೆ ಉಚಿತವಾಗಿ ನೀಡಲಿದೆ ಎಂದರು .

ಖಾಸಗಿ ಆಸ್ಪತ್ರೆಗಳಿಗೆ ಶೇ .25 ರಷ್ಟು ವ್ಯಾಕ್ಸಿನ್ ಖರೀದಿಸಲು ಅವಕಾಶ ನೀಡಲಾಗಿದೆ . ಆದ್ರೆ ಖಾಸಗಿ ಆಸ್ಪತ್ರೆಗಳು 150 ಕ್ಕಿಂತ ಹೆಚ್ಚು ಸೇವಾ ಶುಲ್ಕ ಸ್ವೀಕರಿಸುವಂತಿಲ್ಲ . ಖಾಸಗಿ ಆಸ್ಪತ್ರೆಗಳು ನೇರವಾಗಿ ವ್ಯಾಕ್ಸಿನ್ ತಯಾರಿಸುವವರಿಂದ ಖರೀದಿ ಮಾಡಬಹುದು ಎಂದು ಮೋದಿ ಹೇಳಿದ್ದಾರೆ .

ಮೋದಿ ಭಾಷಣದ ಮುಖ್ಯಾಂಶಗಳು ..

• ಕೊರೊನಾದ ಎರಡನೇ ಅಲೆಯೊಂದಿಗೆ ನಮ್ಮ ಹೋರಾಟ ಮುಂದುವರೆಯುತ್ತಿದೆ . ಈ ಹೋರಾಟದಲ್ಲಿ ನಾವು ನಮ್ಮ ಸಂಬಂಧಿಕರು , ಪರಿಚಿತರನ್ನು ಕಳೆದುಕೊಂಡಿದ್ದೇವೆ .

• ಕಳೆದ ಹಲವು ವರ್ಷಗಳಲ್ಲಿ ಈ ರೀತಿಯ ಮಹಾಮಾರಿಯನ್ನು ನೋಡಿರಲಿಲ್ಲ .

• ಕೊರೊನಾ ಆಸ್ಪತ್ರೆ , ಐಸಿಯು , ವೆಂಟಿಲೇಟರ್ , ಟೆಸ್ಟಿಂಗ್ ನೆಟ್ವರ್ಕ್ ಸೇರಿದಂತೆ ಹೊಸ ಆರೋಗ್ಯದ ಮೂಲಸೌಕರ್ಯ ಮತ್ತಷ್ಟು ಬಲಗೊಂಡಿದೆ .

• ಭಾರತದಲ್ಲಿ ಮೆಡಿಕಲ್ ಆಕ್ಸಿಜನ್‌ನ ಬೇಡಿಕೆ ಇದ್ದಕ್ಕಿದ್ದಂತೆ ಏರಿಕೆಯಾಯ್ತು . ಹಿಂದೆಂದೂ ಇಂಥ ಬೇಡಿಕೆ ಸೃಷ್ಟಿಯಾಗಿರಲಿಲ್ಲ . ಆಕ್ಸಿಜನ್ ಪೂರೈಸಲು ಆಕ್ಸಿಜನ್ ರೈಲು , ವಿಮಾನ , ಹಡಗು ಸೇರಿದಂತೆ ಎಲ್ಲ ಸಾರಿಗೆಯನ್ನ ಬಳಸಲಾಯ್ತು .

• ಎಲ್ಲೆಲ್ಲಿ ಆಕ್ಸಿಜನ್ ಸಿಗ್ತಿತ್ತೋ ಅದನ್ನ ಹುಡುಕಿ ತರಲಾಯ್ತು . ಜೊತೆಗೆ ಆಕ್ಸಿಜನ್ ತಯಾರಿಕೆಯನ್ನೂ ಅಭಿವೃದ್ಧಿಪಡಿಸಿಕೊಳ್ಳಲಾಯ್ತು .////

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');