ಕಾಗವಾಡ ಮತಕ್ಷೇತ್ರದ ಮದಭಾವಿಯ ಸರ್ಕಾರಿ ಆಸ್ಪತ್ರೆಗೆ ಸಚಿವ ಶ್ರೀಮಂತ ಪಾಟೀಲ್ ಭೇಟಿ

0

ಕಾಗವಾಡ : ಕಾಗವಾಡ ಮತಕ್ಷೇತ್ರದ ಮದಭಾವಿಯ ಸರ್ಕಾರಿ ಆಸ್ಪತ್ರೆಗೆ ಸಚಿವ ಶ್ರೀಮಂತ ಪಾಟೀಲ್ ಭೇಟಿ ನೀಡಿ, ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿ, ವಿಶೇಷಚೇತನರಿಗೆ ಕೋವಿಡ್ ಲಸಿಕೆ ನೀಡುವ ಅಭಿಯಾನಕ್ಕೆ ಚಾಲನೆ ನೀಡಿದರು

ನಂತರ ಬಿಜೆಪಿ “ಸೇವಾಹೀ ಸಂಘಟನ್’ ಅಭಿಯಾನದಡಿ ಪಕ್ಷದ ಹಾಗೂ ಜೊಲ್ಲೆ ಉದ್ಯೋಗ ಸಮೂಹ ಸಂಸ್ಥೆಯ ವತಿಯಿಂದ ಕೊರೋನಾ ವಿರುದ್ಧ ಹೋರಾಡುತ್ತಿರುವ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಕೋವಿಡ್-19 ತಪಾಸಣಾ ಕಿಟ್ ಗಳನ್ನು ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಅಥಣಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳಾದ ರವಿ ಬಂಗಾರಪ್ಪನವರ, ತಾಲೂಕು ಆರೋಗ್ಯಾಧಿಕಾರಿ ಬಸಗೌಡ ಕಾಗೆ, ಮುಖಂಡರಾದ ವಿನಾಯಕ ಬಾಗಡಿ, ರೇವಣ್ಣಾ ಪಾಟೀಲ, ಮಹಾದೇವ ಕೋರೆ, ಮುರಗೆಪ್ಪಾ ಮಗದುಮ್, ಅಪ್ಪಣ್ಣಾ ಮಗದುಮ್, ದೀಪಕ ಪಾಟೀಲ,ಅಪ್ಪಾಸಾಬ ಚೌಗಲಾ, ಈಶ್ವರ ಕುಂಬಾರೆ, ದಿಲೀಪ ಪವಾರ, ಶಿವಲಿಂಗ ಇಬ್ರಾಹಿಂಪುರ, ಶಿವಾನಂದ ಮಗದುಮ, ಇತರೆ ಮುಖಂಡರು ಹಾಗೂ ಆಸ್ಪತ್ರೆಯ ಸಿಬ್ಬಂದಿ ಉಪಸ್ಥಿತರಿದ್ದರು.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');