ಮಗನಿಗೆ ಗೊತ್ತಾಗದಂತೆ ಸೊಸೆಯನ್ನು 80 ಸಾವಿರ ರೂಪಾಯಿಗೆ ಮಾರಿದ ಮಾವ! ಮುಂದೇನಾಯ್ತು?

0

ಲಖನೌ: ಲವ್ ಮ್ಯಾರೇಜ್ ಆಗಿದ್ದ ಮಗನ ಹೆಂಡತಿಯನ್ನು ತಂದೆಯೇ ಮಗನಿಗೆ ಗೊತ್ತಾಗದಂತೆ ಮಾರಾಟ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಸೋಶಿಯಲ್​ ಮೀಡಿಯಾ ಮೂಲಕ ಸ್ನೇಹಿತರಾಗಿದ್ದ ಅಸ್ಸಾಂ ಮೂಲದ ಯುವತಿ ಮತ್ತು ಉತ್ತರ ಪ್ರದೇಶದ ಮೂಲದ ಪ್ರಿನ್ಸ್ ಮದುವೆಯಾಗಿದ್ದರು. ಪ್ರಿನ್ಸ್ ಟ್ಯಾಕ್ಸಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಗಾಜಿಯಾಬಾದ್​ನಲ್ಲೇ ವಾಸ ಮಾಡುತ್ತಿದ್ದ.

ಈ ಮಧ್ಯೆ ಪ್ರಿನ್ಸ್​ನ ತಂದೆ ಸೊಸೆಯನ್ನು ಬರಾಬಂಕಿಯಲ್ಲಿರುವ ನಮ್ಮ ಮನೆಗೆ ಬಾ ಎಂದು ಕರೆದಿದ್ದಾರೆ. ಜೂನ್​ 4ರಂದು ಸೊಸೆಯನ್ನು ಮನೆಗೆ ಕರೆಸಿಕೊಂಡಿದ್ದಾರೆ. ಅಲ್ಲಿ ಮತ್ತೊಬ್ಬ ಯುವಕನಿದ್ದು, ಸಂಜೆ ವೇಳೆ ಆತನೇ ನಿನ್ನನ್ನು ಗಂಡನ ಮನೆ ಬಳಿ ಬಿಡುತ್ತಾನೆ ಎಂದು ಕಳುಹಿಸಿಕೊಟ್ಟಿದ್ದಾನೆ. ಆದರೆ ಆತ ಆಕೆಯನ್ನು ಗಾಜಿಯಾಬಾದ್​ಗೆ ಕರೆದುಕೊಂಡು ಹೋಗಿದ್ದಾನೆ.

ಈ ರೀತಿ ಏನೋ ಅನಾಹುತವಾಗಿದೆಯೆಂದು ಯುವತಿಯ ಸಹೋದರ ಪ್ರಿನ್ಸ್​ಗೆ 5ನೇ ತಾರೀಖಿನಂದು ಕರೆ ಮಾಡಿ ತಿಳಿಸಿದ್ದಾನೆ. ತಕ್ಷಣ ಪ್ರಿನ್ಸ್​ ತನ್ನ ತಂದೆಯ ಮನೆಗೆ ಹೋಗಿದ್ದಾನೆ. ಆದರೆ ಅಲ್ಲಿ ಹೆಂಡತಿಯಾಗಲೀ ಅಥವಾ ತಂದೆಯಾಗಲಿ ಇಲ್ಲದಿರುವುದು ಕಂಡು ಗಾಬರಿಗೊಂಡು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಯುವತಿ ಜತೆ ಆರೋಪಿಯನ್ನು ಹುಡುಕಿದ್ದಾರೆ. ಮಾವ ತನ್ನ ಸೊಸೆಯನ್ನು 80 ಸಾವಿರ ರೂಪಾಯಿಗೆ ಯುವಕನಿಗೆ ಮಾರಿದ್ದಾಗಿ ಹೇಳಲಾಗಿದೆ. ಹಾಗೂ ಆ ಯುವಕ ಆಕೆಯೊಂದಿಗೆ ಮದುವೆ ಮಾಡಿಕೊಳ್ಳಲೂ ಸಿದ್ಧತೆ ಮಾಡಿಕೊಂಡಿದ್ದ ಎನ್ನಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿದ್ದ 8 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.////

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');