ಸಿಡಿ ಕೇಸ್ ಗೆ ಹೊಸ ತಿರುವು: ಸರ್ಕಾರ, ಪೊಲೀಸ್ ಆಯುಕ್ತರಿಗೆ‌ ಹೈಕೋರ್ಟ್ ನೋಟಿಸ್

0

ಬೆಂಗಳೂರು: ಶಾಸಕ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಇದೀಗ ಮತ್ತೊಂದು ತಿರುವು ಪಡೆದಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ (ಎಸ್.ಐ.ಟಿ) ದ ವಿರುದ್ಧವೇ ಸಿಡಿಯಲ್ಲಿದ್ದ ಯುವತಿ ಹೈಕೋರ್ಟ್ ಮೆಟ್ಟಿಲೇರಿದ್ದಾಳೆ.

ಎಸ್.ಐ.ಟಿ. ತನಿಖೆ ಸರಿಯಾಗಿ ನಡೆದಿಲ್ಲ. ಹೀಗಾಗಿ, ಎಸ್.ಐ.ಟಿ. ರಚನೆ ಮಾಡಿರುವುದನ್ನು ಮತ್ತು ಅದು ಇದುವರೆಗೆ ನಡೆಸಿದ ತನಿಖೆಯನ್ನು ರದ್ದುಪಡಿಸಿ, ಹೊಸ ತನಿಖಾ ತಂಡ ರಚಿಸುವಂತೆ ಅರ್ಜಿಯಲ್ಲಿ ಯುವತಿ ಮನವಿ ಮಾಡಿದ್ದಾಳೆ.

ಈ ಬಗ್ಗೆ ಹೈಕೋರ್ಟ್, ಸರ್ಕಾರ ಮತ್ತು ಪೊಲೀಸ್ ಆಯುಕ್ತರಿಗೆ‌ ನೋಟಿಸ್ ಜಾರಿಗೊಳಿಸಿದೆ.

ರಮೇಶ್ ಜಾರಕಿಹೊಳಿ ಮತ್ತು ಯುವತಿಯಿದ್ದ ಸಿಡಿ ಬಹಿರಂಗವಾದ ಬಳಿಕ ಹಲವು ಬೆಳವಣಿಗೆಗಳು ನಡೆದಿದೆ. ಇದೀಗ ಯುವತಿಯ ಈ ನಡೆ ಮತ್ತೆ ಕುತೂಹಲಕ್ಕೆ ಕಾರಣವಾಗಿದೆ.////

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');