ಮಹಿಳಾ ಅಧಿಕಾರಿಯನ್ನು ‘ಕಾಂಗ್ರೆಸ್​ ನಾಯಿ’ ಎಂದು ನಿಂದಿಸಿದ ಬಿಜೆಪಿ ಮುಖಂಡ; ವಿಡಿಯೋ ವೈರಲ್​

0

ಮಂಗಳೂರು: ಮಹಿಳಾ ಅಧಿಕಾರಿಗೆ ಬಿಜೆಪಿ ಮುಖಂಡನೊಬ್ಬ “ಕಾಂಗ್ರೆಸ್​ನ ನಾಯಿ” ಎಂದು ನಿಂದಿಸಿರುವ ವಿಡಿಯೋ ವೈರಲ್​ ಆಗಿದೆ. ಮಂಗಳೂರು ಹೊರವಲಯದ ಮುಡಿಪು ಎಂಬಲ್ಲಿ ಈ ಘಟನೆ ನಡೆದಿದೆ.

ಕರ್ನಾಟಕ ಜಲಮಂಡಳಿ ಇಂಜಿನಿಯರ್ ಶೋಭಾಲಕ್ಷ್ಮಿ ಎಂಬುವವರು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ನಡೆಸುತ್ತಿದ್ದರು. ಸ್ಥಳಕ್ಕೆ ಬಂದ ಸ್ಥಳೀಯ ಬಿಜೆಪಿ ಮುಖಂಡ ಹಾಗೂ ವಕೀಲ ಅಸ್ಗರ್ ಮುಡಿಪು ಎಂಬುವವರು ಅಧಿಕಾರಿಯನ್ನು ಅವಾಚ್ಯವಾಗಿ ನಿಂದಿಸಿದ್ದಾರೆ.

“ಕಾಮಗಾರಿಯ ಆರ್ಡರ್ ಕಾಪಿ ಕೊಟ್ಟು ಕೆಲಸ ಮಾಡಿ. ಬಿಜೆಪಿಯ ಒಬ್ಬನೇ ಸಾಕು ಕಾಂಗ್ರೆಸ್​ನ ನೂರು ಮಂದಿಗೆ. ನೀವು ಕಾಂಗ್ರೆಸ್​ನ ನಾಯಿ, ಎಂಜಲು ತಿಂದು ಸರ್ಕಾರಕ್ಕೆ ಕಪ್ಪುಚುಕ್ಕೆ ತಂದವರು. ಕಾಂಗ್ರೆಸ್​ನ ಒಬ್ಬ ನಾಯಿ ಇಲ್ಲಿ ಗುಂಡಿ ತೆಗೆದು ವಂಚನೆ ಮಾಡಿದ್ದಾನೆ. ನಾನೀಗ ಕೋರ್ಟ್​ಗೆ ಹೋಗುತ್ತೇನೆ, ಬೇಕಿದ್ದರೆ ನೀವು ಕೇಸ್​ ದಾಖಲಿಸಿ”  ಎಂದು ವಕೀಲ ಅಸ್ಗರ್ ಅವಾಜ್​ ಹಾಕಿದ್ದಾರೆ.

ಬಿಜೆಪಿ ಮುಖಂಡನ ಬೈಗುಳದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಇನ್ನು ಅವಾಚ್ಯವಾಗಿ ನಿಂದಿಸಿದವನ ವಿರುದ್ಧ ಮಹಿಳಾ ಅಧಿಕಾರಿ ಕೊಣಾಜೆ ಠಾಣೆಗೆ ದೂರು ನೀಡಿದ್ದಾರೆ. ಮಂಗಳೂರು ಶಾಸಕ ಯು.ಟಿ. ಖಾದರ್ ಅನುದಾನದಡಿ ಕಾಮಗಾರಿ ನಡೆಯುತ್ತಿತ್ತು.////

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');