ಮಾಜಿ ಸಚಿವ ಶ್ರೀ ಸಿ.ಎಂ.ಉದಾಸಿ ಅವರ ನಿಧನಕ್ಕೆ ಡಾ.ಕೋರೆ ಸಂತಾಪ

0

ಮಾಜಿ ಸಚಿವ ಶ್ರೀ ಸಿ.ಎಂ.ಉದಾಸಿ ಅವರ ನಿಧನಕ್ಕೆ ಡಾ.ಕೋರೆ ಸಂತಾಪ

ಆತ್ಮೀಯ ಹಿರಿಯ ನಾಯಕರು, ಸಜ್ಜನ ರಾಜಕಾರಣಿ, ಅಜಾತಶತ್ರು, 5 ದಶಕಗಳ ಕಾಲ ತಮ್ಮ ರಾಜಕೀಯ ಜೀವನದಲ್ಲಿ ಅನೇಕರಿಗೆ ಮಾರ್ಗದರ್ಶಕರಾಗಿದ್ದ ಮಾಜಿ ಸಚಿವರೂ ಹಾಗೂ ಪ್ರಸ್ತುತ ಹಾನಗಲ್ಲ ಮತಕ್ಷೇತ್ರದ ಶಾಸಕರಾದ ಶ್ರೀ ಸಿ. ಎಂ. ಉದಾಸಿ ಅವರು ನಿಧನರಾಗಿರುವುದು ಅತೀವ ದುಃಖವನ್ನು ತರಿಸಿದೆ ಎಂದು ಕೆಎಲ್‍ಇ ಸಂಸ್ಥೆಯ ಕಾರ್ಯಾಧ್ಯP್ಷÀರಾದ ಡಾ.ಪ್ರಭಾಕರ ಕೋರೆಯವರು ಕಂಬನಿ

ಉದಾಸಿ ಅವರು ತಮ್ಮ 85ನೇ ವಯಸ್ಸಿನಲ್ಲಿಯೂ ಇತರರಿಗೆ ಸ್ಫೂರ್ತಿಯಾಗಿ ಕೆಲಸ ಮಾಡಿದ್ದರು. ಬೆಳಗಾವಿಯ ಸುವರ್ಣ ಸೌಧ ಕಟ್ಟಡ ಕಾಮಗಾರಿಯ ಸಮಯದಲ್ಲಿ ನನ್ನ ಜೊತೆಗೆ ಸಲಹೆ ಸೂಚನೆ ನೀಡಿ ಕಾರ್ಯ ಮಾಡಿರುವುದು ಶಾಶ್ವತವಾಗಿ ನನ್ನ ನೆನಪಿನಂಗಳದಲ್ಲಿ ಉಳಿದಿದೆ. ಪ್ರಾಮಾಣಿಕ, ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ್ದ ಅವರು ಸ್ವಚ್ಛ ಆಡಳಿತಕ್ಕೆ ಮಾದರಿಯಾಗಿದ್ದರು. ಇಂತಹ ಒಬ್ಬ ಜನಮೆಚ್ಚಿದ ನಾಯಕ ನಿಧನ ಹೊಂದಿರುವುದು ಈಡೀ ಸಮಾಜಕ್ಕೆ ನಷ್ಟವುಂಟು ಮಾಡಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತೇನೆ. ಅವರ ಕುಟುಂಬವರ್ಗದವರಿಗೆ ದುಃಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತನು ಕರುಣಿಸಲೆಂದು ಭಕ್ತಿಯಿಂದ ಪ್ರಾರ್ಥಿಸುತ್ತೇನೆ. ಕೆಎಲ್‍ಇ ಸಂಸ್ಥೆಯ ಸಮಸ್ತ ಕುಟುಂಬದ ಪರವಾಗಿ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತೇನೆ ಎಂದು ಡಾ.ಪ್ರಭಾಕರ ಕೋರೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');