ಬಿಜೆಪಿ ಯುವ ಮೋರ್ಚಾ ಕಾರ್ಯ ದರ್ಶಿ ನಿಧನಕ್ಕೆ ಕಟೀಲ್ ಸಂತಾಪ

0
ಕಾಗವಾಡ ವರದಿ:  ಬಿಜೆಪಿ ಯುವ ಮೋರ್ಚಾ ಕಾರ್ಯ ದರ್ಶಿ ನಿಧನಕ್ಕೆ ಕಟೀಲ್ ಸಂತಾಪ
ಬಿಜೆಪಿ ಯುವಮೋರ್ಚಾ ರಾಜ್ಯ ಕಾರ್ಯಾಲಯದ ಕಾರ್ಯದರ್ಶಿಯಾಗಿ ದ್ದ ರಾಹುಲ್ ಪದ್ಮಣ್ಣಾ ತಾರದಾಳೆ ಅವರ ನಿಧನದ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ್ ಕಟೀಲ್ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ ಬುದ್ರುಕ ಗ್ರಾಮದ ತಾರದಾಳೆ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.ರಾಹುಲ್ ಪದ್ಮಣ್ಣಾ ತಾರದಾಳೆ(30) ಇವರು ಕೋವಿಡ್‍ನಿಂದ ಮೃತಪಟ್ಟಿದ್ದರಿಂದ ಇವರ ನಿವಾಸಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ ಕಟೀಲ್, ಸೇರಿದಂತೆ ಬಿಜೆಪಿ ಪಕ್ಷದ ಮುಖಂಡರು ಕುಟುಂಬಸ್ಥರಿಗೆ ಭೇಟ್ಟಿಯಾಗಿ ಸಾಂತ್ವನ ಹೇಳಿದ್ದು ರಾಹುಲ್ ಪದ್ಮಣ್ಣಾ ತಾರದಾಳೆ(30) ಇವರು ಕೊರೊನಾದಿಂದ ಕಳೇದ ಏಪ್ರಿಲ್ ದಿ. 29 ರಂದು ನಿಧನ ಹೊಂದಿದ್ದರು. ಕಳೆದ ಕೆಲ ವರ್ಷಗಳಿಂದ ಬೆಂಗಳೂರಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಾ ಬಿಜೆಪಿ ಪಕ್ಷದ ಯುವಮೋರ್ಚಾ ರಾಜ್ಯ ಕಾರ್ಯಾಲಯ ಕಾರ್ಯದರ್ಶಿಯಾಗಿ ರಾಹುಲ್ ಪದ್ಮಣ್ಣಾ ತಾರದಾಳೆ ಅವರು ಸೇವೆ ಸಲ್ಲಿಸುತ್ತಿದ್ದರು. ಇವರು ರಾಜ್ಯಾಧ್ಯಕ್ಷ ನಳೀನ್‍ಕುಮಾರ ಕಟೀಲ್ ಅವರಿಗೆ ಆಪ್ತರಾಗಿದ್ದ ಅವರು ಪಕ್ಷದ ಅಭಿವೃದ್ಧಿಗಾಗಿ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿದ್ದರು. ಅವರ ನಿಧನದಿಂದ ನೊಂದ ರಾಜ್ಯಾಧ್ಯಕ್ಷರು ರಾಹುಲ್ ಅವರ ತಂದೆ ಪದ್ಮಣ್ಣಾ, ತಾಯಿ ಮಾಲುತಾಯಿ, ಸಹೋದರಿ ರೋಹಿನಿ ಇವರನ್ನು ಭೇಟ್ಟಿಯಾಗಿ ಸಾಂತ್ವನ ಹೇಳಿದರು.
ಕಾಗವಾಡ ಕ್ಷೇತ್ರದ ಶಾಸಕರು ಹಾಗೂ ಕೈಮಗ್ಗ ಮತ್ತು ಜವಳಿ ಇಲಾಖೆ ಸಚಿವರಾದ ಶ್ರೀಮಂತ ಪಾಟೀಲ, ಬಿಜೆಪಿ ಪಕ್ಷದ ರಾಜ್ಯ ಸಂಘಟನಾ ಪ್ರಧಾನಕಾರ್ಯದರ್ಶಿ ಅರುಣಕುಮಾರಜಿ, ರಾಜ್ಯ ಪ್ರಧಾನಕಾರ್ಯದರ್ಶಿ ಮಹೇಶ ತೆಂಗಿನಕಾಯಿ, ಚಿಕ್ಕೋಡಿ ಜಿಲ್ಲಾ ಬಿಜೆಪಿ ಪಕ್ಷದ ಅಧ್ಯಕ್ಷ ಡಾ. ರಾಜೇಶ ನೆರಲಿ, ಅಥಣಿ ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಶೀತಲಗೌಡ ಪಾಟೀಲ ಇವರು ಭೇಟ್ಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಈ ವೇಳೆ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ನಳೀನ್‍ಕುಮಾರ ಕಟೀಲ್ ಮಾತನಾಡಿ ಬಿಜೆಪಿ ಪಕ್ಷದ ಯುವಮೋರ್ಚಾ ರಾಜ್ಯ ಕಾರ್ಯಾಲಯ ಕಾರ್ಯದರ್ಶಿ ದಿ. ರಾಹುಲ್ ಪದ್ಮಣ್ಣಾ ತಾರದಾಳೆ ಒಳ್ಳೆಯ ಕಾರ್ಯಕರ್ತ, ತತ್ವ, ಸಿದ್ಧಾಂತ ವಿಚಾರಗಳಿಗೆ ನಿಷ್ಠೆಯಾಗಿ ಕಾರ್ಯನಿರ್ವಹಿಸುತ್ತಿದ್ದನು. ಕೋವಿಡ್‍ನಿಂದ ನಿಧನ ಹೊಂದಿದ್ದನು. ಅವರ ಕುಟುಂಬಕ್ಕೆ ಸಾಂತ್ವನ ಹೇಳಲು ಬಂದಿದ್ದೆ. ಕೆಲ ವರ್ಷಗಳಿಂದ ರಾಹುಲ್ ತಾರದಾಳೆ ಪಕ್ಷದಲ್ಲಿ ಕೆಲಸ ಮಾಡುತ್ತಿದ್ದನು. ಇಂಥಹ ನಿಷ್ಠಾವಂತ ಕಾರ್ಯಕರ್ತನನ್ನು ಕಳೆದುಕೊಂಡಿದ್ದು ನಮಗೆ ತೀವ್ರ ನೋವಾಗಿದೆ ಎಂದು ಶ್ರದ್ಧಾಂಜಲಿ ಸಲ್ಲಿಸಿದರು.
ಈ ವೇಳೆ ಕಾಗವಾಡ ಕ್ಷೇತ್ರ ಶಾಸಕರು ಹಾಗೂ ಸಚಿವರಾದ ಶ್ರೀಮಂತ ಪಾಟೀಲ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿ ರಾಹುಲ್ ತಾರದಾಳೆ ಒಳ್ಳೆಯ ಪ್ರಾಮಾಣಿಕ ಕಾರ್ಯಕರ್ತ, ಪಕ್ಷದ ಅಭಿವೃದ್ಧಿಗಾಗಿ ಶ್ರಮಿಸಿದ್ದನು. ಬೆಂಗಳೂರಿನಲ್ಲಿ ಉಳಿದು ಅಥಿತಿ ಉಪನ್ಯಾಸಕರಾಗಿ ಸೇವೆ ಮಾಡುತ್ತಾ ಉಳಿದ ಸಮಯದಲ್ಲಿ ಪಕ್ಷದ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಪಕ್ಷಕ್ಕಾಗಿ ಸೇವೆ ಸಲ್ಲಿಸುವ ಕಾರ್ಯಕರ್ತನು ನಮ್ಮನ್ನಗಲಿದ್ದು ಕುಟುಂಬಕ್ಕೆ ಒದಗಿ ಬಂದ ದುಃಖದಲ್ಲಿ ನಾವು ಭಾಗಿಯಾಗಿದ್ದೇವೆ. ಈ ಕುಟುಂಬದ ಕಷ್ಟದಲ್ಲಿ ಎಲ್ಲ ರೀತಿಯ ಸಹಾಯ ಮಾಡುವ ಭರವಸೆಯನ್ನು ಸಚಿವರು ನೀಡಿದರು.
ಈ ವೇಳೆ ಪಕ್ಷದ ಜಿಲ್ಲಾಧ್ಯಕ್ಷ ಡಾ. ರಾಜೇಶ ನೆರಲಿ, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಶೀತಲಗೌಡ ಪಾಟೀಲ, ಉಗಾರ ಗ್ರಾಮ ಪಂಚಾಯತಿ ಅಧ್ಯಕ್ಷ ಅಣ್ಣಾಗೌಡ ಪಾಟೀಲ, ಚಿಕ್ಕೋಡಿ ಜಿಲ್ಲಾ ಯುವಾಮೋರ್ಚಾ ಅಧ್ಯಕ್ಷ ದೀಪಕ ಪಾಟೀಲ, ದಾದಾಗೌಡ ಪಾಟೀಲ, ಯೊಗೇಶ ಕುಂಬಾರ, ಅನೀಲ ನಾವಿಲಗೇರ, ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');