ಬೈಲಹೊಂಗಲ: ಕೋವಿಡ್ ಸಹಾಯ ಬಳಗದಿಂದ ಆಹಾರ ಕಿಟ್ ವಿತರಣೆ

0

ಬೈಲಹೊಂಗಲ: ನಗರದ ಮೇಘನಾ ಟ್ರೇಡರ್ಸ್ ಆವರಣದಲ್ಲಿ ಇಂದು ಕೋವಿಡ್ ಸಹಾಯ ಬಳಗದಿಂದ ಬಡ ಜನರಿಗೆ ಆಹಾರ ಕಿಟ್ ಗಳನ್ನು ವಿತರಿಸಲಾಯಿತು.

ಮಾಜಿ ಶಾಸಕ ಜಗದೀಶ ಮೆಟಗುಡ್ ಆಹಾರದ ಕಿಟ್ ಗಳನ್ನು ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಕೋವಿಡ್ ಸಹಾಯ ಬಳಗದವರು ಸೇರಿ ಈ ಒಂದು ಅದ್ಭುತವಾದ ಕಾರ್ಯಕ್ಕೆ ಕೈ ಹಾಕಿರುವುದು ಸಂತಸದ ವಿಷಯ. ಇಂತಹ ಮಹಾಮಾರಿಯ ಸಂದರ್ಭದಲ್ಲಿ ಜನತೆಯ ಜೊತೆ ನಿಲ್ಲುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ. ಆಹಾರದ ಕಿಟ್ ಗಳನ್ನು ವಿತರಿಸುತ್ತಿರುವ ಕಾರ್ಯ ಸ್ಮರಣೀಯ. ನಿಮ್ಮ ಸೇವೆ ಹೀಗೆಯೇ  ಮುಂದುವರಿಯಲಿ ಎಂದು ಹೇಳಿದರು.

ಉಪವಿಭಾಗ ಅಧಿಕಾರಿ ಶಶಿಧರ್ ಬಗಲಿ, ಡಿವೈಎಸ್ಪಿ ಶಿವಾನಂದ ಕಟಗಿ, ತಹಶೀಲ್ದಾರ್ ಬಸವರಾಜ ನಾಗರಾಳ, ಉದ್ಯಮಿ ವಿಜಯ್ ಮೆಟಗುಡ್ ಇದ್ದರು.

ಕೋವಿಡ್ ಸಹಾಯ ಬಳಗದ ಸದಸ್ಯರು 350 ಕ್ಕೂ ಹೆಚ್ಚು ಆಹಾರದ ಕಿಟ್ ಗಳನ್ನು ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಕೋವಿಡ್ ಸಹಾಯ ಬಳಗ ಹಾಗೂ ಸಪೋರ್ಟಿಂಗ್ ಹ್ಯಾಂಡ್ಸ್ ತಂಡದ ಮುಖಂಡ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಪುರಸಭೆ ಸದಸ್ಯ ಗುರು ಮೆಟಗುಡ್, ಬಿಜೆಪಿ ತಾಲೂಕು ಮಾಧ್ಯಮ ವಕ್ತಾರ ದಯಾನಂದ ಪರಾಳಶೆಟ್ಟರ, ಬಿಜೆಪಿ ಜಿಲ್ಲಾ ಒಬಿಸಿ ಮೋರ್ಚಾ ಉಪಾಧ್ಯಕ್ಷ ಸಂತೋಷ ಹಡಪದ, ಕುಮಾರ್ ನಾಗನೂರು ಸೇರಿ ಇನ್ನಿತರರು ಇದ್ದರು. ////

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');