ಲಸಿಕೆಗಾಗಿ ಕಾಂಗ್ರೆಸ್ ನೀಡಿದ್ದ 100 ಕೋಟಿ ರೂಪಾಯಿಯನ್ನು ತಿರಸ್ಕರಿಸಿದ ರಾಜ್ಯ ಸರ್ಕಾರ; ನಿರಾಕರಿಸಿದ್ದಕ್ಕೆ ಸ್ಪಷ್ಟನೆ

0

ಬೆಂಗಳೂರು: ರಾಜ್ಯದ ಜನತೆಗೆ ಕೋವಿಡ್ ಲಸಿಕೆ ವಿತರಿಸಲು 100 ಕೋಟಿ ರೂ. ನೀಡುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​​ ಹಾಗೂ ಕಾಂಗ್ರೆಸ್​ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಘೋಷಿಸಿದ್ದರು. ಕಾಂಗ್ರೆಸ್​ ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯ 100 ಕೋಟಿ ರೂಪಾಯಿ ಹಣವನ್ನು ಕೊರೊನಾ ಲಸಿಕೆಗೆ ನೀಡಲಾಗಿತ್ತು. ಆದರೆ ಕಾಂಗ್ರೆಸ್​ನ 100 ಕೋಟಿ ರೂ. ಹಣವನ್ನು ರಾಜ್ಯ ಸರ್ಕಾರ ನಿರಾಕರಿಸಿದೆ.

ಮೇ 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆ ಪಡೆಯಲು ಅರ್ಹರು ಎಂದು ಘೋಷಿಸಿದ ಬಳಿಕ ವ್ಯಾಕ್ಸಿನ್​ಗಾಗಿ ಜನ ಮುಂದಾಗಿದ್ದರು. ಆದರೆ ರಾಜ್ಯದಲ್ಲಿ ಲಸಿಕೆ ಕೊರತೆಯಿಂದ ಯೋಜನೆ ಸೂಕ್ತ ರೀತಿಯಲ್ಲಿ ಅನುಷ್ಠಾನಗೊಂಡಿರಲಿಲ್ಲ. ಸಕಾಲಕ್ಕೆ ಲಸಿಕೆ ನೀಡದ ಬಿ.ಎಸ್​. ಯಡಿಯೂಪರಪ್ಪ ಸರ್ಕಾರದ ವಿರುದ್ಧ ವಿಪಕ್ಷಗಳ ಮುಗಿಬಿದ್ದಿದ್ದವು.

ಮೋದಿ ಸರ್ಕಾರ ವಿದೇಶಗಳಿಗೆ ಲಸಿಕೆ ಕಳುಹಿದ್ದರಿಂದಲೇ ನಮಗೆ ಲಸಿಕೆ ಕೊರತೆ ಉಂಟಾಗಿದೆ ಎಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದ್ದರು. ರಾಜ್ಯ ಕಾಂಗ್ರೆಸ್​ ಒಂದು ಹೆಜ್ಜೆ ಮುಂದೆ ಹೋಗಿ ಜನರಿಗೆ ನಾವೇ ಲಸಿಕೆ ಕೊಡುತ್ತೇವೆ ಎಂದು ಘೋಷಿಸಿತ್ತು.

ಕೇಂದ್ರವೇ ಉಚಿತ ಲಸಿಕೆ ನೀಡಲು ಮುಂದಾಗಿದೆ: ಸರ್ಕಾರದ ಸ್ಪಷ್ಟನೆ

ಕಾಂಗ್ರೆಸ್ ನ 100 ಕೋಟಿ ಹಣ ಬಳಕೆಗೆ ಸರ್ಕಾರ ಅನುಮತಿ ನೀಡಿಲ್ಲ. ಕಾಂಗ್ರೆಸ್ ಪಕ್ಷ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿದೆ. ನಿಮ್ಮ ನಿಲುವು ಸ್ವಾಗತಾರ್ಹವಾದುದು, ಆದರೆ ಕೇಂದ್ರವೇ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡುವುದಾಗಿ ಘೋಷಿಸಿದೆ. ಲಸಿಕೆಗೆ ಧನ ಸಹಾಯ ಮಾಡಲು ಹಲವು ಸಂಸ್ಥೆಗಳು ಮುಂದೆ ಬಂದಿವೆ. ಅಲ್ಲದೆ ಈಗಾಗಲೇ ಎಲ್ಲಾ ಶಾಸಕರ ಶೇ.25 ರಷ್ಟು ಅನುದಾನ ಬಳಕೆ ಮಾಡಲಾಗಿದೆ. ಆ ಹಣ ಕೋವಿಡ್ ಕಾರ್ಯಕ್ರಮಗಳಿಗೆ ಬಳಕೆಯಾಗಿದೆ. ಉಳಿದ ಶೇ.75 ರಷ್ಟು ಹಣ ಕ್ಷೇತ್ರಾವಾರು ಅಭಿವೃದ್ಧಿ ಯೋಜನೆಗಳಿಗೆ ಬಳಸಿಕೊಳ್ಳಿ.

ಒಂದು ವೇಳೆ ನಿಮ್ಮ ಸ್ವಂತ ಹಣ ನೀಡುವುದಾದರೆ, ಅದನ್ನು ಸಂಘ ಸಂಸ್ಥೆಗಳಿಗೆ ನೀಡಿ ಎಂದು ಸರ್ಕಾರ ಕಾಂಗ್ರೆಸ್​ ಮನವಿಗೆ ಉತ್ತರ ನೀಡಿದೆ.

ಇದಕ್ಕೂ ಮುನ್ನ ಕಾಂಗ್ರೆಸ್​ ವಾಕ್ಸಿನೇಟ್​​ ಕರ್ನಾಟಕ ಎಂಬ ಘೋಷವಾಖ್ಯದಡಿ ಅಭಿಯಾನ ಶುರು ಮಾಡಿತ್ತು. ಲಸಿಕೆ ಪಡೆದು ಸೋಂಕಿನಿಂದ ಸುರಕ್ಷಿತವಾಗಿರಬಹುದು ಎಂದು ತಜ್ಞರು ಹೇಳಿದ್ದಾರೆ. ಲಸಿಕೆ ಪಡೆದವರಲ್ಲಿ ರೋಗ ಹರಡುವಿಕೆ, ಮರಣ ಪ್ರಮಾಣ ಕಡಿಮೆ ಎಂದು ಸಾಬೀತಾಗಿದೆ. ಪ್ರತಿಯೊಬ್ಬರಿಗೂ ಲಸಿಕೆ ನೀಡುವುದು ಸರ್ಕಾರದ ಕರ್ತವ್ಯ. ರಾಜ್ಯದಲ್ಲಿ ಲಸಿಕೆ ಇಲ್ಲದೆ ವಿಷಮಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ರಾಜ್ಯ ಕಾಂಗ್ರೆಸ್​ ಲಸಿಕೆ ಖರೀದಿಸಿ ಕೊಡಲು ನಿರ್ಧರಿಸಿದೆ ಎಂದು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ ಹೇಳಿದ್ದರು.////

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');