ಮುಂಬೈನಲ್ಲಿ ಧಾರಾಕಾರ ಮಳೆ: ಹಲವು ಮಾರ್ಗಗಳು ಜಲಾವೃತ, ರೈಲ್ವೆ ಸಂಚಾರ ಸ್ಥಗಿತ

0

ಮುಂಬೈ: ಮಹಾರಾಷ್ಟ್ರ ರಾಜಧಾನಿ ವಾಣಿಜ್ಯ ನಗರಿ ಮುಂಬೈ ಮತ್ತು ನೆರೆಹೊರೆ ಪ್ರದೇಶಗಳಲ್ಲಿ ಬುಧವಾರ ಮುಂಗಾರು ಮಳೆ ಆರಂಭವಾಗಿದೆ. ಇದರ ಪರಿಣಾಮ ಇಂದು ನಸುಕಿನ ಜಾವದಿಂದಲೇ ಧಾರಾಕಾರ ಮಳೆಯಾಗುತ್ತಿದೆ. ರಸ್ತೆಗಳು ಜಲಾವೃತವಾಗಿದ್ದು, ವಾಹನ-ಜನಸಂಚಾರಕ್ಕೆ ತೀವ್ರ ಅಡಚಣೆಯುಂಟಾಗಿದೆ.

ವಾಹನಗಳು ಅರ್ಧ ಮಟ್ಟದವರೆಗೆ ನೀರಿನಲ್ಲಿ ಮುಳುಗಿ ಹೋಗುತ್ತಿವೆ. ಇದು ಮುಂಬೈನ ಗಾಂಧಿ ಮಾರುಕಟ್ಟೆಯಲ್ಲಿನ ದೃಶ್ಯವಾಗಿದೆ. ರೈಲ್ವೆ ಹಳಿಗಳು ನೀರಿನಲ್ಲಿ ಮುಳುಗಿಹೋಗಿದೆ. ಸಿಯೊನ್ ರೈಲ್ವೆ ನಿಲ್ದಾಣ ಮತ್ತು ಜಿಟಿಬಿ ನಗರ ರೈಲ್ವೆ ನಿಲ್ದಾಣದ ಮಧ್ಯೆ ರೈಲ್ವೆ ಹಳಿಗಳು ಮುಳುಗಿಹೋಗಿವೆ.

ಮುಂಬೈಯ ಕುರ್ಲಾ ಮತ್ತು ಸಿಎಸ್ ಎಂಟಿ ಮಧ್ಯೆ ಸ್ಥಳೀಯ ರೈಲು ಸೇವೆಗಳನ್ನು ಧಾರಾಕಾರ ಮಳೆಯಿಂದಾಗಿ ಸ್ಥಗಿತಗೊಳಿಸಲಾಗಿದೆ. ನೀರು ಕಡಿಮೆಯಾದ ನಂತರ ರೈಲು ಸಂಚಾರ ಪುನಾರಂಭವಾಗಲಿದೆ. ಧಾರಾಕಾರ ಮಳೆಯಿಂದಾಗಿ ಮುಂಬೈಯ ಕಿಂಗ್ಸ್ ಸರ್ಕಲ್ ನಲ್ಲಿ ಹಲವು ಕಡೆ ವಾಹನಗಳು ಮುಳುಗಿದ್ದು ಪ್ರಯಾಣಿಕರಿಗೆ ತೀವ್ರ ಅಡಚಣೆಯುಂಟಾಗಿದೆ.

ಚುನಭಟ್ಟಿ ರೈಲ್ವೆ ನಿಲ್ದಾಣದ ಬಳಿ ಭಾರಿ ಮಳೆ ಮತ್ತು ನೀರು ಹರಿಯುವುದರಿಂದ, ಹಾರ್ಬರ್ ಮಾರ್ಗದಲ್ಲಿ ರೈಲು ಸೇವೆಗಳನ್ನು ಬಿ/ ಡಬ್ಲ್ಯೂ ಸಿಎಸ್‌ಎಂಟಿ- ವಾಶಿ ಇಂದು ಬೆಳಿಗ್ಗೆ ಯಿಂದ ಸ್ಥಗಿತಗೊಳಿಸಲಾಗಿದೆ. ಸಿಯಾನ್-ಕುರ್ಲಾ ವಿಭಾಗದಲ್ಲಿ ನೀರು ಹರಿಯುವುದರಿಂದ ಮುಖ್ಯ ಮಾರ್ಗದಲ್ಲಿ, ಸಿಎಸ್‌ಎಂಟಿ- ಥಾಣೆಯಿಂದ ಬೆಳಿಗ್ಗೆ 10.20 ರಿಂದ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.

ಮುಂಬೈಯ ಹಲವು ರಸ್ತೆಗಳಲ್ಲಿ ಇಂದು ಬೆಳಗ್ಗೆಯಿಂದ ಸಂಚಾರ ದಟ್ಟಣೆಯುಂಟಾಗಿದೆ. ಹಲವು ಕಡೆಗಳಲ್ಲಿ ಬಸ್ ಸಂಚಾರದ ಮಾರ್ಗಗಳನ್ನು ಬದಲಿಸಲಾಗಿದೆ.

ಅರಬ್ಬೀ ಸಮುದ್ರದಲ್ಲಿ ಧಾರಾಕಾರ ಮಳೆಯಿಂದಾಗಿ ಅಪರಾಹ್ನ ಹೊತ್ತಿಗೆ 4 ಮೀಟರ್ ವರೆಗೆ ನೀರು ತುಂಬುವ ಲಕ್ಷಣಗಳಿವೆ ಎಂದು ಬೃಹತ್ ಮುಂಬೈ ಮಹಾನಗರ ಪಾಲಿಕೆ ತಿಳಿಸಿದೆ.

ಮುಂಬೈಗೆ ಮಾನ್ಸೂನ್ ಆಗಮನವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಮುಂಬೈ ಕಚೇರಿಯ ಮುಖ್ಯಸ್ಥ ಡಾ ಜಯಂತ ಸರ್ಕಾರ್ ತಿಳಿಸಿದ್ದಾರೆ.////

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');