ನಾಪತ್ತೆ ಪ್ರಕಟಣೆ

0

ಮಹಿಳೆ ನಾಪತ್ತೆ

ಬೆಳಗಾವಿ, ಜೂ.09 : ಬೆಳಗಾವಿಯ ಸಂಭಾಜಿ ಚೆನ್ನಮ್ಮ ನಗರದ ಗೌರಿ ಗಣೇಶ್ ರೆಸಿಡೆನ್ಸಿ ಎಚ್.ಪಿ. ಆಫೀಸ್ ಹತ್ತಿರದ ನಿವಾಸಿಯಾದ ಎರಾ ಬುಷರ ವೈಭವ ಬರ್ಡೆ(ವ.36) ಎಂಬ ಹೆಸರಿನ ಮಹಿಳೆಯು, ಸೋಮವಾರ (ಜೂ.7) ಮದ್ಯಾಹ್ನ 12 ಗಂಟೆಯ ಸುಮಾರಿಗೆ ತಂದೆ ತಾಯಿ ಮನೆಗೆ ಹೋಗಿ ಬರುವುದಾಗಿ ಮನೆಯಿಂದ ತೆರಳಿದ್ದು, ಮನೆಗೆ ಬಾರದೆ ಕಾಣೆಯಾಗಿದ್ದಾರೆಂದು ತಿಲಕವಾಡಿ ಪೆÇೀಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎರಾ ಬುಷರ ವೈಭವ ಬರ್ಡೆ (ವ.36) 5 ಅಡಿ ಎತ್ತರವಿದ್ದು, ದುಂಡು ಮುಖ, ಗೋದಿ ಮೈಬಣ್ಣ, ಉದ್ದ ಮೂಗು, ಎತ್ತರವಾದ ಹಣೆ ಮತ್ತು ಕಪ್ಪು ಕೂದಲು ಹೊಂದಿದ್ದು, ಸದೃಢ ಮೈಕಟ್ಟು ಹೊಂದಿರುತ್ತಾರೆ.
ಕಾಣೆಯಾದ ಮಹಿಳೆಯು ಕಪ್ಪು ಬಣ್ಣದ ಚೂಡಿದಾರ್ ಧರಿಸಿದ್ದು, ಉರ್ದು, ಕನ್ನಡ, ಮರಾಠಿ, ಹಿಂದಿ, ಇಂಗ್ಲಿಷ್ ಭಾಷೆಯನ್ನು ಮಾತನಾಡುತ್ತಾರೆ.
ಈ ಪ್ರಕಾರ ಚಹರೆಯುಳ್ಳ ಪತ್ತೆಯಾದ ಮಹಿಳೆ ಬಗ್ಗೆ ಮಾಹಿತಿ ಸಿಕ್ಕಲ್ಲಿ, ತಿಲಕವಾಡ ಪೆÇೀಲಿಸ್ ಠಾಣೆಯ ದೂರವಾಣಿ ಸಂಖ್ಯೆ: 0831-2405236, ಪೆÇೀಲಿಸ್ ಇನ್ಸ್ಪೆಕ್ಟರ್ ತಿಲಕವಾಡಿ: 9480804052, ಪಿಎಸ್‍ಐ(ಕಾ&ಸು) ತಿಲಕವಾಡಿ: 9480804112, ಪೆÇೀಲಿಸ್ ಕಂಟ್ರೋಲ್ ರೂಮ್ ಬೆಳಗಾವಿ: 0831-2405231 / 2405255 ಅಥವಾ ದೂರುದಾರ 9900757777 ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಬೇಕೆಂದು ತಿಲಕವಾಡಿ ಪೆÇೀಲಿಸ್ ಠಾಣೆಯ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಹಿಳೆ ಮಗು ನಾಪತ್ತೆ

ಬೆಳಗಾವಿ, ಜೂ.09 : ಚಿಲಕುಂದಿಯ ನಿವಾಸಿಯಾದ ಭಾರತಿ ಚಿದಾನಂದ ತಳವಾರ (ವ.32) ಮತ್ತು ಮಗಳು ಖುಷಿ ಚಿದಾನಂದ ತಳವಾರ (ವ.04) ಎಂಬ ಹೆಸರಿನ ತಾಯಿ ಮತ್ತು ಮಗು, ರವಿವಾರ (ಜೂ.6) ರಾತ್ರಿ 10 ಗಂಟೆಯಿಂದ(ಜೂ.7) ಬೆಳಿಗ್ಗೆ 4 ಗಂಟೆಯ ನಡುವಿನ ಅವಧಿಯಲ್ಲಿ ಯಾರಿಗೂ ಹೇಳದೆ ಕೇಳದೆ ಎಲ್ಲಿಯೋ ಹೋಗಿದ್ದು, ಮರಳಿ ಬರದೇ ತಾಯಿ ಮಗಳು ಕಾಣೆಯಾಗಿದ್ದಾರೆಂದು ಕುಲಗೋಡ ಪೆÇೀಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪತ್ತೆಯಾದ ಮಹಿಳೆ ಮಗು ಬಗ್ಗೆ ಮಾಹಿತಿ ಸಿಕ್ಕಲ್ಲಿ, ಕುಲಗೋಡ ಪೆÇೀಲಿಸ್ ಠಾಣೆಗೆ ಸಂಪರ್ಕಿಸಬಹುದು ಎಂದು ಕುಲಗೋಡ ಪೆÇೀಲಿಸ್ ಠಾಣೆಯ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');